

ನಮ್ಮ ಕುಟುಂಬದವರು ಅರಮನೆ ಮಂದ್‌ನಲ್ಲಿ ಪ್ರಸ್ತುತಪಡಿಸುವ ಪುತ್ತರಿ ಕೋಲಾಟಕ್ಕೆ ಐತಿಹಾಸಿಕ ಮಹತ್ವ ಇದೆ. ಕೊಡಗನ್ನು ರಾಜರು ಆಳುತ್ತಿದ್ದ ಕಾಲದಲ್ಲೂ ನಮ್ಮ ಕುಟುಂಬಸ್ಥರು ಈ ಜಾಗದಲ್ಲಿ ಪುತ್ತರಿ ಕೋಲಾಟ ಪ್ರದರ್ಶನ ಮಾಡುತ್ತಿದ್ದರು. ಆ ಸಂಪ್ರದಾಯವನ್ನು ಈಗಲೂ ನಾವು ಮುಂದುವರಿಸಿಕೊAಡು ಹೋಗುತ್ತಿರುವುದಕ್ಕೆ ಹೆಮ್ಮೆ ಇದೆ. ನಮ್ಮ ಕುಟುಂಬದ ಎಲ್ಲರೂ ಈ ಆಚರಣೆಯಲ್ಲಿ ಪಾಲ್ಗೊಳ್ಳುತ್ತೇವೆ.