ಮಕ್ಕಳಿಗೆ ಸಾಹಿತ್ಯದ ಆಸಕ್ತಿ ಮೂಡಿಸಿ

ಸುಂಟಿಕೊಪ್ಪದ ಮಂಜನಾಥಯ್ಯ ಮೀನಾಕ್ಷಮ್ಮ ಸಭಾಂಗಣದಲ್ಲಿ ಕಸಾಪ ಕೊಡಗು, ಕುಶಾಲನಗರ ತಾಲೂಕು ಘಟಕ ಆಯೋಜಿಸಿದ್ದ ರಾಮಮೂರ್ತಿ ದತ್ತಿ ಮತ್ತು ದಿವಗಂತ ಪಿ.ಎಸ್.ಬೀರಪ್ಪ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮವನ್ನು ಅತಿಥಿಗಳು ಉದ್ಘಾಟಿಸಿದರು. ಮುನೀರ್ ಅಹ್ಮದ್, ಎಸ್.ಜಿ. ಶ್ರೀನಿವಾಸ್ , ಎಂ.ಎಂ.ಕಾಳಪ್ಪ ಇತರರು ಇದ್ದರು.
ಸುಂಟಿಕೊಪ್ಪದ ಮಂಜನಾಥಯ್ಯ ಮೀನಾಕ್ಷಮ್ಮ ಸಭಾಂಗಣದಲ್ಲಿ ಕಸಾಪ ಕೊಡಗು, ಕುಶಾಲನಗರ ತಾಲೂಕು ಘಟಕ ಆಯೋಜಿಸಿದ್ದ ರಾಮಮೂರ್ತಿ ದತ್ತಿ ಮತ್ತು ದಿವಗಂತ ಪಿ.ಎಸ್.ಬೀರಪ್ಪ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮವನ್ನು ಅತಿಥಿಗಳು ಉದ್ಘಾಟಿಸಿದರು. ಮುನೀರ್ ಅಹ್ಮದ್, ಎಸ್.ಜಿ. ಶ್ರೀನಿವಾಸ್ , ಎಂ.ಎಂ.ಕಾಳಪ್ಪ ಇತರರು ಇದ್ದರು.
Published on
ಸುಂಟಿಕೊಪ್ಪ: ಶಾಲಾ, ಕಾಲೇಜು ಹಂತದಲ್ಲೇ ಸಾಹಿತ್ಯ ಕುರಿತು ಆಸಕ್ತಿ ಹೆಚ್ಚಿಸುವ ಮೂಲಕ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಜಿಲ್ಲಾ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಎಸ್ ಐ ಮುನೀರ್ ಅಹ್ಮದ್ ಹೇಳಿದರು. ಇಲ್ಲಿನ ಮಂಜನಾಥಯ್ಯ ಮೀನಾಕ್ಷಮ್ಮ ಸಭಾಂಗಣದಲ್ಲಿ ಕಸಾಪ ಕೊಡಗು, ಕುಶಾಲನಗರ ತಾಲೂಕು ಘಟಕ ಆಯೋಜಿಸಿದ್ದ ರಾಮಮೂರ್ತಿ ದತ್ತಿ ಮತ್ತು ದಿವಗಂತ ಪಿ.ಎಸ್.ಬೀರಪ್ಪ ದತ್ತಿ ನಿಧಿ ಉಪನ್ಯಾಸದಲ್ಲಿ ಮಾತನಾಡಿದರು. ಮಕ್ಕಳಲ್ಲಿ ಸಾಹಿತ್ಯ ಅಭಿರುಚಿಯನ್ನು ಹೆಚ್ಚಿಸುವ ಕೆಲಸವಾಗಬೇಕು. ಭಾಷೆಗೆ ನಮ್ಮಲ್ಲಿರುವ ಭಾವನೆ, ಕಲ್ಪನೆ, ವಿಚಾರ, ಅನುಭವಗಳನ್ನು ತುಂಬಿ ಮೂರ್ತರೂಪ ನೀಡಿದಾಗ ಅದು ಕಾವ್ಯ ಕಥೆ,ಕಾದಂಬರಿ,ಪ್ರಬಂಧ ಸಾಹಿತ್ಯ ವಾಗಲಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಶಾಲನಗರ ತಾಲೂಕು ಕಸಾಪ ನಿರ್ದೇಶಕ ಎಂ.ಎಂ.ಕಾಳಪ್ಪ, ಮಕ್ಕಳ ಬಗ್ಗೆ ಯಾವುದೇ ಕಾರಣಕ್ಕೂ ಅವಸರದ ತೀರ್ಮಾನ ಸಲ್ಲದು
ಎಂದರು. ಮಕ್ಕಳು ಕೀಳರಿಮೆ ದೂರವಿಟ್ಟು ಸಮಾಜಮುಖಿಯಾಗಿ ಬಾಳಬೇಕು. ಮಾನವ ಸಂಘ ಜೀವಿ. ಆದಾಯದಲ್ಲಿ ಕಿಂಚಿತ್ತು ಅಂಶವನ್ನು ಸಮಾಜಕ್ಕಾಗಿ ನೀಡಬೇಕೆಂದು ಅವರು ಸಲಹೆ ನೀಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಸಮಾಜದಲ್ಲಿ ಮಹಿಳೆಯರಿಗೂ ಸಮಾನ ಅವಕಾಶಗಳಿವೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು.
ಮುಖ್ಯ ಅತಿಥಿ ಎಸ್.ಜಿ. ಶ್ರೀನಿವಾಸ್ ಮಾತನಾಡಿ, ಶಾಲಾ ಕಾಲೇಜು ವಿದ್ಯಾರ್ಥಿಗಳು ಸಾಹಿತ್ಯ ಕೃತಿಗಳನ್ನು ವಾಚಿಸುವ ಮೂಲಕ ಹೆಚ್ಚು ಸಾಹಿತ್ಯ ಜ್ಞಾನವನ್ನು ಪಡೆಯಬೇಕು ಎಂದರು. ಕುಶಾಲನಗರ ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿದರು.
ಸನ್ಮಾನ:
ಇದೇ ಸಂದರ್ಭ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಾದ ಜೆ.ಎಸ್.ಪೂರ್ವಿಕಾ, ಅಪ್ರಿನಾ ಮತ್ತು ಎಸ್.ಕಾವ್ಯಾ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಹೋಬಳಿ ಘಟಕದ ಅಧ್ಯಕ್ಷ ಪಿ.ಎಫ್.ಸಬಾಸ್ಟೀನ್ ವಹಿಸಿದ್ದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಬಾಲಕೃಷ್ಣ, ಪ್ರಭಾರ ಮುಖ್ಯ ಶಿಕ್ಷಕ ಪಿ.ಇ. ನಂದಾ, ಕುಶಾಲನಗರ ಕಸಾಪ ನಿರ್ದೇಶಕಿ ಗೀತಾ ಬಸಪ್ಪ, ಲೀಲಾ ಮೇದಪ್ಪ, ಬಿ.ಸಿ.ದಿನೇಶ್,ರಾಜಲಕ್ಷ್ಮಿ, ಕರಿಬಸಪ್ಪ ಅಡ್ಮನಿ, ಸುನಿಲ್ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net