ಮಡಿಕೇರಿ ಕೊಡವ ಸಮಾಜದಿಂದ ಪುತ್ತರಿ ಊರೊರ್ಮೆ

ಮಡಿಕೇರಿ ಕೊಡವ ಸಮಾಜದ ವತಿಯಿಂದ ಪುತ್ತರಿ ಊರೊರ್ಮೆ ಹಾಗೂ ಮಂದ್‌ನಲ್ಲಿ ಶನಿವಾರ ಪುತ್ತರಿ ಕೋಲಾಟ್ ಮತ್ತು ಕತ್ತಿಯಾಟ್ ನಡೆಯಿತು.
ಮಡಿಕೇರಿ ಕೊಡವ ಸಮಾಜದ ವತಿಯಿಂದ ಪುತ್ತರಿ ಊರೊರ್ಮೆ ಹಾಗೂ ಮಂದ್‌ನಲ್ಲಿ ಶನಿವಾರ ಪುತ್ತರಿ ಕೋಲಾಟ್ ಮತ್ತು ಕತ್ತಿಯಾಟ್ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಮಡಿಕೇರಿ ಕೊಡವ ಸಮಾಜದಿಂದ ಪುತ್ತರಿ ಊರೊರ್ಮೆ
  • ಜನಾಂಗದ ಅಸ್ತಿತ್ವದ ಬಗ್ಗೆ ಕಾಳಜಿವಹಿಸಿ: ಚಿರಿಯಪಂಡ ಸುರೇಶ್ ನಂಜಪ್ಪ
ಮಡಿಕೇರಿ: ಮಡಿಕೇರಿ ಕೊಡವ ಸಮಾಜದ ವತಿಯಿಂದ ಪುತ್ತರಿ ಊರೊರ್ಮೆ ಹಾಗೂ ಮಂದ್‌ನಲ್ಲಿ ಶನಿವಾರ ಪುತ್ತರಿ ಕೋಲಾಟ್ ನಡೆಯಿತು.
ಕಾರ್ಯಕ್ರಮದ ಮೊದಲಿಗೆ ಅತಿಥಿಗಳನ್ನು ತಳಿಯಕ್ಕಿ ಬೊಳ್ ಚ, ವಾಲಗ ಹಾಗೂ ದುಡಿಕೊಟ್ಟಿನೊಂದಿಗೆ ಸಮಾಜಕ್ಕೆ ಸ್ವಾಗತಿಸಲಾಯಿತು. ದೇವರಿಗೆ ಅಕ್ಕಿ ಹಾಕಿ ನಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಕೊಡವ ಸಮಾಜದ ಸಭಾಂಗಣದಲ್ಲಿ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ ಮಾತನಾಡಿ, ಸಮಾಜ ಸೇವೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಸಮಾಜದ ಮೂಲಕ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಕೊಡವವಾಮೆಯ ಬೆಳೆಸುವ ಮೂಲ ಜನಾಂಗದ ಜನಸಂಖ್ಯೆ ಕಡಿಮೆಯಾಗುತ್ತಿದ್ದು, ಎಡಕ್ಕಿಂತ ಮಕ್ಕಳನ್ನು ಪಡೆಯಬೇಕೆಂದರು.
ಬೆಂಗಳೂರು ಕೊಡವ ಸಮಾಜದಿಂದ ವಿವಿದೆಡೆ ಶಿಕ್ಷಣ ಕೇಂದ್ರವನ್ನು ಪ್ರಾರಂಭಿಸಿದ್ದು, ಕೊಡವ ಮಕ್ಕಳಿಗೆ ರಿಯಾಯಿತಿ ನೀಡುತಿದ್ದೇವೆ. ಕೊಡವ ವದುವರ ಕೇಂದ್ರವನ್ನು ಪ್ರಾರಂಭಿಸಿದ್ದು, ದೇಶ ವಿದೇಶದಲ್ಲಿರುವ ಕೊಡವ ಸಂಪರ್ಕದ ಬೆಳೆಸುತ್ತೇವೆಂದರು.
ಕೊಡವಾಮೆ, ಸಂಸ್ಕೃತಿ, ಆಚಾರವಿಚಾರ ಉಳಿಸ ಬೇಕಾದರೆ ಪೋಷಕರು ಯುವ ಪೀಳಿಗೆ ತಿಳಿಸುವಂತಾಗಬೇಕು. ಮಡಿಕೇರಿ ಕೊಡವ ಸಮಾಜದ ಅಭಿವೃದ್ಧಿಗೆ ಬೆಂಗಳೂರು ಸಮಾಜ ಸಹಕಾರ ನೀಡಲಿದೆಂದರು.
ಸಮಾಜದ ಅಧ್ಯಕ್ಷ ಮಂಡವಂಡ ಮುತ್ತಪ್ಪ ಮಾತನಾಡಿ, ಕೊಡವ ಸಮಾಜದ ವತಿಯಿಂದ ಕೊಡವ ಆಚಾರವಿಚಾರ ಸಂಸ್ಕೃತಿಯನ್ನು ಉಳಿಸಲು ಶ್ರಮಿಸುತಿದ್ದೇವೆ. ಮಡಿಕೇರಿಯಲ್ಲಿರುವ ೧೨ ಕೊಡವ ಕೇರಿಗಳು ಸಮಾಜಕ್ಕೆ ಸದಾ ಸಹಕಾರ ನೀಡುತ್ತಿವೆ. ಪುತ್ತರಿ ನಮ್ಮೆಯ ಹಿನ್ನೆಲೆಯಲ್ಲಿ ಮೂರುದಿನ ಈಡ್ ನಡೆಸಿ ಇಂದು ಕೋಲಾಟನ್ನು ಪ್ರದರ್ಶನಗೊಳಿಸುಪತಿದ್ದೇವೆಂದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಸನ್ಮಾನ ಹಾಗೂ ಹೆಚ್ಚಿನ ಅಂಕ ಪಡೆದ ಮಕ್ಕಳಿಗೆ ಬಹುಮಾನ ನೀಡಲಾಯಿತು. ಕೊಡವ ಸಮಾಜದ ನಿರ್ದೇಶಕರಾದ ಶಾಂತೆಯಂಡ ವಿಶಾಲ್‌ಕಾರ್ಯಪ್ಪ, ಕಾಳಚಂಡ ಅಪ್ಪಣ್ಣ, ಮೂವೆರ ಜಯರಾಂ, ಪುತ್ತರಿರ ಕರುಣ್ ಕಾಳಯ್ಯ, ಕನ್ನಂಡ ಕವಿತ ಕಾವೇರಮ್ಮ, ಕಾಂಡೇರ್ ಲಲ್ಲು, ಪಾಲೆಯಂಡ ರೂಪ, ಪೆಮ್ಮಡಿಯಂಡ ಉತ್ತಪ್ಪ, ಪುಲ್ಲೆರ ವಸಂತ್, ಮಡಿಕೇರಿ ಸಮಾಜದ ಸದಸ್ಯರು, ಕೊಡವ ಕೇರಿ ಪಾಧಿಕಾರಿಗಳು ಭಾಗವಹಿಸಿದರು.
ಉಪಾಧ್ಯಕ್ಷರಾದ ಕೇಕಡ ವಿಜು ದೇವಯ್ಯ ಕಾರ್ಯಕ್ರಮನ್ನು ನಿರೂಪಿದರೆ, ಗೌರವ ಕಾರ್ಯದರ್ಶಿ ಬೊಪ್ಪಂಡ ಸರಳ ಕರುಂಬಯ್ಯ ಪ್ರಾರ್ಥಿಸಿ, ಉಪಾಧ್ಯಕ್ಷ ಕೇಕಡ ವಿಜುದೇವಯ್ಯ ಸ್ವಾಗತಿಸಿ, ಜಂಟಿ ಕಾರ್ಯದರ್ಶಿ ನಂದನೆರವಂಡ ದಿನೇಶ್ ವಂದಿಸಿದರು.
ಮದ್ಯಾಹ್ನದ ನಂತರ ಕೊಡವ ಸಂಪ್ರದಾಯದೊಂದಿಗೆ ಕೊಡವ ಸಮಾಜದಿಂದ ಕೋಲ್ ಮಂದ್‌ಗೆ ಮೆರವಣಿಗೆ ತೆರಳಿದರು. ಕಾವೇರಿ ಕೇರಿಯವರು ಮಂದ್‌ಗೆ ಸ್ವಾಗತಿಸಿದರು. ನಂತರ ಕೋಲಾಲ್, ಬೊಳಕಾಟ್, ಕತ್ತಿಯಾಟ್ ಉಮ್ಮತಾಟ್ ಹಾಗೂ ವಾಲಗತಾಟ್ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net