ಸಾಧಕರನ್ನು ಸನ್ಮಾನಿಸಿದ ರೋಟರಿ ಮಿಸ್ಟಿಹಿಲ್ಸ್

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಪಿ.ಕೆ. ರಾಮಕೃಷ್ಣ, ದಿಲನ್ ಚಂಗಪ್ಪ, ಬಿ.ಕೆ. ಕಾರ್ಯಪ್ಪ, ಪಿ.ಆರ್. ರಾಜೇಶ್ ಮತ್ತಿತರರು ಇದ್ದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಪಿ.ಕೆ. ರಾಮಕೃಷ್ಣ, ದಿಲನ್ ಚಂಗಪ್ಪ, ಬಿ.ಕೆ. ಕಾರ್ಯಪ್ಪ, ಪಿ.ಆರ್. ರಾಜೇಶ್ ಮತ್ತಿತರರು ಇದ್ದರು.
Published on
ಮಡಿಕೇರಿ:
ಸಾಧಕರು ಮತ್ತು ಸೇವಾ ಕಾರ್ಯಗಳ ಯಶಸ್ಸಿನ ಕಥೆಗಳು ರೋಟರಿಯಲ್ಲಿ ದಾಖಲೆಯಾಗಿಸಬೇಕು. ಈ ಮೂಲಕ ಇಂಥ ಕಥೆಗಳು ಮತ್ತಷ್ಟು ಸಮಾಜಸೇವೆಗೆ ಜನರಿಗೆ ಪ್ರೇರಣೆಯಾಗಬೇಕು ಎಂದು ರೋಟರಿ ಜಿಲ್ಲೆ 3181ರ ಪ್ರಾಂತಪಾಲ ಪಿ.ಕೆ. ರಾಮಕೃಷ್ಣ ಹೇಳಿದರು. ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಬುಧವಾರ ಸಂಜೆ ಆಯೋಜಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.
ರೋಟರಿ ಸಂಸ್ಥೆಗಳು ಪ್ರತೀ ವರ್ಷ ಸಾಕಷ್ಟು ಸೇವಾ ಕಾರ್ಯಯೋಜನೆಗಳ ಮೂಲಕ ನೂರಾರು ಜನರಿಗೆ ಜೀವನಾಧಾರ ಕಲ್ಪಿಸುತ್ತಿವೆ. ಇಂಥ ಯೋಜನೆಗಳನ್ನು ಯಶಸ್ವಿ ಕಥೆಯ ದಾಖಲೆಯಾಗಿಸಿದ್ದೇ ಆದಲ್ಲಿ ಮತ್ತಷ್ಟು ಮಂದಿಗೆ ಇದರಿಂದ ಸಾಮಾಜಿಕ ಸೇವಾ ಕಾರ್ಯಕ್ಕೆ ಸ್ಫೂರ್ತಿ ದೊರಕುವಂತಾಗುತ್ತದೆ. ಭಾರತದಲ್ಲಿ ಪ್ರತೀ ವರ್ಷವೂ 30 ಸಾವಿರ ಕೋಟಿ ರೂ.ಗಳಷ್ಟು ಸಿ.ಎಸ್.ಆರ್ ಫಂಡ್ ವಿವಿಧ ಸಂಸ್ಥೆಗಳಿAದ ಸಾಮಾಜಿಕ ಸೇವಾ ಕಾರ್ಯಗಳಿಗೆ ಮೀಸಲಾಗಿದೆ. ಇಂಥ ಆರ್ಥಿಕ ಮೂಲವನ್ನು ರೋಟರಿ ಸಂಸ್ಥೆಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ರೋಟರಿ ವಲಯ 6 ರ ಸಹಾಯಕ ಪ್ರಾಂತಪಾಲ ದಿಲನ್ ಚಂಗಪ್ಪ ಮಾತನಾಡಿ, ಇದೇ ತಿಂಗಳಾAತ್ಯದಲ್ಲಿ ಮೈಸೂರಿನಲ್ಲಿ ರೋಟರಿ ಜಿಲ್ಲಾ ಸಮಾವೇಶ ಆಯೋಜಿತವಾಗಿದ್ದು 2 ಸಾವಿರಕ್ಕೂ ಅಧಿಕ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ರೋಟರಿ ಮಿಸ್ಟಿ ಹಿಲ್ಸ್ ವಿವಿಧ ಸೇವಾ ಯೋಜನೆಗಳ ಮೂಲಕ ಅತ್ಯಂತ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯಾಗಿದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾವಾಡಿಯಲ್ಲಿ 69 ಗೋವುಗಳನ್ನು ಸಲಹುತ್ತಿರುವ ಕಾಮಧೇನು ಗೋಶಾಲಾ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟಿ ರಾಮಚಂದ್ರಭಟ್ ಗೋವಿನ ಸೇವೆ ಮಾಡುವುದು ಮಾತೆಯ ಸೇವೆಗೆ ಸಮಾನವಾಗಿದೆ. ಗೋವು ನಿತ್ಯ ನಿರಂತರ ಕಲ್ಪವೃಕ್ಷವಾಗಿದ್ದು, ಗೋವುಗಳನ್ನು ಸಂರಕ್ಷಿಸಿದ್ದೇ ಆದಲ್ಲಿ ಆ ಪುಣ್ಯದ ಕಾರ್ಯ ಸಂರಕ್ಷಕನನ್ನು ಕಾಪಾಡುತ್ತದೆ. ಅಮ್ಮನ ಮತ್ತು ಗೋವಿನ ಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಗೋವಿಲ್ಲದ ಜೀವನವನ್ನು ಕಲ್ಪಿಸಲೇ ಸಾಧ್ಯವಾಗುವುದಿಲ್ಲ. ಹೀಗಾಗಿ ಗೋವಿನ ಪೋಷಣೆ, ಪಾಲನೆಗೆ ಪ್ರತೀಯೋರ್ವರೂ ಮನಸ್ಸು ಮಾಡಬೇಕೆಂದರು.
ಸನ್ಮಾನದ ಗೌರವ ಸ್ವೀಕರಿಸಿ ಮಾತನಾಡಿದ ತಾಯಿಯನ್ನು ಸ್ಕೂಟರ್ ನಲ್ಲಿ 1 ಲಕ್ಷ ಕಿ.ಮೀ. ದೇಶಪರ್ಯಟನೆ ಮಾಡಿಸಿದ ಮೈಸೂರಿನ ಆಧುನಿಕ ಶ್ರವಣಕುಮಾರ ಖ್ಯಾತಿಯ ಡಿ. ಕೃಷ್ಣಕುಮಾರ್, ತಂದೆತಾಯಿಯರೇ ಮಾತನಾಡುವ ದೇವರಾಗಿದ್ದಾರೆ. ಮಕ್ಕಳ ಪಾಲನೆ ಪೋಷಣೆಯಲ್ಲಿ ತಾಯಿ ಅನುಭವಿಸುವ ಪರಿಶ್ರಮವನ್ನು ಸ್ಮರಿಸಿಕೊಂಡು ಅಮ್ಮನ ಕಷ್ಟಸುಖಕ್ಕೆ ಸ್ಪಂದಿಸುವ ಮನೋಭಾವ ಮಕ್ಕಳಲ್ಲಿರಬೇಕು. ಜೀವನದ ಸಂಧ್ಯಾಕಾಲದಲ್ಲಿ ಪೋಷಕರಿಗೆ ಮಕ್ಕಳ ಹಿಚವಾದ ಮಾತುಗಳು ಅಪಾರ ಶಕ್ತಿ ಮತ್ತು ವೃದ್ಯಾಪ್ಯಕ್ಕೆ ಗೌರವ ತರಬಲ್ಲವು ಎಂದರು.
ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ಮಡಿಕೇರಿಯ ಪೊಲೀಸ್ ಸಿಬ್ಬಂದಿ ರಾಮಪ್ಪ ಅವರನ್ನು ಕೂಡ ಇದೇ ವೇಳೆ ಸನ್ಮಾನಿಸಲಾಯಿತು.
ರೋಟರಿ ವಲಯ ಸೇನಾನಿ ಕಾರ್ಯಪ್ಪ, ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಬಿ.ಕೆ. ಕಾರ್ಯಪ್ಪ, ಮುಂದಿನ ಸಾಲಿನ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್. ರಾಜೇಶ್ ವೇದಿಕೆಯಲ್ಲಿದ್ದರು.
ಪ್ರಮೋದ್ ಕುಮಾರ್ ರೈ ಸಂಪಾದಕತ್ವದಲ್ಲಿ ಪ್ರಕಟಿತ ರೋಟೋ ಮಿಸ್ಟ್ ವಾರ್ತಾ ಸಂಚಿಕೆಯನ್ನು ಅನಾವರಣಗೊಳಿಸಲಾಯಿತು. ಮುಂದಿನ ಸಾಲಿನ ಕಾರ್ಯದರ್ಶಿ ಡಾ. ಚೇತನ್ ಶೆಟ್ಟಿ, ರೋಟರಿ ಪ್ರಮುಖರಾದ ಹೆಚ್.ಟಿ. ಅನಿಲ್, ಅನಿತಾ ಪೂವಯ್ಯ, ರಶ್ಮಿ, ಕಪಿಲ್ ಕುಮಾರ್ ಇದ್ದರು.
ಇದೇ ಸಂದರ್ಭ ರೋಟರಿ ಮಿಸ್ಟಿ ಹಿಲ್ಸ್ನಲ್ಲಿ ಸಾಧನೆ ಮಾಡಿದ ಸದಸ್ಯರಾದ ಡಾ. ಚೆರಿಯಮನೆ ಪ್ರಶಾಂತ್, ಬಿ.ಜಿ. ಅನಂತಶಯನ, ಹೆಚ್.ಟಿ. ಅನಿಲ್, ಶರ್ವರಿ ಕಿರಣ್ ರೈ, ಅಭಿನ್ ರೈ ಅವರುಗಳನ್ನು ಗೌರವಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net