ಕುರುಹಿನಶೆಟ್ಟಿ ಸಮಾಜದಿಂದ ರಾಮಮಂದಿರದಲ್ಲಿ ಸತ್ಸಂಗ

ಸೋಮವಾರಪೇಟೆ ರಾಮಮಂದಿರದಲ್ಲಿ ವಿಷ್ಣು ಸಹಸ್ರನಾಮ ನಡೆಯಿತು.
ಸೋಮವಾರಪೇಟೆ ರಾಮಮಂದಿರದಲ್ಲಿ ವಿಷ್ಣು ಸಹಸ್ರನಾಮ ನಡೆಯಿತು.
Published on
ಸೋಮವಾರಪೇಟೆ: ಪಟ್ಟಣದ ಕುರುಹಿನಶೆಟ್ಟಿ ಸಮಾಜದ ವತಿಯಿಂದ ರಾಮಮಂದಿರದಲ್ಲಿ ವೈಕುಂಠ ಏಕಾದಶಿ, ವಿಷ್ಣು ಸಹಸ್ರನಾಮ ಹಾಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ವತಿಯಿಂದ ದಿವ್ಯ ಸತ್ಸಂಗ ಕಾರ್ಯಕ್ರಮ ಗುರುವಾರ ನಡೆಯಿತು.
ದೇವರಿಗೆ ವಿಶೇಷ ಅಲಂಕಾರ, ಸ್ವರ್ಗದ ಬಾಗಿಲ ಪ್ರವೇಶ, ಶ್ರೀ ದೇವರ ದರ್ಶನ ನಡೆಯಿತು. ರಾಮಮಂದಿರದ ಅರ್ಚಕ ಮೋಹನ್ ಮೂರ್ತಿ ಶಾಸ್ತ್ರಿ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿತು.
ಸಂಜೆ ಸೀತಾ ಬಳಗದ ವತಿಯಿಂದ ವಿಷ್ಣು ಸಹಸ್ರನಾಮ, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ದಿವ್ಯ ಸತ್ಸಂಗ ನಡೆಯಿತು. ಸಮಾಜದ ಅಧ್ಯಕ್ಷ ಬಿ.ಎಂ.ರಾಮ್‌ಪ್ರಸಾದ್, ಯುವಕ ಸಂಘದ ಅಧ್ಯಕ್ಷ ಬಿ.ಜಿ.ರವಿ, ಸೀತಾ ಬಳಗದ ಅಧ್ಯಕ್ಷೆ ಯಶೋದಾ, ಆರ್ಟ್ ಆಫ್ ಲಿವಿಂಗ್‌ನ ಶಿಕ್ಷಕಿ ರಾಗಿಣಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net