ಚತುಷ್ಪಥ ರಸ್ತೆ ಕಾಮಗಾರಿ ಶುರು

ಉದ್ದೇಶಿತ ಮೈಸೂರು-ಮಡಿಕೇರಿ ಚತುಷ್ಪಥ ರಸ್ತೆಯ ಪ್ಯಾಕೇಜ್ 2ರಲ್ಲಿ ಬರುವ ಕುಶಾಲನಗರದ ಬಸವನಹಳ್ಳಿಯಿಂದ ಹಾಸನ -ಪಿರಿಯಾಪಟ್ಟಣ ರಸ್ತೆ ಜಂಕ್ಷನ್ ಮಧ್ಯೆ ರಸ್ತೆ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ.
ಉದ್ದೇಶಿತ ಮೈಸೂರು-ಮಡಿಕೇರಿ ಚತುಷ್ಪಥ ರಸ್ತೆಯ ಪ್ಯಾಕೇಜ್ 2ರಲ್ಲಿ ಬರುವ ಕುಶಾಲನಗರದ ಬಸವನಹಳ್ಳಿಯಿಂದ ಹಾಸನ -ಪಿರಿಯಾಪಟ್ಟಣ ರಸ್ತೆ ಜಂಕ್ಷನ್ ಮಧ್ಯೆ ರಸ್ತೆ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ.
Published on

ಪ್ರಮುಖ ಮುಖ್ಯಾಂಶಗಳು

  • ಮೈಸೂರು-ಮಡಿಕೇರಿ ಚತುಷ್ಪಥ ರಸ್ತೆ
  • 5 ಪ್ಯಾಕೇಜ್‌ಗಳಲ್ಲಿ ಕಾಮಗಾರಿ
  • ಪ್ಯಾಕೇಜ್ 2ರ ಕಾಮಗಾರಿಯೂ ಶುರು
ಮಡಿಕೇರಿ:
ಮೈಸೂರು-ಮಡಿಕೇರಿ ಚತುಷ್ಪಥ ರಸ್ತೆಯ ಬಹುನಿರೀಕ್ಷಿತ ಪ್ಯಾಕೇಜ್ 2ರ ಕಾಮಗಾರಿಗೆ ಇದ್ದ ಅಡೆತಡೆಗಳು ನಿವಾರಣೆ ಆದ ಬೆನ್ನಲ್ಲೇ ಸೋಮವಾರದಿಂದಲೇ (ಡಿ.8) ಕಾಮಗಾರಿ ಶುರುವಾಗಿದೆ. 22 ಕಿಮೀ ಉದ್ದದ ಈ ಪ್ಯಾಕೇಜ್ ಮೈಸೂರು ಜಿಲ್ಲೆಯನ್ನು ಕೊಡಗಿನೊಂದಿಗೆ ಸಂಪರ್ಕಿಸಲಿದ್ದು, ಮೀಸಲು ಅರಣ್ಯದ ಮಧ್ಯೆ ಹಾದುಹೋಗಬೇಕಿರುವುದರಿಂದ ನೆನೆಗುದಿಗೆ ಬಿದ್ದಿತ್ತು. ಇದೀಗ ಕೆಲಸಗಳು ಆರಂಭವಾಗಿದ್ದು 2017ರ ಒಳಗೆ ಮುಗಿಯುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಮೈಸೂರು-ಮಡಿಕೇರಿ ನಡುವಿನ ರಾಷ್ಟಿçÃಯ ಹೆದ್ದಾರಿ 275ರಲ್ಲಿ ವಾಹನದಟ್ಟಣೆ ಹೆಚ್ಚಾಗಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಅಪಘಾತಗಳ ಸಂಖ್ಯೆಯೂ ಏರುಗತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿರುವ ಮೈಸೂರು-ಮಡಿಕೇರಿ ಚತುಷ್ಪಥ ರಸ್ತೆಯ ಒಟ್ಟು 5 ಪ್ಯಾಕೇಜ್‌ಗಳ ಪೈಕಿ 3 ಪ್ಯಾಕೇಜ್‌ಗಳಲ್ಲಿ ಈಗಾಲೇ ಕಾಮಗಾರಿ ಆರಂಭವಾಗಿತ್ತು. ಆದರೆ ಮೈಸೂರು ಮತ್ತು ಕೊಡಗು ಜಿಲ್ಲೆಯ ನಡುವೆ ಸಂಪರ್ಕ ಕಲ್ಪಿಸುವ ಪ್ಯಾಕೇಜ್ 2ರ ಕಾಮಗಾರಿ ಮೀಸಲು ಅರಣ್ಯದ ಮೂಲಕ ಹಾದು ಹೋಗುವುದರಿಂದ ಅರಣ್ಯ ಇಲಾಖೆ ಅನುಮತಿಗಾಗಿ ಕಾಯಲಾಗುತ್ತಿತ್ತು. ಇದೀಗ ಹಲವು ಷರತ್ತುಗಳಿಗೆ ಒಳಪಟ್ಟು ಅನುಮತಿ ಸಿಕ್ಕಿರುವುದರಿಂದ ಇಲ್ಲಿಯೂ ಈಗ ಕಾಮಗಾರಿ ಆರಂಭವಾಗಿದೆ.
ಈ ಮಹತ್ವದ ರಾಷ್ಟ್ರೀಯ ಹೆದ್ದಾರಿ 275 ರ ನಿರ್ಮಾಣವು ಮೈಸೂರು ಮತ್ತು ಕೊಡಗು ಜಿಲ್ಲೆಗಳ ನಡುವಿನ ಸಂಪರ್ಕವನ್ನು ಸುಧಾರಿಸಲಿದೆ. ಇದು ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದೆ. ಪ್ರಸ್ತುತ ಮೈಸೂರು-ಮಡಿಕೇರಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ಹೊಸ ಹೆದ್ದಾರಿ ನಿರ್ಮಾಣವಾದರೆ, ಪ್ರಯಾಣದ ಸಮಯ ಕಡಿಮೆಯಾಗುವುದಲ್ಲದೆ, ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಮೈಸೂರು-ಮಡಿಕೇರಿ 4 ಪಥದ ಎಕ್ಸ್ಪ್ರೆಸ್‌ವೇ ಮೈಸೂರು, ಬೆಂಗಳೂರು ಎಕ್ಸ್ಪ್ರೆಸ್‌ವೇಗೆ ಸಂಪರ್ಕ ಕಲ್ಪಿಸುತ್ತದೆ.
ಮೈಸೂರು-ಮಡಿಕೇರಿ ಚತುಷ್ಪಥ ರಸ್ತೆ ಯೋಜನೆ ಒಟ್ಟು 92.3 ಕಿಲೋಮೀಟರ್ ಉದ್ದವಿದೆ. ಈ ಯೋಜನೆಯ ಒಟ್ಟು ವೆಚ್ಚ 4,126 ಕೋಟಿ ರೂ. 2018ರಲ್ಲೇ ಅನುಮೋದನೆ ಪಡೆದುಕೊಳ್ಳಲಾಗಿದ್ದ ಈ ಯೋಜನೆಗೆ ಮೈಸೂರು-ಬೆಂಗಳೂರು ಹೈವೇ ಉದ್ಘಾಟನೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ 2023ರ ಮಾ. 12ರಂದು ಗೆಜ್ಜಲಗೆರೆಯಲ್ಲಿ ಭೂಮಿ ಪೂಜೆ ನೆರವೇರಿಸಿದ್ದರು. ಪ್ಯಾಕೇಜ್ 3ರಲ್ಲಿ ಬರುವ ಹುಣಸೂರಿನಿಂದ ಪಿರಿಯಾಪಟ್ಟಣವರೆಗಿನ ಕಾಮಗಾರಿ ಆರಂಭದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಮಾರ್ಚ್ನಲ್ಲಿ ಅನುಮೋದನೆ ಕೊಟ್ಟಿತ್ತು. ಹಾಗಾಗಿ ಇಲ್ಲಿ ಏ. 2ನೇ ವಾರದಲ್ಲಿ ಹೆದ್ದಾರಿ ನಿರ್ಮಾಣ ಕಾಮಗಾರಿ ಶುರುವಾಗಿತ್ತು.
ಮೈಸೂರು-ಮಡಿಕೇರಿ 4 ಪಥದ ಎಕ್ಸ್ಪ್ರೆಸ್‌ವೇ ಯೋಜನೆ ಕಾರ್ಯರೂಪಕ್ಕೆ ಬಂದ ನಂತರ ಮಡಿಕೇರಿಯಿಂದ ಮೈಸೂರು ನಗರಕ್ಕೆ ಸಂಪರ್ಕ ಕಲ್ಪಿಸದೆಯೇ ನೇರವಾಗಿ ಶ್ರೀರಂಗಪಟ್ಟಣ ಸಮೀಪದ ಬೊಮ್ಮೂರು ಅಗ್ರಹಾರ ಬಳಿ ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ವೇ ಸೇರಬಹುದಾಗಿದೆ. ಇದರಿಂದಾಗಿ ಮಡಿಕೇರಿಯಿಂದ ಬೆಂಗಳೂರಿಗೆ ಯಾವುದೇ ಅಡೆ-ತಡೆಯಿಲ್ಲದೇ ವಾಹನ ಸಂಚಾರ ಸಾಧ್ಯವಾಗಲಿದೆ. ಸುಂಟಿಕೊಪ್ಪ, ಕುಶಾಲನಗರ, ಬೈಲಕುಪ್ಪೆ, ಕೊಪ್ಪ, ಕಂಪಲಾಪುರ, ಪಿರಿಯಾಪಟ್ಟಣ, ಹುಣಸೂರು ಪಟ್ಟಣಗಳಲ್ಲಿ ಬೈಪಾಸ್ ಮಾರ್ಗ ಉz್ದೆÃಶಿತ ಯೋಜನೆಯಲ್ಲಿದೆ. ಗುಡ್ಡೆಹೊಸೂರಿನ ತೆಪ್ಪದಕಂಡಿ ತೂಗು ಸೇತುವೆ ಬಳಿ ಕಾವೇರಿ ನದಿಗೆ ಅಡ್ಡವಾಗಿ ಹೊಸ ಸೇತುವೆಯೂ ನಿರ್ಮಾಣವಾಗಲಿದೆ.
ಉದ್ದೇಶಿತ ಈ ಹೆದ್ದಾರಿ ನಾಲ್ಕು ಪಥದ ಜತೆಗೆ ಸರ್ವೀಸ್ ರಸ್ತೆಗಳನ್ನೂ ಹೊಂದಿರುತ್ತದೆ. ಈ ಯೋಜನೆಗಾಗಿ 1,351.67 ಎಕರೆ ಭೂಮಿ ಬೇಕಾಗುತ್ತದೆ. ಶ್ರೀರಂಗಪಟ್ಟಣ, ಮೈಸೂರು, ಪಿರಿಯಾಪಟ್ಟಣ, ಕುಶಾಲನಗರ ತಾಲೂಕಿನ ರೈತರು ಈ ಯೋಜನೆಗಾಗಿ ಭೂಮಿ ಕಳೆದುಕೊಳ್ಳುತ್ತಿದ್ದಾರೆ. ಭೂ ಮಾಲೀಕರಿಗೆ ಭೂಸ್ವಾಧೀನ ನಿಯಮಾವಳಿಗಳ ಪ್ರಕಾರ ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ಬೆಲೆಯನ್ನು ಪರಿಹಾರವಾಗಿ ಕೊಡಲಾಗಿದೆ. ಯೋಜನಾ ವೆಚ್ಚದಲ್ಲಿ ಭೂ ಸ್ವಾಧೀನ ಪರಿಹಾರಕ್ಕೆಂದೇ 1,100 ಕೋಟಿ ರೂ. ವ್ಯಯಿಸಲಾಗಿದೆ.
ಚತುಷ್ಪಥ ರಸ್ತೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಪಾಲಹಳ್ಳಿಯಿಂದ ಶುರುವಾಗಲಿದೆ. ಇದು ಮೊದಲ ಹಂತದಲ್ಲಿ ಪೂರ್ಣವಾದ ನಂತರ ಕೊಡಗು ಜಿಲ್ಲೆಯಲ್ಲಿ 2.3 ಕಿ. ಮೀ. ಹಾದುಹೋಗಲಿದ್ದು, ಮೈಸೂರು ಜಿಲ್ಲೆಯಲ್ಲಿ ಅತ್ಯಧಿಕ ಎಂದರೆ 75.9 ಕಿ. ಮೀ. ಹಾಗೂ ಮಂಡ್ಯ ಜಿಲ್ಲೆಯಲ್ಲಿ 14 ಕಿ.ಮೀ. ದೂರ ಇರಲಿದೆ. ಈ ಹೆದ್ದಾರಿ ಯೋಜನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ಮತ್ತು ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನಲ್ಲಿ 135 ಎಕರೆ ಅರಣ್ಯ ಭೂಮಿ ಮೂಲಕವೂ ಸಾಗಲಿದೆ. ಕೊಡಗು ಭಾಗದಲ್ಲಿ 1 ಹಳ್ಳಿಯ 50 ಕುಟುಂಬಗಳು ಈ ಕಾಮಗಾರಿಯ ಪ್ರಭಾವಕ್ಕೆ ಒಳಗಾಗಲಿವೆ. 25 ಕಟ್ಟಡಗಳು ಅಥವಾ ಆಸ್ತಿಪಾಸ್ತಿಗಳನ್ನು ಇದಕ್ಕಾಗಿ ಕಳೆದುಕೊಳ್ಳಬೇಕಾಗಿದೆ.
ಮೈಸೂರು-ಮಡಿಕೇರಿ ಚತುಷ್ಪಥ ರಸ್ತೆ 5 ಪ್ಯಾಕೇಜ್‌ಗಳಲ್ಲಿ ನಿರ್ಮಾಣ ಆಗುತ್ತಿದೆ. ಕುಶಾಲನಗರದ ಬಸವನಹಳ್ಳಿಯಿಂದ ಮಡಿಕೇರಿ ತನಕದ 22 ಕಿಲೋಮೀಟರ್ ದೂರದ ರಸ್ತೆ ಮೊದಲ ಪ್ಯಾಕೇಜ್‌ನಲ್ಲಿ ಬರಲಿದೆ. ಈ ರಸ್ತೆ ಆನೆಕಾಡು ಸೇರಿದಂತೆ ದಟ್ಟ ಅರಣ್ಯ ಪ್ರದೇಶದ ಮೂಲಕ ಹಾದುಹೋಗುವುದರಿಂದ ಅರಣ್ಯ ಇಲಾಖೆಯ ಅನುಮತಿಗಾಗಿ ಕಾಯುತ್ತಿದೆ. ಕುಶಾಲನಗರದ ಬಸವನಹಳ್ಳಿಯಿಂದ ಹಾಸನ-ಪಿರಿಯಾಪಟ್ಟಣ ರಸ್ತೆ ಜಂಕ್ಷನ್ ತನಕ 22.7 ಕಿಲೋಮೀಟರ್ 2ನೇ ಪ್ಯಾಕೇಜ್‌ನಲ್ಲಿ ಸೇರಿದೆ. ಇದು ಕೂಡ ಮೀಸಲು ಅರಣ್ಯದೊಳಗೆ ಹಾದುಹೋಗುವುದರಿಂದ ಅರಣ್ಯ ಇಲಾಖೆ ಅನುಮತಿಗಾಗಿ ಕಾಯಲಾಗುತ್ತಿತ್ತು. ಇದೀಗ ಅನುಮತಿ ಸಿಕ್ಕಿರುವುದರಿಂದ ಕಾಮಗಾರಿ ಶುರುವಾಗಿದೆ. ಮೂರನೇ ಪ್ಯಾಕೇಜ್ 24.1 ಕಿಮೀ ಒಳಗೊಂಡಿದ್ದು ಹೇಮ್ಮಿಗೆ ಗ್ರಾಮ (ಹಾಸನ-ಪಿರಿಯಾಪಟ್ಟಣ ರಸ್ತೆ ಜಂಕ್ಷನ್) ನಿಂದ ರಾಮನಾಥಪುರ-ತೇರಕಾನಂಬಿ ರಸ್ತೆ ಮತ್ತು ಹುಣಸೂರಿನ ಕೆ.ಆರ್. ನಗರ ಜಂಕ್ಷನ್‌ವರೆಗೆ ವಿಸ್ತರಿಸಿದೆ. ರಾಮನಾಥಪುರ-ತೇರಕಾನಂಬಿ ರಸ್ತೆ ಮತ್ತು ಕೆ.ಆರ್. ನಗರ ಜಂಕ್ಷನ್‌ನಿAದ ಯಲಚಹಳ್ಳಿ (ಯಳವಲ್-ಕೆ.ಆರ್. ನಗರ ರಸ್ತೆ ಜಂಕ್ಷನ್ ಬಳಿ)ತನಕದ 26.5 ಕಿಮೀ ಮಾರ್ಗ 4ನೇ ಪ್ಯಾಕೇಜ್‌ನಲ್ಲಿ ಬರುತ್ತದೆ. 5ನೇ ಪ್ಯಾಕೇಜ್ ಯಲಚಹಳ್ಳಿಯಿಂದ ಶ್ರೀರಂಗಪಟ್ಟಣ ಬೈಪಾಸ್ ಬಳಿ ಪಶ್ಚಿಮವಾಹಿನಿ ತನಕ 19 ಕಿಲೋಮೀಟರ್ ಒಳಗೊಂಡಿದೆ.
"

ಮೈಸೂರು-ಮಡಿಕೇರಿ ಚತುಷ್ಪಥ ರಸ್ತೆಯ ಪ್ಯಾಕೇಜ್ 2ರ ಕಾಮಗಾರಿಗೆ ಅರಣ್ಯ ಇಲಾಖೆಯಿಂದ ಒಪ್ಪಿಗೆ ಸಿಕ್ಕಿರುವುದರಿಂದ ಅಲ್ಲಿ ಕೆಲಸ ಶುರುವಾಗಿದೆ. ಇದರಿಂದ ನಾಲ್ಕು ಪ್ಯಾಕೇಜ್‌ಗಳಲ್ಲಿ ಕಾಮಗಾರಿ ಆರಂಭವಾದAತಾಗಿದ್ದು ಮೈಸೂರು-ಕುಶಾಲನಗರ ನಡುವಿನ ಚತುಷ್ಪಥÀ ರಸ್ತೆಯ ಕೆಲಸ ವೇಗ ಪಡೆದುಕೊಳ್ಳಲಿದೆ. ಬಸವನಹಳ್ಳಿ-ಮಡಿಕೇರಿ ನಡುವಿನ ಪ್ಯಾಕೇಜ್ 1ರ ಕಾಮಗಾರಿಗೆ ಅರಣ್ಯ ಇಲಾಖೆ ಅನುಮತಿ ಸಿಗಬೇಕಿದೆ. ಈ ಯೋಜನೆ ರಸ್ತೆ ಸಂಪರ್ಕವನ್ನು ಸುಧಾರಿಸುತ್ತದೆ. ಇದು ನಮ್ಮ ಪ್ರದೇಶದ ಅಭಿವೃದ್ಧಿಗೆ ಒಂದು ಪ್ರಮುಖ ಹೆಜ್ಜೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net