ರಕ್ಷಾ ಬಂಧನದಿಂದ ಭ್ರಾತೃತ್ವ ವೃದ್ಧಿ

 ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪರಸ್ಪರ ರಾಖಿ ಕಟ್ಟಿ ಶುಭಾಷಯ ವಿನಿಮಯ ಮಾಡಿಕೊಂಡರು.
ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪರಸ್ಪರ ರಾಖಿ ಕಟ್ಟಿ ಶುಭಾಷಯ ವಿನಿಮಯ ಮಾಡಿಕೊಂಡರು.
Published on

ರಕ್ಷಾ ಬಂಧನ ಆಚರಣೆಯಿಂದ ಭ್ರಾತೃತ್ವ ವೃದ್ಧಿಯಾಗಲಿದೆ ಎಂದು ಸೇವಾ ಭಾರತಿ ಜಿಲ್ಲಾಧ್ಯಕ್ಷ ಚಂದ್ರನ್ ಹೇಳಿದರು.

ವಿರಾಜಪೇಟೆ ಕಾವೇರಿ ಪದವಿ ಹಾಗೂ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಕ್ಷಾ ಬಂಧನವು ರಕ್ತ ಸಂಬಂಧವನ್ನೂ ಮೀರಿ ಸಹೋದರತೆಯನ್ನು ಬಿತ್ತುವ ಆಚರಣೆಯಾಗಿದೆ. ಸಾಮರಸ್ಯ ವೃದ್ಧಿಯಾಗಿ ಸಮಾಜದ ಪ್ರಗತಿಗೆ ಮುನ್ನುಡಿ ಬರೆಯಲಿದೆ ಎಂದರು. ರಕ್ಷಾಬಂಧನ ಕೇವಲ ಒಂದು ದಿನದ ಹಬ್ಬವಾಗದೇ ಭಾವನೆಗಳನ್ನು ಬೆಸೆಯುವ ಸಂಭ್ರಮವಾಗಿದೆ ಎಂದರು. ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಪರಸ್ಪರ ಸಹಪಾಠಿಗಳನ್ನು ರಕ್ಷಣೆ ಮಾಡುತ್ತ, ಉತ್ತಮ ಸಂಬಂಧ ವೃದ್ಧಿಸಿಕೊಂಡು, ಜ್ಞಾನ ಸಂಪಾದನೆಗೆ ಸ್ಪರ್ಧಾತ್ಮಕವಾಗಿ ಮುಂದುವರಿಯಬೇಕು ಎಂದು ತಿಳಿಸಿದರು. ಯುವಜನರು ದೇಶದ ಪ್ರಗತಿಗಾಗಿ ಏನನ್ನಾದರೂ ಕೊಡುಗೆ ನೀಡುವ ಸಂಕಲ್ಪದಿಂದ ಮುಂದುವರಿದರೆ ಆದರ್ಶ ಜೀವನ ಕಟ್ಟಿಕೊಳ್ಳಬಹುದು ಎಂದರು.
ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಜಿ. ವೀಣಾ ಮಾತನಾಡಿ, ರಕ್ಷಾ ಬಂಧನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ ಎಂದರು. ಪ್ರತಿಯೊಬ್ಬ ಸಹೋದರಿಯೂ ಸಮಾಜದ ದುಷ್ಟಶಕ್ತಿಗಳಿಂದ ರಕ್ಷಣೆ ಬೇಡಲು ತನ್ನ ಸಹೋದರನಿಗೆ ರಾಖಿ ಕಟ್ಟುತ್ತಾಳೆ. ಇದು ಭ್ರಾತತ್ವ ಪ್ರೇಮವನ್ನು ಉಜ್ವಲಗೊಳಿಸುವ ಸಂಕೇತವಾಗಿದೆ ಎಂದವರು ಹೇಳಿದರು. ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಂ.ಕೆ.ಪದ್ಮಾ ಅವರು ರಕ್ಷಾ ಬಂಧನದ ಸಂದೇಶ ತಿಳಿಸಿದರು. ಉಪನ್ಯಾಸಕರಾದ ರಾಘವೇಂದ್ರ , ದಮಯಂತಿ , ಗಾಯತ್ರಿ , ಅಕ್ಷಿತಾ ನಾಯ್ಕ, ಅನುಪಮಾ, ಸುನಿಲ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net