ಕಾಫಿ ಬೆಳೆಗಾರರಲ್ಲಿ ಹರುಷ ತಂದ ಮಳೆ

ಸೋಮವಾರಪೇಟೆ ಪಟ್ಟಣದಲ್ಲಿ ಸೋಮವಾರ ಸಂಜೆ ಸುರಿದ ಮಳೆ ನಡುವೆ ವಿದ್ಯಾರ್ಥಿಗಳು ಛತ್ರಿ ಹಿಡಿದು ಮನೆಗೆ ತೆರಳಿದರು.
ಸೋಮವಾರಪೇಟೆ ಪಟ್ಟಣದಲ್ಲಿ ಸೋಮವಾರ ಸಂಜೆ ಸುರಿದ ಮಳೆ ನಡುವೆ ವಿದ್ಯಾರ್ಥಿಗಳು ಛತ್ರಿ ಹಿಡಿದು ಮನೆಗೆ ತೆರಳಿದರು.
Published on
ಸೋಮವಾರಪೇಟೆ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸೋಮವಾರ ಸಂಜೆ ಗುಡುಗು ಸಹಿತ ಮಳೆ ಸುರಿಯಿತು.
ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಕೃಷಿಕರು ಮತ್ತು ಕಾಫಿ ಬೆಳೆಗಾರರು ಸಂಭ್ರಮಪಟ್ಟರು. ಕಳೆದ 20 ದಿನಗಳ ಹಿಂದೆ ಅಲ್ಲಿಲ್ಲಿ ಸಾಧಾರಣ ಮಳೆ ಸುರಿದಿತ್ತು. ಆದರೆ ಬಹುತೇಕ ಗ್ರಾಮೀಣ ಭಾಗದಲ್ಲಿ ಮಳೆಯಾಗದೆ ಕಾಫಿ ಗಿಡಗಳು, ಕಾಳುಮೆಣಸು ಬಳ್ಳಿಗಳು ಒಣಗುತ್ತಿದ್ದು, ರೈತರು ಫಸಲು ನಷ್ಟದ ಭೀತಿಯಲ್ಲಿದ್ದರು.
ಸುಡು ಬಿಸಿಲಿಗೆ ನದಿ, ಕೊಳ್ಳಗಳು ಬತ್ತಿಹೋಗಿದ್ದವು. ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿತ್ತು. ಸೋಮವಾರ ಸುರಿದ ಮಳೆಯಿಂದ ರೈತರಲ್ಲಿ ಆಶಾ ಭಾವನೆ ಮೂಡಿದೆ. ಕೃಷಿ ಚಟುವಟಿಕೆ ಚುರುಕುಗೊಳ್ಳಲಿದ್ದು, ಬೆಳಗಾರು ಕಾಫಿ ಗಿಡಗಳಿಗೆ ರಾಸಾಯನಿಕ ಗೊಬ್ಬರ ಮತ್ತು ಸಿಲೀಂದ್ರ ನಾಶಕ ಸಿಂಪಡಿಸಲು ಸಿದ್ಧತೆ ಮಾಡಿಕೊಳ್ಳಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net