ವಿರಾಜಪೇಟೆ ಮಾಕುಟ್ಟ ಹೆದ್ದಾರಿ ಕಾಮಗಾರಿಗೆ ಚಾಲನೆ, ನೂತನ ರಸ್ತೆ ಉದ್ಘಾಟನೆ.

ವಿರಾಜಪೇಟೆ ಶಾಸಕ  ಎ ಎಸ್ ಪೊನ್ನಣ್ಣ ವಿರಾಜಪೇಟೆ ಮಾಕುಟ್ಟ ಹೆದ್ದಾರಿ ಕಾಮಗಾರಿಗೆ ಚಾಲನೆ, ನೂತನ ರಸ್ತೆ  ಉದ್ಘಾಟನೆ ನೆರವೇರಿಸಿದರು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಮಾಜಿ ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಉಪಾಧ್ಯಕ್ಷೆ ಫಸಿಯಾ ತಬ್ಸುಂ, ಮಾಜಿ ಸದಸ್ಯರು ರಾಜೇಶ್ ಪದ್ಮನಾಭ, ರಾಫಿ,  ಮತೀನ್, ಅತಿಫ್ ಮನ್ನ, ರಜಿನಿಕಾಂತ್, ಪೃಥ್ವಿನಾಥ್  ಇದ್ದರು.

Published on
ವಿರಾಜಪೇಟೆ. : ವಿರಾಜಪೇಟೆಯಿಂದ ಕೇರಳ ರಾಜ್ಯಕ್ಕೆ ತೆರಳುವ ಮಾಕುಟ್ಟ ಹೆದ್ದಾರಿಯ ಭೂಮಿ ಪೂಜೆ ಹಾಗೂ ಕಾಮಗಾರಿ ಪೂರ್ಣಗೊಂಡ ರಸ್ತೆಯ ಉದ್ಘಾಟನಾ ಕಾರ್ಯಕ್ರಮವನ್ನು, ಶನಿವಾರ ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ ಎಸ್ ಪೊನ್ನಣ್ಣ ರವರು ನೆರವೇರಿಸಿದರು.
ಮಾಕುಟ್ಟ ಚೆಕ್ಪೋಸ್ಟ್ ನ ವಾಟೆಕೊಲ್ಲಿ ಹಾಗೂ ಪೆರುಂಬಾಡಿ ಬಳಿ ಭೂಮಿ ಪೂಜೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕರು ವಾಹನ ದಟ್ಟನೆ ಹೆಚ್ಚಾಗಿ ಇರುವ ಈ ರಸ್ತೆಯ ಅಭಿವೃದ್ಧಿ ತನ್ನ ಪ್ರಥಮ ಆದ್ಯತೆಯಾಗಿದ್ದು,ಕಳೆದ ವರ್ಷದ ತೀವ್ರ ಮಳೆಯಿಂದ ಈ ರಸ್ತೆ ಹಾನಿಗೀಡಾಗಿದ್ದನ್ನು ಪರಿಗಣಿಸಿ, ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಲು ಈ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಒಟ್ಟು ₹ 25 ಕೋಟಿ ಅನುದಾನದ ಈ ಕಾಮಗಾರಿ ಪೈಕಿ, ₹ 2 ಕೋಟಿ 80 ಲಕ್ಷದ ಮುಕ್ತಾಯಗೊಂಡ ಕಾಮಗಾರಿಯ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಮಾಜಿ ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಉಪಾಧ್ಯಕ್ಷೆ ಫಸಿಯಾ ತಬ್ಸುಂ, ಮಾಜಿ ಸದಸ್ಯರು ರಾಜೇಶ್ ಪದ್ಮನಾಭ, ರಾಫಿ, ಮತೀನ್, ಅತಿಫ್ ಮನ್ನ, ರಜಿನಿಕಾಂತ್, ಪೃಥ್ವಿನಾಥ್, ಸ್ಥಾಯಿ ಸಮಿತಿಯ ಅಧ್ಯಕ್ಷ ಜಲಿಲ್, ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷ ಹನೀಫ್, ರಾಜೇಶ್, ಶಶಿಧರನ್,ಜೋಕಿಮ್,ಮಂಜುನಾಥ್, ಮಂಜು ದೇವಯ್ಯ, ಅನಿಲ್, ಚೆಕು, ಹರೀಶ್, ವರ್ಗಿಸ್, ಅರ್ಜಿ ಪಂಚಾಯಿತಿ ಅಧ್ಯಕ್ಷೆ ಫಾತಿಮಾ, ಜಾಫರ್, ಸಿರಾಜ್, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net