ದಕ್ಷಿಣ ಕನ್ನಡ ಹಾಗೂ ಕೇರಳ ರಾಜ್ಯದ ಗಡಿ ಪ್ರದೇಶವಾದ ಕೊಡಗು ಜಿಲ್ಲೆಯ ಪೆರಾಜೆ ಗ್ರಾಮದಲ್ಲಿ ಪಯಸ್ವಿನಿ ನದಿಯ ತಟದಲ್ಲಿರುವ ಶಾಸ್ತ್ರವು ದೇವರು ಭಕ್ತರ ಆರಾಧ್ಯ ದೇವರು. ಭಾಗಮಂಡಲದ ತಲಕಾವೇರಿ ಸೀಮೆಗೆ ಒಳಪಡುವ ಪೆರಾಜೆ ಶ್ರೀ ಶಾಸ್ತಾವು ಕ್ಷೇತ್ರದ ವ್ಯಾಪ್ತಿಯಲ್ಲಿ 18 ವರ್ಷಗಳ ಹಿಂದೆ ಅನ್ನಪೂರ್ಣೇಶ್ವರಿ ಭಜನಾ ಮಂಡಳಿ ಆರಂಭವಾಯಿತು. ಪ್ರತಿ ಶನಿವಾರ ಸಂಜೆ ನಿಗದಿತ ಮನೆ, ಮನೆಗಳಲ್ಲಿ ಭಜನೆ ನಡೆಸಿಕೊಂಡು ಬರುತ್ತಿದ್ದ ಭಜನಾ ತಂಡದ ಸದಸ್ಯರ ಅನ್ನಪೂರ್ಣೇಶ್ವರಿ ದೇವಿಗೆ ಶಾಶ್ವತ ನೆಲೆ ಕಲ್ಪಿಸಬೇಕೆಂಬ ಸಂಕಲ್ಪದಿಂದ ದೇವಸ್ಥಾನ ಸ್ಥಾಪನೆಯಾಗಿದೆ. ಸುಳ್ಯದ ದತ್ತ ಜಯಂತಿ ಚಾರಿಟಬಲ್ ಟ್ರಸ್ಟ್‌ನ ಸದಸ್ಯ ಪಿ.ಎಲ್.ಶ್ರೀನಾಥ್ ಮಾರ್ಗದರ್ಶನದಲ್ಲಿ ಸ್ಥಳದ ಮಾಲೀಕ ಮೇದಪ್ಪ ಬಂಗಾರ ಕೋಡಿ ಅವರು ದಾನವಾಗಿ ನೀಡಿದ ಜಾಗದಲ್ಲಿ ಮಂದಿರ ನಿರ್ಮಾಣಗೊಂಡಿದೆ.