ಹೊಸ ಉಡುಗೆ ತೊಟ್ಟು ಸಂಕ್ರಾಂತಿ ಪರಿಕರಗಳೊಂದಿಗೆ ಗೌಡ ಸಮಾಜದಲ್ಲಿ ಸೇರಿದ ಮಹಿಳೆಯರು ತಾವು ತಮ್ಮ ಮನೆಗಳಿಂದ ತಂದಿದ್ದ ವಿವಿಧ ಧಾನ್ಯಗಳೊಂದಿಗೆ ಪೂಜೆ ನಡೆಸಿ ಸೂರ್ಯದೇವರಲ್ಲಿ ವಿಶೇಷವಾಗಿ ಪ್ರಾರ್ಥಿಸಿದರು. ಗೌಡ ಮಹಿಳಾ ಸಂಘದ ಅಧ್ಯಕ್ಷೆ ಕರಂದ್ಲಾಜೆ ಕಲಾ ಇತರರಿದ್ದಾರೆ.
ಕುಶಾಲನಗರ: ಹಿಂದೂಗಳ ಹೊಸ ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿಯನ್ನು ಕುಶಾಲನಗರದ ಅರೆಭಾಷೆ ಗೌಡ ಸಮಾಜದ ಮಹಿಳೆಯರು ಸಂಭ್ರಮದಿಂದ ಆಚರಿಸಿದರು.
ಹೊಸ ಉಡುಗೆ ತೊಟ್ಟು ಸಂಕ್ರಾಂತಿ ಪರಿಕರಗಳೊಂದಿಗೆ ಗೌಡ ಸಮಾಜದಲ್ಲಿ ಸೇರಿದ ಮಹಿಳೆಯರು ತಾವು ತಮ್ಮ ಮನೆಗಳಿಂದ ತಂದಿದ್ದ ವಿವಿಧ ಧಾನ್ಯಗಳೊಂದಿಗೆ ಪೂಜೆ ನಡೆಸಿ, ಸೂರ್ಯದೇವರಲ್ಲಿ ವಿಶೇಷವಾಗಿ ಪ್ರಾರ್ಥಿಸಿದರು.
ಗೌಡ ಮಹಿಳಾ ಸಂಘದ ಅಧ್ಯಕ್ಷೆ ಕರಂದ್ಲಾಜೆ ಕಲಾ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕಾಳೇರಮ್ಮನ ಲತಾ ಹಾಗೂ ನಂಗಾರು ಅನಿತಾ ಮಾತನಾಡಿ, ಸಂಕ್ರಾಂತಿ ಹಿಂದೂಗಳ ಪಾಲಿಗೆ ಹೊಸ ವರ್ಷದ ಮೊದಲ ಹಬ್ಬವಾಗಿದ್ದು, ಆಹಾರ ಧಾನ್ಯಗಳನ್ನು ಬೆಳೆದು ಕೊಡುವ ಭೂಮಿತಾಯಿ ಹಾಗೂ ಬೆಳೆಯ ಬೆಳವಣಿಗೆಗೆ ಮೂಲ ಪ್ರೇರಕ ಶಕ್ತಿಯಾದ ಸೂರ್ಯದೇವರನ್ನು ಸಂಕ್ರಾಂತಿ ಸಂದರ್ಭ ವಿಶೇಷವಾಗಿ ಪೂಜಿಸಬೇಕಿದೆ ಹಾಗೂ ಪ್ರಾರ್ಥಿಸಬೇಕಿದೆ.
ಗೌಡ ಸಂಸ್ಕೃತಿಯ ವಿವಿಧ ಆಚರಣೆಗಳ ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಸಂಕ್ರಾಂತಿ ಆಚರಿಸಲಾಗಿದೆ. ಮುಂದಿನ ವರ್ಷಗಳಲ್ಲಿ ಇನ್ನೂ ವಿಶೇಷವಾಗಿ ಆಚರಿಸಲಾಗುವುದು ಎಂದರು.
ಸಂಘದ ಪದಾಧಿಕಾರಿಗಳಾದ ಕುದುಪಜೆ ದೇವಕಿ, ಪೊಡನೋಳನ ಪ್ರಮೀಳಾ, ರೂಪಾ ಗಣೇಶ್, ಕುಕ್ಕನೂರು ಪ್ರಮೀಳಾ, ಕಾಳೇರಮ್ಮನ ವಿಂಧ್ಯಾ, ಸುಕೃತ ಹಾಗೂ ಸುಮುಖ ಸಂಘದ ಸದಸ್ಯರಿದ್ದರು.