ಕೊಡಗಿನಲ್ಲಿ ಕಡಿಮೆಯಾದ ಮಳೆಯ ಅಬ್ಬರ

ಭಾಗಮಂಡಲ-ತಲಕಾವೇರಿ ರಸ್ತೆಯಲ್ಲಿ ಸಣ್ಣಪ್ರಮಾಣದಲ್ಲಿ ಮಣ್ಣುಕುಸಿದಿದ್ದು, ರಸ್ತೆ ಮೇಲೆ ಕಲ್ಲುಗಳು ಚೆಲ್ಲಾಡಿರುವುದು.
ಭಾಗಮಂಡಲ-ತಲಕಾವೇರಿ ರಸ್ತೆಯಲ್ಲಿ ಸಣ್ಣಪ್ರಮಾಣದಲ್ಲಿ ಮಣ್ಣುಕುಸಿದಿದ್ದು, ರಸ್ತೆ ಮೇಲೆ ಕಲ್ಲುಗಳು ಚೆಲ್ಲಾಡಿರುವುದು.
Published on
ಮಡಿಕೇರಿ:
ಕಳೆದ 2-3 ದಿನಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಮಳೆಯ ಅಬ್ಬರ ಕಡಿಮೆ ಆಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ತುಂತುರು ಮಳೆ, ಮಂಜು ಹಾಗೂ ಆಗಾಗ್ಗೆ ಬಿಸಿಲಿನ ವಾತಾವರಣ ಕಂಡು ಬಂತು. ಕೆಲವೊಂದು ಪ್ರದೇಶಗಳನ್ನು ಹೊರತುಪಡಿಸಿದರೆ ಕೊಡಗಿನ ಬಹುತೇಕ ಭಾಗಗಳಲ್ಲಿ ಗುರುವಾರ ಮಳೆಗಿಂತ ಬಿಸಿಲೇ ಇತ್ತು. ಭಾಗಮಂಡಲ ವ್ಯಾಪ್ತಿಯಲ್ಲಿ ಸಾಧಾರಣ ಮಳೆ ಇತ್ತು. ಭಾಗಮಂಡಲ-ತಲಕಾವೇರಿ ರಸ್ತೆಯಲ್ಲಿ ಭಾಗಮಂಡಲದಿAದ 3 ಕಿಮೀ ದೂರದಲ್ಲಿ ಸಣ್ಣಪ್ರಮಾಣದಲ್ಲಿ ಮಣ್ಣುಕುಸಿದಿದ್ದು, ರಸ್ತೆ ಮೇಲೆ ಕಲ್ಲುಗಳು ಚೆಲ್ಲಾಡಿದ್ದವು. ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಇಳಿಕೆ ಆಗಿತ್ತು. ಮಳೆ ಪ್ರಮಾಣ ಕಡಿಮೆ ಆದರೂ ಕೆಳಪಾತ್ರದಲ್ಲಿ ನದಿಗಳಲ್ಲಿ ನೀರಿನ ಪ್ರಮಾಣ ಸ್ವಲ್ಪ ಹೆಚ್ಚಾಗಿದೆ.
ಮಡಿಕೇರಿ ತಾಲೂಕಿನ ಐಕೊಳ ಎಂಬಲ್ಲಿ ಚಲಿಸುತ್ತಿದ್ದ ಮಾರುತಿ ವ್ಯಾನ್ ಮೇಲೆ ಮರ ಬಿದ್ದಿದೆ. ಕೊಂಡAಗೇರಿಯ ಅಲಿ ಎಂಬವರು ಈ ವ್ಯಾನ್‌ನಲ್ಲಿ ಮೂರ್ನಾಡುವಿಗೆ ತೆರಳುತ್ತಿದ್ದಾಗ ರಸ್ತೆ ಬದಿ ತೋಟದ ಮರ ಗಾಳಿಗೆ ಬಿದ್ದಿದ್ದು, ಕಾರು ಜಖಂಗೊAಡಿದೆ. ಚಾಲಕ ಅಲಿಗೆ ಗಂಭೀರ ಗಾಯಗಳಾಗಿದ್ದು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 47.16 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 15.42 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 678.70 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 1633.37 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲೂಕಿನಲ್ಲಿ 49.80 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 51.95 ಮಿ.ಮೀ. ಪೊನ್ನಂಪೇಟೆ ತಾಲೂಕಿನಲ್ಲಿ 49.95 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ 69.82 ಮಿ.ಮೀ. ಹಾಗೂ ಕುಶಾಲನಗರ ತಾಲೂಕಿನಲ್ಲಿ 14.30 ಮಿ.ಮೀ. ಸರಾಸರಿ ಮಳೆಯಾಗಿದೆ.
ಮಡಿಕೇರಿ 28.50, ನಾಪೋಕ್ಲು 68.20, ಸಂಪಾಜೆ 20.50, ಭಾಗಮಂಡಲ 82, ವಿರಾಜಪೇಟೆ 63.40, ಅಮ್ಮತ್ತಿ 40.50, ಹುದಿಕೇರಿ 48, ಶ್ರೀಮಂಗಲ 102, ಪೊನ್ನಂಪೇಟೆ 32, ಬಾಳೆಲೆ 17.80, ಸೋಮವಾರಪೇಟೆ 57.60, ಶನಿವಾರಸಂತೆ 48, ಶಾಂತಳ್ಳಿ 122.50, ಕೊಡ್ಲಿಪೇಟೆ 51.20, ಕುಶಾಲನಗರ 6.60 ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ 22 ಮಿ.ಮೀ.ಮಳೆಯಾಗಿದೆ.
2,859 ಅಡಿ ಎತ್ತರದ ಹಾರಂಗಿ ಅಣೆಕಟ್ಟೆಯಲ್ಲಿ ಗುರುವಾರದ ಮಾಹಿತಿ ಪ್ರಕಾರ 2841.55 ಅಡಿ ನೀರಿದೆ. ಕಳೆದ ವರ್ಷ ಇದೇ ದಿನ 2852.61 ಅಡಿ ನೀರಿತ್ತು. ನೀರಿನ ಒಳಹರಿವು 3,665 ಕ್ಯೂಸೆಕ್. ಕಳೆದ ವರ್ಷ ಇದೇ ದಿನ 4,880 ಕ್ಯೂಸೆಕ್ ಒಳಹರಿವು ಇತ್ತು. ನದಿಗೆ 180 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ 4,083 ಕ್ಯೂಸೆಕ್ ನೀರು ಹರಿಸಲಾಗುತ್ತಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net