ಕೊಡಗನ್ನು ಬಂದರು ನಗರಿ ಮಂಗಳೂರಿಗೆ ಸಂಪರ್ಕಿಸುವ ರಾಷ್ಟಿçÃಯ ಹೆದ್ದಾರಿ ೨೭೫ರ ಸಂಪಾಜೆ-ಕುಶಾಲನಗರ ಮಾರ್ಗ ಎಲ್ಲಾ ದೃಷ್ಟಿಯಿಂದಲೂ ಮಹತ್ವ ಪಡೆದುಕೊಂಡಿರುವ ರಸ್ತೆಯಾಗಿದೆ. ದೊಡ್ಡ ಪ್ರಮಾಣದಲ್ಲಿ ಕಾಫಿ ರಫ್ತು ಮಾಡಲು ಇದೇ ಹೆದ್ದಾರಿ ಬಳಕೆ ಆಗುತ್ತದೆ. ಶೈಕ್ಷಣಿಕ, ಆರೋಗ್ಯ, ಧಾರ್ಮಿಕ ಕ್ಷೇತ್ರಗಳು, ಪ್ರವಾಸ ಹೀಗೆ ವಿವಿಧ ರೀತಿಯಲ್ಲಿ ಈ ಮಾರ್ಗ ಕೊಡಗು, ದಕ್ಷಿಣ ಕನ್ನಡ ಮಾತ್ರವಲ್ಲದೆ ಅಕ್ಕಪಕ್ಕದ ಉಳಿದ ಜಿಲ್ಲೆಗಳಿಗೂ ಹೆಚ್ಚು ಪ್ರಯೋಜನಕಾರಿ ಆಗಿದೆ. ಸಂಪಾಜೆ ಘಾಟ್ ರಸ್ತೆ ಎಂದೇ ಗುರುತಿಸಲಾಗುವ ಈ ಮಾರ್ಗ ರಾಜ್ಯದ ಅಪಾಯಕಾರಿ ಮಾರ್ಗಗಳಲ್ಲಿ ಒಂದು ಎಂದು ಕೂಡ ಗುರುತಿಸಲಾಗುತ್ತದೆ.