ರೋಟರಿ ಸಮುದಾಯ ದಳ ಪದಗ್ರಹಣ

Rotary Community Corps Inauguration
Rotary Community Corps Inauguration
Published on

ಪ್ರಮುಖ ಮುಖ್ಯಾಂಶಗಳು

  • ರೋಟರಿ ಸಮುದಾಯ ದಳ ಪದಗ್ರಹಣ
  • 15 ಸದಸ್ಯರಿಂದ ಪದಗ್ರಹಣ
  • ಮೇಕೇರಿಯಲ್ಲಿ ನಡೆದ ಕಾರ್ಯಕ್ರಮ
ಮಡಿಕೇರಿ:
ರೋಟರಿ ಸಮುದಾಯ ದಳದ 2025-26 ನೇ ಸಾಲಿನ ಪದಗ್ರಹಣ ಸಮಾರಂಭ ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು. ಈ ಸಂದರ್ಭ ಮಾತನಾಡಿದ ರೋಟರಿ ಮಿಸ್ಟಿಹಿಲ್ಸ್ ಸಮುದಾಯ ಸೇವೆಗಳ ಜಿಲ್ಲಾ ಉಪಾಧ್ಯಕ್ಷ ದೇವಣಿರ ತಿಲಕ್ ರೋಟರಿ ಸಂಸ್ಥೆ ಬೆಳೆದು ಬಂದ ದಾರಿ ಹಾಗೂ ಸೇವಾ ಚಟುವಟಿಕೆಗಳ ಸಮಗ್ರ ಮಾಹಿತಿ ನೀಡಿದರು. ಸ್ಥಾಪಕಾಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ ಸಮಾಜದ ಸಂಕಷ್ಟಗಳಿಗೆ ಸ್ಫಂದಿಸುವ ಕಾಳಜಿಯನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಸಮಾಜದ ಋಣವನ್ನು ತೀರಿಸುತ್ತಾ ಒಟ್ಟಾಗಿ ಸೇವಾಕಾರ್ಯದಲ್ಲಿ ಮುಂದುವರಿಯೋಣವೆAದರು.
ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ರತ್ನಾಕರ ರೈ ಮಾತನಾಡಿ ರೋಟರಿ ಸಮುದಾಯದಳದ ಎಲ್ಲ ಸಮಾಜಮುಖಿ ಕಾರ್ಯಗಳಿಗೆ ಎಲ್ಲ ರೀತಿಯ ಸಹಕಾರವನ್ನು ರೋಟರಿ ಮಿಸ್ಟಿಹಿಲ್ಸ್ ನೀಡಲಿರುವುದಾಗಿ ಭರವಸೆ ನೀಡಿದರು. ರೋಟರಿ ಮಿಸ್ಟಿಹಿಲ್ಸ್ ಕಾರ್ಯದರ್ಶಿ ಕಾರಿಯಪ್ಪ, ನಿಕಟಪೂರ್ವ ಅಧ್ಯಕ್ಷ್ಷೆ ಅನಿತಾ ಪೂವಯ್ಯ, ರೋಟರಿ ಸಮುದಾಯದಳದ ಉಸ್ತುವಾರಿಗಳಾದ ಲವಿನ್, ರೋಟರಿ ಮಿಸ್ಟಿಹಿಲ್ಸ್ ಪ್ರಮುಖರಾದ ವಿನೋದ್ ಅಂಬೇಕಲ್ಲು, ಕಟ್ಟೆಮನೆ ಸೋನಾಜಿತ್, ಪ್ರಮೋದ್ ರೈ, ಶಂಕರ್ ಪೂಜಾರಿ, ಶ್ರೀಹರಿ ರಾವ್ ಮತ್ತಿತರರು ಇದ್ದರು.
2025-26ನೇ ಸಾಲಿನ ರೋಟರಿ ಸಮುದಾಯದಳದ ಅಧ್ಯಕ್ಷರಾಗಿ ಮೇಕೇರಿಯ ಟಿ.ಕೆ. ರವೀಂದ್ರ, ಕಾರ್ಯದರ್ಶಿಗಳಾಗಿ ಜೆ. ಹರೀಶ್ (ವಿಜು) ಅಧಿಕಾರ ವಹಿಸಿಕೊಂಡರು. ರೋಟರಿ ಸಮುದಾಯ ದಳದ ಮಹಿಳಾ ಸದಸ್ಯರು ಸೇರಿದಂತೆ ಸ್ಥಳೀಯ 15 ಸದಸ್ಯರು ಪದಗ್ರಹಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net