ಹುದುಗೂರು ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಪೂಜೋತ್ಸವ

ಹುದುಗೂರು ಗ್ರಾಮದ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ನವೀಕರಣ ದ್ರವ್ಯ ಕಳಸ ಐದು ದಿನಗಳ ಪೂಜೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಡಾ. ಶ್ರೀನಾಥ್ ಕಾರಯಾಟ್, ಪಣಿಕರ್, ಟಿ.ಎಂ. ಚಾಮಿ, ಸುರೇಶ್ ಮತ್ತಿತರರು ಇದ್ದರು.
ಹುದುಗೂರು ಗ್ರಾಮದ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ನವೀಕರಣ ದ್ರವ್ಯ ಕಳಸ ಐದು ದಿನಗಳ ಪೂಜೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಡಾ. ಶ್ರೀನಾಥ್ ಕಾರಯಾಟ್, ಪಣಿಕರ್, ಟಿ.ಎಂ. ಚಾಮಿ, ಸುರೇಶ್ ಮತ್ತಿತರರು ಇದ್ದರು.
Published on
ಕುಶಾಲನಗರ:
ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ನವೀಕರಣ ದ್ರವ್ಯ ಕಳಸ ಐದು ದಿನಗಳ ಪೂಜೋತ್ಸವವು ಶ್ರದ್ಧಾಭಕ್ತಿಯಿಂದ ವಿವಿಧ ಹೋಮ ಹವನಗಳೊಂದಿಗೆ ದೇವಾಲಯ ಆವರಣದಲ್ಲಿ ನೆರವೇರಿತು.
ಕೇರಳ ತಂತ್ರಿ ಬ್ರಹ್ಮಶ್ರೀ ಡಾ. ಶ್ರೀನಾಥ್ ಕಾರಯಾಟ್ ಮತ್ತು ಪಣಿಕರ್ ನೇತೃತ್ವದ ತಂಡದ ಪೂಜಾ ವಿದಿವಿಧಾನ ನಡೆಸಿಕೊಟ್ಟಿತು.
ಐದು ದಿನಗಳ ಪೂಜೋತ್ಸವ ಕಾರ್ಯಕ್ರಮದಲ್ಲಿ ಬೆಳಗ್ಗೆ ಮತ್ತು ಸಂಜೆ ದೇವಾಲಯದ ಆವರಣದಲ್ಲಿ ವಿವಿಧ ಬಗೆಯ ಪೂಜಾ ಕೈಂಕರ್ಯಗಳು ನಡೆದವು. ಗಣಪತಿ ಹೋಮ, ವಾಸ್ತುಬಲಿ, ಉಕ್ಷಿ ಪೂಜೆ, ದೀಪಾರಾಧನೆ, ಪಂಚಕA ಪೂಜೆ ಸೇರಿದಂತೆ ವಿವಿಧ ಪೂಜೆಗಳು, ದೇವಾಲಯದ ಕಳಸ ಪೂಜೆ, ಉಪ ದೇವತೆಗಳ ಪೂಜಾ ಕೈಂಕರ್ಯಗಳು ನಡೆದವು.
ದೇವಾಲಯ ಸಮಿತಿ ಅಧ್ಯಕ್ಷ ಟಿ.ಎಂ. ಚಾಮಿ, ಕಾರ್ಯದರ್ಶಿ ಸುರೇಶ್, ಸಮಿತಿ ಸದಸ್ಯರು, ಗ್ರಾಮದ ಯುವಕರ ಸಂಘಟನೆ, ಗ್ರಾಮ ಸಮಿತಿ, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಕೂಡಿಗೆ, ಕೂಡುಮಂಗಳೂರು, ಮದಲಾಪುರ, ಹಾರಂಗಿ, ಕುಶಾಲನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಅಗಮಿಸಿದ್ದ ಭಕ್ತರಿಗೆ ದೇವಾಲಯ ಸಮಿತಿ ವತಿಯಿಂದ ಅನ್ನಸಂರ್ತಪಣೆ ಕಾರ್ಯ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net