ಕೊಡಗಿನ ರಸ್ತೆಗಳ ಸದ್ಯದ ಪರಿಸ್ಥಿತಿ ಮಳೆಗಾಲದಲ್ಲೂ ರಾಜಕೀಯ ಪಕ್ಷಗಳ ಮಧ್ಯೆ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ದಿನಂಪ್ರತಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದರೆ, ಜನಸಾಮಾನ್ಯರು ವ್ಯವಸ್ಥೆ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಜಿಲ್ಲೆಯ ಬಹುತೇಕ ರಸ್ತೆಗಳಲ್ಲಿ ವಾಹನ ಸವಾರಿ ಹರಸಾಹಸದಂತಾಗಿದ್ದು, ಡಾಂಬರು ಕೊರತೆಯಿಂದ ರಸ್ತೆ ದುರಸ್ತಿ ಸಾಧ್ಯವಾಗುತ್ತಿಲ್ಲ ಎನ್ನುವ ಸಮರ್ಥನೆ ಆಡಳಿತ ವರ್ಗದ ಕಡೆಯಿಂದ ಬರುತ್ತಿದೆ.