ಭಾಗಮಂಡಲ ಪೊಲೀಸ್ ಠಾಣೆಯ ಸಿಬ್ಬಂದಿಗೆ ಮಡಿಕೇರಿ ರೋಟರಿ ವುಡ್ಸ್ ವತಿಯಿಂದ ರೈನ್ ಕೋಟ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು. ದಿನೇಶ್, ಎಸ್.ಎಸ್. ಸಂಪತ್‌ಕುಮಾರ್, ಪ್ರಮೀಳಾ ಶೆಟ್ಟಿ, ಕೆ.ಜೆ. ದಿವಾಕರ್ ಮತ್ತಿತರರು ಇದ್ದರು.
ವಾಡಿಕೆಯಂತೆ ಅತ್ಯಧಿಕ ಮಳೆಯ ಕಾರಣದಿಂದ ಕಾರ್ಯನಿರ್ವಹಿಸಲು ಶ್ರಮಿಸುವ ಭಾಗಮಂಡಲ ಪೊಲೀಸ್ ಠಾಣೆಯ ಸಿಬ್ಬಂದಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮಡಿಕೇರಿ ರೋಟರಿ ವುಡ್ಸ್ ವತಿಯಿಂದ ಬುಧವಾರ ಇಪ್ಪತ್ತರೆಡು ರೈನ್ ಕೋಟ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು.
ರೈನ್ ಕೋಟ್‌ಗಳನ್ನು ಸ್ವೀಕರಿಸಿದ ಪ್ರಭಾರ ಸಬ್ ಇನ್ಸ್ಪೆಕ್ಟರ್ ದಿನೇಶ್ ಈ ಸಂದರ್ಭ ಮಾತನಾಡಿ ರೋಟರಿ ವುಡ್ಸ್ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜನಪರ ಕಾರ್ಯಗಳು ನಡೆಯುತ್ತಿರಲಿ. ಸಮಾಜದ ಎಲ್ಲಾ ವರ್ಗಕ್ಕೂ ಇದರ ಪ್ರಯೋಜನ ಸಿಗಲಿ ಎಂದರು.
ಮಡಿಕೇರಿ ರೋಟರಿ ವುಡ್ಸ್ ಮಾಜಿ ಅಧ್ಯಕ್ಷ ಎಸ್.ಎಸ್. ಸಂಪತ್‌ಕುಮಾರ್ ಮಾತನಾಡಿ ರೋಟರಿ ವುಡ್ಸ್ ಈ ಸಾಲಿನಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಜನರ ಭಾವನೆಗೆ ತಕ್ಕಂತೆ ಕೆಲಸ ಮಾಡುವುದು ಮತ್ತು ಅಗತ್ಯತೆಗಳಿಗೆ ಅದ್ಯತೆ ನೀಡುವ ಬಗ್ಗೆ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.
ರೋಟರಿ ವುಡ್ಸ ಅಧ್ಯಕ್ಷೆ ಪ್ರಮೀಳಾ ಶೆಟ್ಟಿ, ರೋಟರಿ ಸಂಸ್ಥೆಯ ಕೆ.ಜೆ. ದಿವಾಕರ್ ಮಾತನಾಡಿದರು.
ವಲಯ ಸೇನಾನಿ ವಸಂತ್ ಕುಮಾರ್, ಕ್ಲಬ್ ಕಾರ್ಯದರ್ಶಿ ಸ್ಮಿತಾ ಚೆಂಗಪ್ಪ, ಲೀಲಾವತಿ, ರವಿ ಕುಮಾರ್, ಮನೋಹರ್ ಸುವರ್ಣ, ಹೆಡ್ ಕಾನ್ಸ್ಟೇಬಲ್ ಲೋಕೇಶ್, ಪೊಲೀಸ್ ಸಿಬ್ಬಂದಿ ಇದ್ದರು.