ವಿರೋಧ ಪಕ್ಷದ ಆರೋಪದಿಂದ ಸಿಟ್ಟಾದ ಬಿಜೆಪಿಯ ಸತೀಶ್, ಅನಿತಾಪೂವಯ್ಯ, ಅರುಣ್ ಶೆಟ್ಟಿ, ಸವಿತಾ ರಾಕೇಶ್ ಎಸ್‌ಡಿಪಿಐ ಸದಸ್ಯರ ವಿರುದ್ಧ ಮುಗಿಬಿದ್ದರು. ಕೇವಲ ಪ್ರಚಾರಕ್ಕಾಗಿ ನೀವು ಈ ರೀತಿ ಮಾಡುತ್ತಿದ್ದೀರಿ. ಪ್ರತಿ ಬಾರಿಯೂ ಸಭೆಯ ದಾರಿ ತಪ್ಪಿಸುವ ಕೆಲಸ ನಿಮ್ಮಿಂದ ಆಗುತ್ತಿದೆ. ನಿಮಗೆ ಮಡಿಕೇರಿ ಅಭಿವೃದ್ಧಿ ಬೇಕಾಗಿಲ್ಲ. ಹಾಗಾಗಿ ನೀವುಗಳು ಪೂರ್ವಸಿದ್ಧತಾ ಸಭೆಗೂ ಆಗಮಿಸಿಲ್ಲ. ಆ ಸಭೆಗಳಿಗೆ ಯಾಕೆ ತಪ್ಪಿಸಿಕೊಂಡಿರಿ ? ಎಂದು ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ಉಪಾಧ್ಯಕ್ಷ ಮಹೇಶ್ ಜೈನಿ ಮಡಿಕೇರಿ ಅಭಿವೃದ್ಧಿಗೋಸ್ಕರ ಉತ್ತಮ ಬಜೆಟ್ ರೂಪಿಸಲಾಗಿದೆ. ಇದನ್ನು ಮಂಡಿಸಲು ಕರೆದಿರುವ ಒಳ್ಳೆಯ ಸಭೆ ಹಾಳು ಮಾಡಬೇಡಿ ಎಂದು ಹೇಳಿ, ಅಧ್ಯಕ್ಷರಿಗೆ ಅನಾರೋಗ್ಯದ ಕಾರಣ ತಾವೇ ಬಜೆಟ್ ಮಂಡಿಸುವುದಾಗಿ ಬಜೆಟ್ ಪ್ರತಿ ಓದಲು ಮುಂದಾಗುತ್ತಿದ್ದAತೆಯೇ ವಿರೋಧ ಪಕ್ಷದ ಸದಸ್ಯರು ಮತ್ತೆ ಗದ್ದಲ ಶುರು ಮಾಡಿದರು.