ಕೊಡಗು ಜಿಲ್ಲೆಯ ಪ್ರತಿಷ್ಟಿತ ಕ್ಲಬ್‌ಗಳಲ್ಲೊಂದಾದ ಮಡಿಕೇರಿಯ ಕಾಸ್ಮೋಪಾಲಿಟನ್ ಕ್ಲಬ್ ನೂತನ ಅಧ್ಯಕ್ಷರಾಗಿ ಕಿರಿಯಮಾಡ ರತನ್ ತಮ್ಮಯ್ಯ ಆಯ್ಕೆಯಾಗಿದ್ದಾರೆ.
ಶನಿವಾರ (ಮಾ.21) ನಡೆದ ಆಡಳಿತ ಮಂಡಳಿ ಸಭೆಯಲ್ಲಿ 2 ವರ್ಷಗಳ ಅವಧಿಗೆ ರತನ್ ತಮ್ಮಯ್ಯ ಅವರನ್ನು ಅಧ್ಯಕ್ಷರನ್ನಾಗಿ, ಮುಕ್ಕಾಟೀರ ಸಂಜು ಪೊನ್ನಪ್ಪ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಮತ್ತು ಸಂಜಯ್ ಹೆಚ್. ಎಲ್ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
121 ವರ್ಷಗಳ ಸುಧೀರ್ಘ ಇತಿಹಾಸಿವಿರುವ ಕಾಸ್ಮೋಪಾಲಿಟನ್ ಕ್ಲಬ್ ನಲ್ಲಿ 240 ಸದಸ್ಯರಿದ್ದಾರೆ. ರತನ್ ತಮ್ಮಯ್ಯ ರೋಟರಿ ಸಂಸ್ಥೆಯ ವಿವಿಧ ಹುದ್ದೆಗಳಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ.