ರಾಜ್ಯ ಹೆದ್ದಾರಿ 244ರ ಕೊಡ್ಲಿಪೇಟೆ-ಹೆಬ್ಬಾಲೆ ರಸ್ತೆಯಲ್ಲಿ ಕಿ.ಮೀ. 16.70 ರಿಂದ 30ರ ವರೆಗೆ, ಗೋಪಾಲಪುರ, ಬಾಣಾವರ, ಹೆಬ್ಬಾಲೆ ಮಾರ್ಗವಾಗಿ ಮುಳ್ಳೂರು ಹಾಗೂ ಮಾಲಂಬಿ (ಆಯ್ದ ಭಾಗಗಳು) ಸಂಪರ್ಕಿಸುವ ಸೋಮವಾರಪೇಟೆ ತಾಲೂಕಿನ ರಸ್ತೆ ಅಭಿವೃದ್ಧಿಗೆ 6 ಕೋಟಿ ರೂ., ರಾಜ್ಯ ಹೆದ್ದಾರಿ 89ರ ಮಡಿಕೇರಿ-ಕುಟ್ಟ ರಸ್ತೆಯಲ್ಲಿ ಚೈನೇಜ್ 4ರಿಂದ 8, 10.50ರಿಂದ 12 ಹಾಗೂ 21ರಿಂದ 24.43ರವರೆಗಿನ ಭಾಗಗಳಲ್ಲಿ, ಕುಶಾಲನಗರ ಮತ್ತು ಮಡಿಕೇರಿ ತಾಲೂಕುಗಳನ್ನು ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ 10 ಕೋಟಿ ರೂ., ರಾಜ್ಯ ಹೆದ್ದಾರಿ 90ರ ತಲಕಾವೇರಿ ರಸ್ತೆ ಕಿ.ಮೀ. 51 ರಿಂದ 61 ರವರೆಗಿನ ವಿರಾಜಪೇಟೆ ತಾಲೂಕಿನ ಆಯ್ದ ಭಾಗಗಳ ರಸ್ತೆ ಅಭಿವೃದ್ಧಿಗೆ 6 ಕೋಟಿ ರೂ. ಕೇಂದ್ರ ಸರ್ಕಾರ ಮಂಜೂರು ಮಾಡಿದೆ.