ಭುವನೇಶ್ವರಿ ಸನ್ನಿಧಿಯಲ್ಲಿ ಧಾರ್ಮಿಕ ಕಾರ್ಯ

ಸೋಮವಾರಪೇಟೆ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ತ್ರೈಲೋಕ್ಯ ಮೋಹನ ಗೌರಿ ಹೋಮ ನಡೆಯಿತು.
ಸೋಮವಾರಪೇಟೆ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ತ್ರೈಲೋಕ್ಯ ಮೋಹನ ಗೌರಿ ಹೋಮ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಆಟಿ ಮಾಸದ ಪ್ರಯುಕ್ತ ವಿಶೇಷ ಪೂಜೆ

ಸೋಮವಾರಪೇಟೆ:

ಇಲ್ಲಿನ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಶ್ರೀ ಭುವನೇಶ್ವರಿ ದೇವಿಯ ಸನ್ನಿಧಿಯಲ್ಲಿ ಕಳೆದ ಒಂದು ತಿಂಗಳಿನಿಂದ ಆಟಿ ಮಾಸದ ಪ್ರಯುಕ್ತ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮಗಳಿಗೆ ವಿವಿಧ ಪೂಜೆ, ಹೋಮ-ಹವನಗಳೊಂದಿಗೆ ಭಾನುವಾರ ತೆರೆ ಎಳೆಯಲಾಯಿತು.

ಬೆಳಗ್ಗೆ 9 ಗಂಟೆಗೆ ದೇವಿಯ ಸನ್ನಿಧಿಯಲ್ಲಿ ಮನೀಶ್ ತಂತ್ರಿಗಳ ನೇತೃತ್ವದಲ್ಲಿ ಅರ್ಚಕರಾದ ಉನ್ನಿಕೃಷ್ಣನ್ ಹಾಗೂ ವೆಂಕಟೇಶ್ ಅವರು ತ್ರೈಲೋಕ್ಯ ಮೋಹನ ಗೌರಿ ಹೋಮ ಮತ್ತು ವಿಶೇಷ ಪೂಜೆ ಕಾರ್ಯಗಳನ್ನು ನೆರವೇರಿಸಿದರು.
ಜು.17ರಂದು ಆಟಿ ಮಾಸದ ಪ್ರಯುಕ್ತ ವಿಶೇಷ ಗಣಪತಿ ಹೋಮದೊಂದಿಗೆ ಪೂಜೆ ಕಾರ್ಯಕ್ರಮಗಳು ಆರಂಭಗೊಂಡಿದ್ದವು. ಪ್ರತಿದಿನ ಸಂಜೆ 6ರಿಂದ 8 ಗಂಟೆವರೆಗೆ ಭಗವತಿ ಸೇವೆ ಹಾಗೂ ದುರ್ಗಾದೀಪ ನಮಸ್ಕಾರ ಪೂಜೆ ನಡೆದವು.
ದೇವಾಲಯ ಸಮಿತಿ ಅಧ್ಯಕ್ಷ ವಿನೋದ್ ಹಾಗೂ ಪದಾಧಿಕಾರಿಗಳ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net