ರೋಟರಿ ಮಡಿಕೇರಿ ವತಿಯಿಂದ ಶ್ರೀ ರಾಜರಾಜೇಶ್ವರಿ ಶಾಲೆ ಮತ್ತು ಶ್ರೀ ರಮಾದೇವಿ ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯಕ್ಕೆ ದಹನ ಯಂತ್ರ (ಸ್ಯಾನಿಟರಿ ನ್ಯಾಪ್ಕಿನ್ ಇನ್ಸಿನರೇಟರ್) ವಿತರಿಸಲಾಯಿತು. ಲಲಿತಾ ರಾಘವನ್, ಸುದಯ್ ನಾಣಯ್ಯ, ಅನಿಲ್ ಕೃಷ್ಣಾನಿ, ಮಲ್ಲಿಗೆ ಪೈ, ಈಶ್ವರ್ ಭಟ್ ಇದ್ದರು.
ರೋಟರಿ ಮಡಿಕೇರಿ ವತಿಯಿಂದ ನಗರದ ಶ್ರೀ ರಾಜರಾಜೇಶ್ವರಿ ಶಾಲೆ ಮತ್ತು ಶ್ರೀ ರಮಾದೇವಿ ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯಕ್ಕೆ ಗುರುವಾರ ದಹನ ಯಂತ್ರ (ಸ್ಯಾನಿಟರಿ ನ್ಯಾಪ್ಕಿನ್ ಇನ್ಸಿನರೇಟರ್) ವಿತರಿಸಲಾಯಿತು. ಈ ವೇಳೆ ಮಾತನಾಡಿದ ರೋಟರಿ ಮಡಿಕೇರಿ ಅಧ್ಯಕ್ಷೆ ಲಲಿತಾ ರಾಘವನ್ ರೋಟರಿ ಸಂಸ್ಥೆಯು ಸಾಮಾಜಿಕ ಕಳಕಳಿ, ಶಿಕ್ಷಣ, ಆರೋಗ್ಯ ಜಾಗೃತಿ, ವೃತ್ತಿಪರ ಕೌಶಲ್ಯ, ಸ್ವಚ್ಛತೆ ಮತ್ತು ಪರಿಸರದ ಬಗ್ಗೆ ಹೆಚ್ಚು ಕಾಳಜಿ ಹೊಂದಿದೆ. ದಹನ ಯಂತ್ರ ವಿತರಿಸುವ ಮೂಲಕ ಇದನ್ನು ಸಾಬೀತು ಪಡಿಸಿದೆ ಎಂದರು.
ರೋಟರಿ ಮಡಿಕೇರಿ ಸಮುದಾಯ ಸೇವಾ ವಿಭಾಗದ ನಿರ್ದೇಶಕ ಸುದಯ್ ನಾಣಯ್ಯ, ಯುವಸೇವಾ ನಿರ್ದೇಶಕ ಅನಿಲ್ ಕೃಷ್ಣಾನಿ, ಮಲ್ಲಿಗೆ ಪೈ, ಈಶ್ವರ್ ಭಟ್, ಶ್ರೀ ರಾಜರಾಜೇಶ್ವರಿ ಶಾಲೆಯ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಶ್ರೀ ರಮಾದೇವಿ ವಸತಿ ನಿಲಯದ ಸಿಬ್ಬಂದಿ ಹಾಜರಿದ್ದರು.