ಕೊಡಗಿನಲ್ಲಿ ಮತ್ತೆ ಮಳೆ ಚುರುಕು

ಮಡಿಕೇರಿಯಲ್ಲಿ ಶುಕ್ರವಾರ ಉತ್ತಮ ಮಳೆ ಆಯಿತು.
ಮಡಿಕೇರಿಯಲ್ಲಿ ಶುಕ್ರವಾರ ಉತ್ತಮ ಮಳೆ ಆಯಿತು.
Published on
ಮಡಿಕೇರಿ:
ಜಿಲ್ಲೆಯಲ್ಲಿ ಕಳೆದ 3-4 ದಿನಗಳಿಂದ ಬಿಡುವು ತೆಗೆದುಕೊಂಡಿದ್ದ ಮಳೆ ಶುಕ್ರವಾರ ಮುಂಜಾನೆಯಿAದ ಮತ್ತೆ ಬಿರುಸಾಗಿದೆ. ಜಿಲ್ಲೆಯ ವಿವಿಧ ಭಾಗಳಲ್ಲಿ ದಿನಪೂರ್ತಿ ಉತ್ತಮ ಮಳೆ ಆಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಮುಂಜಾನೆ ಜೋರಾಗಿದ್ದ ಮಳೆ ನಂತರ ಸ್ವಲ್ಪ ಕಡಿಮೆ ಆಗಿ ಮೋಡ ಕವಿದ ವಾತಾವರಣ, ಬಿಸಿಲು ಇತ್ತು. ಮಧ್ಯಾಹ್ನದ ವೇಳೆಗೆ ಮತ್ತೆ ಶುರುವಾದ ಮಳೆ ಉತ್ತಮವಾಗಿ ಸುರಿಯಿತು.
ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 20.45 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 36.69 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 716.72 ಮಿ.ಮೀ. ಮಳೆಯಾಗಿದ್ದು ಕಳೆದ ವರ್ಷ ಇದೇ ಅವಧಿಯಲ್ಲಿ 1764.46 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ 22.43 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 25.95 ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ 11.33 ಮಿ.ಮೀ.,
ಸೋಮವಾರಪೇಟೆ ತಾಲೂಕಿನಲ್ಲಿ 26.08 ಮಿ.ಮೀ. ಹಾಗೂ ಕುಶಾಲನಗರ ತಾಲೂಕಿನಲ್ಲಿ 16.45 ಮಿ.ಮೀ. ಸರಾಸರಿ ಮಳೆಯಾಗಿದೆ.
ಮಡಿಕೇರಿ 20.80, ನಾಪೋಕ್ಲು 10.05, ಸಂಪಾಜೆ 30.30, ಭಾಗಮಂಡಲ 28.10, ವಿರಾಜಪೇಟೆ 38.90, ಅಮ್ಮತ್ತಿ 13, ಹುದಿಕೇರಿ 19.70, ಶ್ರೀಮಂಗಲ 9.60, ಪೊನ್ನಂಪೇಟೆ 9.20, ಬಾಳೆಲೆ 6.80, ಸೋಮವಾರಪೇಟೆ 36.20, ಶನಿವಾರಸಂತೆ 16.10, ಶಾಂತಳ್ಳಿ 41.90, ಕೊಡ್ಲಿಪೇಟೆ 10.10, ಕುಶಾಲನಗರ 13.40 ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ 19.50 ಮಿ.ಮೀ. ಸರಾಸರಿ ಮಳೆಯಾಗಿದೆ.
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಶುಕ್ರವಾರದ ನೀರಿನ ಮಟ್ಟ 2848.41 ಅಡಿಗಳು. ಕಳೆದ ವರ್ಷ ಇದೇ ದಿನ 2856.79 ಅಡಿ ನೀರಿತ್ತು. ಪ್ರಸ್ತುತ ನೀರಿನ ಒಳಹರಿವು 1,475 ಕ್ಯೂಸೆಕ್, ಕಳೆದ ವರ್ಷ ಇದೇ ದಿನ 7,381 ಕ್ಯೂಸೆಕ್ ಒಳಹರಿವು ಇತ್ತು. ನದಿಗೆ 180 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ 3,166 ಕ್ಯೂಸೆಕ್ ಹೊರ ಹರಿವು ಇತ್ತು.
ಭಾರತೀಯ ಹವಾಮಾನ ಇಲಾಖೆಯ ಜು.18ರಿಂದ ಜು.22ರ ಅವಧಿಗೆ ಸ್ವೀಕರಿಸಲಾದ ಮುನ್ಸೂಚನೆಯ ಪ್ರಕಾರ ಮುಂದಿನ ಐದು ದಿನಗಳಲ್ಲಿ ಜಿಲ್ಲೆಯಲ್ಲಿ ಸಾಧಾರಣದಿಂದ ಕೂಡಿದ ಕಡಿಮೆ ಪ್ರಮಾಣದ ಮಳೆ ಬೀಳುವ ಸಾಧ್ಯತೆಯಿದೆ. ಗರಿಷ್ಠ ತಾಪಮಾನ 31 ಡಿ.ಸೆ. ಮತ್ತು 32 ಡಿ.ಸೆ. ನಡುವೆ ಹಾಗೂ ಕನಿಷ್ಠ ತಾಪಮಾನ 21ಡಿ.ಸೆ. ಮತ್ತು 22 ಡಿ.ಸೆ. ನಡುವೆ ಇರುವ ನಿರೀಕ್ಷೆಯಿದೆ. ಮುನ್ಸೂಚನೆಯ ಅವಧಿಯುದ್ದಕ್ಕೂ ಆಕಾಶ ಮೋಡಕವಿದಂತೆ ಇರುವ ಸಾಧ್ಯತೆಯಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net