ಸಂಸ್ಥೆಯಿಂದ ಬಿಇಒ ಎಂ.ಕೃಷ್ಣಪ್ಪ, ಸಿಆರ್‌ಪಿ ವಿಶ್ವನಾಥ್, ದಾನಿ ಹಿತೇಶ್ ಹಾಗೂ ಹಿರಿಯ ಶಿಕ್ಷಕಿ ಭಾರತಿ ದೇವಯ್ಯ ಅವರನ್ನು ಸನ್ಮಾನಿಸಲಾಯಿತು. ಜನಪದ ಸ್ಪರ್ಧೆಗಳು ಮೂರು ಹಂತಗಳಲ್ಲಿ ನಡೆದು 15 ಶಾಲಾ-ಕಾಲೇಜುಗಳ ತಂಡ ಪಾಲ್ಗೊಂಡು ಜಾನಪದ ನೃತ್ಯ ಪ್ರದರ್ಶನ ನೀಡಿದವು. ಶಿಕ್ಷಣ ಸಂಸ್ಥೆಯ ಪ್ರಮುಖರಾದ ಸಿಸ್ಟರ್ ಅರ್ಪಿತಾ, ಸಿಸ್ಟರ್ ಫ್ಲೋರೆಟ್, ಸಿಸ್ಟರ್ ಸೋಫಿಯಾ, ಕರ್ನಾಟಕ ಜಾನಪದ ಪರಿಷತ್ ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಶಿಕ್ಷಕಿಯರಾದ ಲಿಜೆಟ್, ಲೂಸಿ, ಡೇಸೀ ಹಾಗೂ ತೀರ್ಪುಗಾರರು ಇದ್ದರು.