ಹಾರಂಗಿಗೆ ಕಡಿಮೆಯಾದ ಒಳಹರಿವು

ಹಾರಂಗಿಗೆ ಕಡಿಮೆಯಾದ ಒಳಹರಿವು
ಹಾರಂಗಿಗೆ ಕಡಿಮೆಯಾದ ಒಳಹರಿವು
Published on

ಮಡಿಕೇರಿ:

ಹಾರಂಗಿ ಜಲಾಶಯಕ್ಕೆ ಒಳಹರಿವು ಕಡಿಮೆ ಆಗಿದ್ದು, ಗುರುವಾರ ಅಣೆಕಟ್ಟೆಗೆ 4,133 ಕ್ಯೂಸೆಕ್ ನೀರು ಹರಿದುಬರುತ್ತಿತ್ತು. ನದಿಗೆ 5 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಪ್ರಸ್ತುತ 2,858.7 ಅಡಿ ನೀರಿದೆ.

ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 11.43 ಮಿ.ಮೀ. ಮಳೆಯಾಗಿದೆ.ಜನವರಿಯಿಂದ ಇಲ್ಲಿಯವರೆಗೆ 1211.78 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2218.12 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ 17.45 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 4.90 ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ 10.38 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ 12.85 ಮಿ.ಮೀ. ಹಾಗೂ ಕುಶಾಲನಗರ ತಾಲೂಕಿನಲ್ಲಿ 11.55 ಮಿ.ಮೀ. ಸರಾಸರಿ ಮಳೆಯಾಗಿದೆ.
ಮಡಿಕೇರಿ 20.20, ನಾಪೋಕ್ಲು 4.30, ಸಂಪಾಜೆ 25.50, ಭಾಗಮಂಡಲ 19.80, ವಿರಾಜಪೇಟೆ 3.70, ಅಮ್ಮತ್ತಿ 6.10, ಹುದಿಕೇರಿ 28.10, ಶ್ರೀಮಂಗಲ 9.90, ಪೊನ್ನಂಪೇಟೆ 2.60, ಬಾಳೆಲೆ 0.90, ಸೋಮವಾರಪೇಟೆ 7.70, ಶನಿವಾರಸಂತೆ 4.60 ಹಾಗೂ ಶಾಂತಳ್ಳಿ ಹೋಬಳಿಯಲ್ಲಿ ಸರಾಸರಿ 21.90 ಮಿ.ಮೀ. ಮಳೆ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net