ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್‌ಗೆ ರಾಜೇಶ್ ಅಧ್ಯಕ್ಷ

ಪಿ.ಆರ್.ರಾಜೇಶ್
ಪಿ.ಆರ್.ರಾಜೇಶ್
Published on
ಮಡಿಕೇರಿ: ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ನೂತನ ಅಧ್ಯಕ್ಷರಾಗಿ ಪೂಳಕಂಡ ರಾಜೇಶ್ ಮತ್ತು ಕಾರ್ಯದರ್ಶಿಯಾಗಿ ಡಾ.ಜಿ.ಡಿ.ಚೇತನ್, ನೂತನ ವಲಯ ಸೇನಾನಿಯಾಗಿ ಪೊನ್ನಚ್ಚನ ಮಧುಸೂದನ್ ಅವರನ್ನು ಆಯ್ಕೆ ಮಾಡಲಾಗಿದೆ.
ಜು.4ರಂದು ಮಡಿಕೇರಿ ಕೆಳಗಿನ ಗೌಡ ಸಮಾಜದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದೆ.
ಬೆಂಗಳೂರಿನ ರೋಟರಿ ಜಿಲ್ಲೆ 3191ರ ಮಾಜಿ ಸಹಾಯಕ ಪ್ರಾಂತಪಾಲ ಪ್ರಕಾಶ್ ಬೆಳವಾಡಿ ಪ್ರದಗ್ರಹಣ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಸಹಾಯಕ ಪ್ರಾಂತಪಾಲ ಎಚ್.ಎಸ್.ವಸಂತ್ ಕುಮಾರ್, ನಿಕಟಪೂರ್ವ ಅಧ್ಯಕ್ಷ ರತ್ನಾಕರ್ ರೈ, ಕಾರ್ಯದರ್ಶಿ ಬಿ.ಕೆ.ಕಾರ್ಯಪ್ಪ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ರೋಟರಿ ಮಿಸ್ಟಿ ಹಿಲ್ಸ್ ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net