ಋಗ್ ಉಪಕರ್ಮ

ಕುಶಾಲನಗರ ಶ್ರೀ ಚೌಡೇಶ್ವರಿ ದೇವಸ್ಥಾನ ದೇವಾಂಗ ಸಂಘದ ವತಿಯಿಂದ ಋಗ್ ಉಪಕರ್ಮ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ನಡೆಯಿತು. ಡಿ.ವಿ. ರಾಜೇಶ್, ಡಿ.ಟಿ. ವಿಜೇಂದ್ರ, ಡಿ.ವಿ. ಚಂದ್ರು (ರಾಕಿ), ಕೃಷ್ಣಕುಮಾರ್, ಡಿ.ಜಿ ಪ್ರದೀಪ್, ಡಿ.ಸಿ. ಜಗದೀಶ್ ಮತ್ತಿತರರು ಇದ್ದರು.

Published on
ಕುಶಾಲನಗರ:
ಕುಶಾಲನಗರ ಶ್ರೀ ಚೌಡೇಶ್ವರಿ ದೇವಸ್ಥಾನ ದೇವಾಂಗ ಸಂಘದ ವತಿಯಿಂದ ಋಗ್ ಉಪಕರ್ಮ (ಜನಿವಾರದ ಹಬ್ಬ) ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಗುರುವಾರ ಶ್ರಧ್ಧಾಭಕ್ತಿಯಿಂದ ನೆರವೇರಿತು. ಇದರ ಅಂಗವಾಗಿ ದೇವಿಗೆ ಅಭಿಷೇಕ, ಪೂಜೆ, ಹೋಮ, ಹವನ ಹಾಗೂ ಸಾಮೂಹಿಕ ಪೂಜಾ ಕೈಂಕರ್ಯಗಳು ನೆರವೇರಿದವು.
ಕಾರ್ಯಕ್ರಮದಲ್ಲಿ ದೇವಾಂಗ ಸಂಘದ ಅಧ್ಯಕ್ಷ ಡಿ.ವಿ. ರಾಜೇಶ್, ಗೌರವ ಅಧ್ಯಕ್ಷ ಡಿ.ಟಿ. ವಿಜೇಂದ್ರ, ಉಪಾಧ್ಯಕ್ಷ ಡಿ.ವಿ. ಚಂದ್ರು (ರಾಕಿ), ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ್, ಖಜಾಂಚಿ ಡಿ.ಜಿ ಪ್ರದೀಪ್, ಪ್ರಮುಖರಾದ ಡಿ.ಸಿ. ಜಗದೀಶ್, ಮಹಿಳಾ ಸಂಘದ ಅಧ್ಯಕ್ಷೆ ಪದ್ಮ ಮಹೇಶ್, ಶುಭ ರವಿಕುಮಾರ್, ಶೋಭಾ ಅನಿಲ್, ರೂಪ ಕುಮಾರ್, ಶೋಭ ಸೋಮಶೆಟ್ಟಿ, ಗೀತಾ ಸೋಮಶೇಖರ್, ಯುವಕ ಸಂಘದ ಅಧ್ಯಕ್ಷ ಡಿ.ಎಸ್. ಯತಿರಾಜ್, ಪ್ರಧಾನ ಕಾರ್ಯದರ್ಶಿ ಡಿ.ಪಿ. ಗಣೇಶ್ ಹಾಗೂ ಇತರ ಪ್ರಮುಖರು ಇದ್ದರು. ಈ ಸಂದರ್ಭದಲ್ಲಿ ಎಲ್ಲಾ ಕುಲಬಾಂಧವರಿಗೂ ಜನಿವಾರ ವಿತರಿಸಲಾಯಿತು.
ಪೂಜಾ ವಿಧಿವಿಧಾನವನ್ನು ದೇವಾಲಯದ ಪ್ರಧಾನ ಅರ್ಚಕ ಪ್ರಸನ್ನ ಭಟ್ ನೆರವೇರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net