ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸೋಣ

  ಸೋಮವಾರಪೇಟೆ ತಾಲೂಕು ಪ್ರಗತಿಪರ ಮಹಿಳಾ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶಿಸಿದ ಕಲಾವಿದರು.
ಸೋಮವಾರಪೇಟೆ ತಾಲೂಕು ಪ್ರಗತಿಪರ ಮಹಿಳಾ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶಿಸಿದ ಕಲಾವಿದರು.
Published on
ಸೋಮವಾರಪೇಟೆ: ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸುವಲ್ಲಿ ಮಹಿಳೆಯರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆ ಅಧ್ಯಕ್ಷೆ ಚಂದ್ರಿಕಾ ಹೇಳಿದರು.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಒಕ್ಕಲಿಗರ ಸಮುದಾಯಭವನದಲ್ಲಿ ವೇದಿಕೆ ಹಮ್ಮಿಕೊಂಡಿದ್ದ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಾನಪದ ಸಂಸ್ಕೃತಿ ನಮ್ಮ ನೆಲದ ಮೂಲ ಶಕ್ತಿ. ಇಂತಹ ಕಾರ್ಯಕ್ರಮಗಳ ಮೂಲಕ ನಮ್ಮ ಪರಂಪರೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಜವಾಬ್ದಾರಿ ನಮ್ಮದು. ಮಹಿಳೆಯರು ಈ ನಿಟ್ಟಿನಲ್ಲಿ
ಕಾಳಜಿ ವಹಿಸಬೇಕು ಎಂದರು. ಕಾರ್ಯಕ್ರಮದಲ್ಲಿ ವೇದಿಕೆಯ ಸದಸ್ಯರು ಹಳ್ಳಿ ಸೊಬಗನ್ನು ಪ್ರತಿಬಿಂಬಿಸುವ ಜಾನಪದ ನೃತ್ಯಗಳನ್ನು ಮನಮೋಹಕವಾಗಿ ಪ್ರದರ್ಶಿಸಿ ಪ್ರೇಕ್ಷಕರ ಮನಗೆದ್ದರು. ನೃತ್ಯಗಳಲ್ಲಿ ಸಂಕ್ರಾಂತಿಯ ಸಂಭ್ರಮ, ಗ್ರಾಮೀಣ ಬದುಕಿನ ಸೌಂದರ್ಯ, ಕೃಷಿ ಸಂಸ್ಕೃತಿಯ ಮಹತ್ವ ಹಾಗೂ ಜಾನಪದ ಪರಂಪರೆಯ ವೈಶಿಷ್ಟ್ಯಗಳು ಜೀವಂತವಾಗಿ ಮೂಡಿಬಂದವು. ಮಹಿಳೆಯರು ಧರಿಸಿದ್ದ ಗ್ರಾಮೀಣ ಶೈಲಿಯ ಉಡುಪುಗಳು ಹಾಗೂ ಜಾನಪದ ವೇಷಭೂಷಣಗಳು ಕಾರ್ಯಕ್ರಮಕ್ಕೆ ಕಳೆ ತಂದವು.ಜಾನಪದ ಮತ್ತು ಭಾವಗೀತೆಗಳು ರಂಜನೀಯವಾಗಿದ್ದವು.
ವೇದಿಕೆ ಕಾರ್ಯದರ್ಶಿ ಅನಿತಾ ಅನಂದ್, ಉಪಾಧ್ಯಕ್ಷೆ ಹಂಸಾ ಭರತ್, ಖಚಾಂಚಿ ಝಾನ್ಸಿ ಗಿರೀಶ್,
ಮತ್ತು ಪದಾಧಿಕಾರಿಗಳು ಇದ್ದರು. ಸದಸ್ಯರು ಸಂಕ್ರಾಂತಿ ಹಬ್ಬದ ಸಂದೇಶವಾಗಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net