ಮಕ್ಕಳ ಸಂತೆಯಲ್ಲಿ ಚಿಣ್ಣರ ವ್ಯಾಪಾರ ಜೋರು

ಸೋಮವಾರಪೇಟೆ ದೊಡ್ಡಮಳ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ಮಕ್ಕಳ ಸಂತೆಯಲ್ಲಿ ವಿದ್ಯಾರ್ಥಿಗಳು ತರಕಾರಿ, ತಿಂಡಿ ತಿನಿಸುಗಳನ್ನು ಮಾರಾಟ ಮಾಡಿದರು. ಆಶಾ, ಸವಿತಾ, ಮೋಹನ್ ಕುಮಾರಿ, ಪಲ್ಲವಿ ಇದ್ದರು.
ಸೋಮವಾರಪೇಟೆ ದೊಡ್ಡಮಳ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ಮಕ್ಕಳ ಸಂತೆಯಲ್ಲಿ ವಿದ್ಯಾರ್ಥಿಗಳು ತರಕಾರಿ, ತಿಂಡಿ ತಿನಿಸುಗಳನ್ನು ಮಾರಾಟ ಮಾಡಿದರು. ಆಶಾ, ಸವಿತಾ, ಮೋಹನ್ ಕುಮಾರಿ, ಪಲ್ಲವಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದೊಡ್ಡಮಳ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜನೆ
ಸೋಮವಾರಪೇಟೆ: ಮಕ್ಕಳ ದಿನಾಚರಣೆ ಅಂಗವಾಗಿ ದೊಡ್ಡಮಳ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಮಕ್ಕಳ ಸಂತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶಾಲಾ ಆವರಣ ಮಿನಿ ಮಾರುಕಟ್ಟೆಯಂತೆ ರೂಪಾಂತರಗೊಂಡಿತ್ತು. ಮಕ್ಕಳು ವ್ಯಾಪಾರಿಗಳಂತೆ ಕಾಣಿಸಿಕೊಂಡು ತಾವು ತಂದ ತಿಂಡಿ ತಿನಿಸು, ತರಕಾರಿ, ಹಣ್ಣು ಹಂಪಲುಗಳನ್ನು ಮಾರಾಟ ಮಾಡಿ, ಹಣ ಮಾಡಿಕೊಂಡರು.
ತರಕಾರಿ ಮಾರಾಟದ ಸ್ಟಾಲ್‌ಗಳಲ್ಲಿ ಮನೆಯ ಹಿತ್ತಲಿನಲ್ಲಿ ಬೆಳೆದ ಸೌತೆಕಾಯಿ, ಬದನೆಕಾಯಿ, ಮೆಣಸಿನಕಾಯಿ, ಪುದೀನ, ಕೊತ್ತಂಬರಿ ಮೊದಲಾದವು ಗಮನ ಸೆಳೆದವು. ಪಾಲಕರು ಮುಗಿಬಿದ್ದು ತರಕಾರಿಯನ್ನು ಖರೀದಿಸಿದರು.
ಮಕ್ಕಳ ಸಂತೆಯ ಮೂಲಕ ಮಕ್ಕಳ ವ್ಯಾಪಾರ ಕೌಶಲ, ಸಂವಹನ ಸಾಮರ್ಥ್ಯ, ಹೊಣೆಗಾರಿಕೆ, ಹಣದ ಮೌಲ್ಯ ಹಾಗೂ ಬಾಕಿ-ಪಾವತಿ ಪದ್ಧತಿ ಬಗ್ಗೆ ಅರಿಯುವ ಅವಕಾಶ ಮಕ್ಕಳಿಗೆ ದೊರಕಿತು.
ಮುಖ್ಯಶಿಕ್ಷಕಿ ಆಶಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಕ್ಕಳ ದಿನವನ್ನು ಪಾಠಶಾಲೆಯ ಪಠ್ಯಕ್ಕೆ ಮಾತ್ರ ಸೀಮಿತಗೊಳಿಸದೇ, ಮಕ್ಕಳಲ್ಲಿ ಜೀವನ ಕೌಶಲಗಳನ್ನು ಬೆಳೆಸುವ ರೀತಿಯಲ್ಲಿ ಆಚರಿಸುವುದೇ ನಮ್ಮ ಉದ್ದೇಶ. ಮಕ್ಕಳ ಸಂತೆ ಎಲ್ಲರಿಗೂ ಹರ್ಷ ನೀಡುತ್ತಿದೆ. ಮಕ್ಕಳು ತಮ್ಮ ಕೈಚಳಕ, ಭಾವನೆ ಮತ್ತು ಪ್ರತಿಭೆಯನ್ನು ಇಲ್ಲಿ ಪ್ರದರ್ಶಿಸುತ್ತಿದ್ದು ಇದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಎಸ್‌ಡಿಎಂಸಿ ಅಧ್ಯಕ್ಷ ಸತೀಶ್, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಎಂ.ಗೋಪಾಲಕೃಷ್ಣ, ಎಸ್‌ಡಿಎಂಸಿ ಉಪಾಧ್ಯಕ್ಷೆ ದಿವ್ಯಾ, ಸದಸ್ಯರಾದ ಆರೀಫ್, ಗಾನವಿ, ಫಾತಿಮಾ, ಸತ್ಯ, ಸರಸ್ವತಿ ಸಹಶಿಕ್ಷಕರಾದ ಸವಿತಾ, ಮೋಹನಕುಮಾರಿ, ಪಲ್ಲವಿ, ಪಾಲಕರು ಇದ್ದರು. ಮಕ್ಕಳಿಂದ ನೃತ್ಯ, ಗಾಯನ ಹಾಗೂ ಇನ್ನಿತರ ಮನರಂಜನಾ ಕಾರ್ಯಕ್ರಮಗಳು ನಡೆದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net