ಆಲೂರು ಸಿದ್ದಾಪುರ ಪ್ರೌಢಶಾಲೆಯಲ್ಲಿ ಮಕ್ಕಳ ಸಂತೆ

ಆಲೂರುಸಿದ್ದಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ  ಶನಿವಾರ ಆಯೋಜಿಸಿದ್ದ ಮಕ್ಕಳ ಸಂತೆಯಲ್ಲಿ ವ್ಯಾಪಾರ, ವಹಿವಾಟು ನಡೆಸಿದ ವಿದ್ಯಾರ್ಥಿಗಳು.
ಆಲೂರುಸಿದ್ದಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಮಕ್ಕಳ ಸಂತೆಯಲ್ಲಿ ವ್ಯಾಪಾರ, ವಹಿವಾಟು ನಡೆಸಿದ ವಿದ್ಯಾರ್ಥಿಗಳು.
Published on
ಶನಿವಾರಸಂತೆ: ಸಮೀಪದ ಆಲೂರು ಸಿದ್ದಾಪುರ ಸರ್ಕಾರಿ ಪ್ರೌಢಶಾಲೆಯ ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಮತ್ತು ವನಸಿರಿ ಇಕೋ ಕ್ಲಬ್ ವತಿಯಿಂದ ಶನಿವಾರ ಶಾಲೆಯ ಗ್ರಾಮೀಣ ಮಿನಿ ಕ್ರೀಡಾಂಗಣದ ಸಭಾಂಗಣದಲ್ಲಿ ಮಕ್ಕಳ ಸಂತೆಯನ್ನು ಹಮ್ಮಿಕೊಳ್ಳಲಾಗಿತ್ತು.
ಶಾಲೆಯ 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬೆಳಗ್ಗೆ 11 ರಿಂದ ಮಧ್ಯಾಹ್ನ 3ರ ವರೆಗೂ
ಸಂತೆ ನಡೆಸಿದರು. ಮಕ್ಕಳು ತಮ್ಮ ತಮ್ಮ ಮನೆಗಳಲ್ಲಿ ಬೆಳೆದ ವಿವಿಧ ತರಕಾರಿ, ಸೋಪ್ಪು, ಗೆಡ್ಡೆ ಗೆಣಸು, ಸೋರೆಕಾಯಿ, ಕುಂಬಳಕಾಯಿ ಮುಂತಾದವುಗಳನ್ನು ತಂದು ಮಾರಾಟ ಮಾಡಿದರು. ಪಪ್ಪಾಯ, ಬಾಳೆಹಣ್ಣು, ಕಲ್ಲಂಗಡಿ ಹಣ್ಣು, ಸೀಬೆಕಾಯಿಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಇದರ ಜೊತೆಯಲ್ಲಿ ತೆಂಗಿನಕಾಯಿ, ಎಳನೀರುಗಳನ್ನೂ ಮಾರಾಟ ಮಾಡಿದ್ದು ಗಮನ ಸೆಳೆಯಿತು. ತಮ್ಮ ತಮ್ಮ ಮನೆಗಳಲ್ಲೇ ತಯಾರಿಸಿದ ತಿಂಡಿ ತಿನಿಸುಗಳನ್ನು ತಂದಿದ್ದ ಮಕ್ಕಳು ಪಾನಿಪುರಿ, ಬೇಲ್‌ಪುರಿ, ಚುರಿಮುರಿಗಳನ್ನೂ ಮಾರಾಟ ಮಾಡಿದರು. ಬೇಸಿಗೆ ಕಾಲವಾದ್ದರಿಂದ ಕೆಲವು ಮಕ್ಕಳು ಪಾನಕವನ್ನು ತಾವೇ ತಯಾರಿಸಿ ಮಾರಾಟ ಮಾಡುತ್ತಿದ್ದರು. ಪಾಲಕರು ಮತ್ತು ಸ್ಥಳೀಯರು ಮಕ್ಕಳ ಸಂತೆಗೆ ಬಂದು ಖರೀದಿ ಮಾಡಿದರು. ಮಕ್ಕಳು ಗ್ರಾಹಕರನ್ನು ಕೂಗಿ ಕರೆದು ಪೈಪೋಟಿಯಿಂದ ವಹಿವಾಟು ನಡೆಸಿದ್ದು ವಿಶೇಷವಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net