

ಪ್ರಮುಖ ಮುಖ್ಯಾಂಶಗಳು
ಗ್ರಾಮೀಣ ಬಡ ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಜತೆಗೆ ಅವರ ಬದುಕಿಗೆ ದಾರಿ ತೋರಿಸುವ ನಿಟ್ಟಿನಲ್ಲಿ ಯೂನಿಯನ್ ಬ್ಯಾಂಕ್‌ನ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಗಳು ಸಾಕಷ್ಟು ಕೊಡುಗೆ ನೀಡುತ್ತಿವೆ. ಕೊಡಗಿನಲ್ಲಿ ಕುಶಾಲನಗರ ತಾಲೂಕು ಕೂಡಿಗೆಯಲ್ಲಿರುವ ಆರ್‌ಎಸ್‌ಇಟಿಐ ಕೂಡ ಜಿಲ್ಲೆಯ ಪಾಲಿಗೆ ಆಶಾಕಿರಣವಾಗಿದ್ದು, ಸಾವಿರಾರು ಯುವಕರು ಈ ಕೇಂದ್ರದ ಪ್ರಯೋಜನ ಪಡೆದುಕೊಂಡಿದ್ದಾರೆ. ಈ ಮೂಲಕ ಸ್ಥಳೀಯವಾಗಿ ಉದ್ಯೋಗವಕಾಶದ ಮಾರ್ಗವನ್ನೂ ತೋರಿಸಿದಂತಾಗಿದೆ.
ನಾನು ಯೂನಿಯನ್ ಬ್ಯಾಂಕ್‌ನ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಕೇಂದ್ರದ ಮೂಲಕ ಟೈಲರಿಂಗ್ ತರಬೇತಿ ಪಡೆದುಕೊಂಡು ಸ್ವಾವಲಂಬಿ ಆಗಿದ್ದೇನೆ. ಕಳೆದ 2 ವರ್ಷಗಳಿಂದ ನನ್ನದೇ ಆದ ಟೈಲರಿಂಗ್ ಅಂಗಡಿ ತೆರೆದ್ದಿದ್ದೇನೆ. ಟೈಲರಿಂಗ್‌ಗೆ ಸಂಬAಧಿಸಿದ ವಸ್ತುಗಳ ಮಾರಾಟ ಕೂಡ ಮಾಡುತ್ತೇನೆ. ಪತಿಯೂ ಟೈಲರ್ ಆಗಿದ್ದು ಅವರ ಪ್ರೋತ್ಸಾಹವೂ ಇದೆ. ಅವರು ಕೂಡ ಪ್ರತ್ಯೇಕ ಅಂಗಡಿ ಇಟ್ಟುಕೊಂಡಿದ್ದಾರೆ. ಆರ್‌ಎಸ್‌ಇಟಿಐ ಕಡೆಯಿಂದಲೂ ಸಹಾಯ ಸಿಗುತ್ತಿದೆ.