ಸೋಮವಾರಪೇಟೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ಮಾತನಾಡಿ, ಬದುಕಿನಲ್ಲಿ ಗುರಿ ಸಾಧನೆಗೆ ಆಸಕ್ತಿ, ಶ್ರಮ ಹಾಗೂ ಶ್ರದ್ಧೆ ಇದ್ದಾಗ ಮಾತ್ರ ಸಾಧನೆ ಸಾಧ್ಯ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಶಿಕ್ಷಣ ಸಂಸ್ಥೆ ಸಾಧಿಸಿರುವ ಸಾಧನೆಗಾಗಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಶಿಕ್ಷಕರು, ಬಂಧುಗಳು ಹಾಗೂ ಪಾಲಕರನ್ನು ಅಭಿನಂದಿಸಿದರು.ನಟಿ ಆರ್.ಸಿಂಚನಾ , ಮುಖ್ಯ ಶಿಕ್ಷಕಿ ಸಿಸ್ಟರ್ ಜೋವಿತಾ ವಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ.ಲತೀಫ್, ಪಿಡಿಒ ಲೋಕೇಶ್, ಬಿಜು ವರ್ಗೀಸ್, ಆರ್.ಸೆಲ್ವರಾಜು ಇದ್ದರು.