ಗೋಣಿಕೊಪ್ಪಲಿನಲ್ಲಿ ರಾಮನವಮಿ ಸಂಭ್ರಮ

ಗೋಣಿಕೊಪ್ಪಲು ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ರಾಮನವಮಿ ಆಚರಿಸಲಾಯಿತು. ಅಮೃತ್‌ರಾಜ್, ಎಂ.ಎಸ್. ಸುಬ್ರಮಣಿ, ಉಮೇಶ್, ಅಮ್ಮತ್ತೀರ ಸುರೇಶ್ ಮತ್ತಿತರರು ಇದ್ದರು.
ಗೋಣಿಕೊಪ್ಪಲು ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ರಾಮನವಮಿ ಆಚರಿಸಲಾಯಿತು. ಅಮೃತ್‌ರಾಜ್, ಎಂ.ಎಸ್. ಸುಬ್ರಮಣಿ, ಉಮೇಶ್, ಅಮ್ಮತ್ತೀರ ಸುರೇಶ್ ಮತ್ತಿತರರು ಇದ್ದರು.
Published on
ಗೋಣಿಕೊಪ್ಪಲು:
ಶ್ರೀ ರಾಮನವಮಿ ಪ್ರಯುಕ್ತ ಗೋಣಿಕೊಪ್ಪಲು ನಗರ ಹಿಂದೂ ಪರ ಸಂಘಟನೆಗಳು ಶುಕ್ರವಾರ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದರು. ಉಮಾಮಹೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಶ್ರೀ ರಾಮ ಸ್ತೋತ್ರ ಪಠಿಸಿ ಸಮಾಜದ ಸುಭಿಕ್ಷೆಗೆ ಪ್ರಾರ್ಥಿಸಿದರು. ನಂತರ ನೆರದವರಿಗೆ ಸಿಹಿ ಹಂಚಲಾಯಿತು.
ಈ ಸಂದರ್ಭ ವಿಶ್ವ ಹಿಂದೂ ಪರಿಷತ್ ಪೊನ್ನಂಪೇಟೆ ತಾಲೂಕುÀ ಅಧ್ಯಕ್ಷ ಅಮೃತ್‌ರಾಜ್, ಉಪಾಧ್ಯಕ್ಷ ಎಂ.ಎಸ್. ಸುಬ್ರಮಣಿ, ಕಾರ್ಯದರ್ಶಿ ಉಮೇಶ್, ಮಾಜಿ ಕಾರ್ಯದರ್ಶಿ ಅಮ್ಮತ್ತೀರ ಸುರೇಶ್, ಗೋಣಿಕೊಪ್ಪಲು ನಗರ ಘಟಕ ಕಾರ್ಯದರ್ಶಿ ಕೆ.ವಿ. ಸುರೇಶ್, ಸಂಘ ಪರಿವಾರದ ಪ್ರಮುಖರಾದ ನೆಲ್ಲೀರ ಚಲನ್, ಸುರೇಶ್ ರೈ, ರಾಜೇಶ್ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net