ಲೋಕೋಪಯೋಗಿ ಇಲಾಖೆ ನೌಕರ ಲೋಕಾ ಬಲೆಗೆ

ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಮಡಿಕೇರಿಯ ಲೋಕೋಪಯೋಗಿ ಇಲಾಖೆ ಇಇ ಕಚೇರಿ ನೌಕರ ಆರೋಪಿ ಶರತ್.
ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಮಡಿಕೇರಿಯ ಲೋಕೋಪಯೋಗಿ ಇಲಾಖೆ ಇಇ ಕಚೇರಿ ನೌಕರ ಆರೋಪಿ ಶರತ್.
Published on
ಕುಶಾಲನಗರ: ಗುತ್ತಿಗೆದಾರ ಪರವಾನಗಿ ನೀಡಲು ಲೋಕೋಪಯೋಗಿ ಇಲಾಖೆ ಕಚೇರಿಯ ನೌಕರನೊಬ್ಬ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಡಿ ಗ್ರೂಪ್ ನೌಕರ ಶರತ್ ಬಂಧಿತ. ಈತ ಮಡಿಕೇರಿಯಲ್ಲಿ ಲೋಕೋಪಯೋಗಿ ಇಲಾಖೆ ಇಇ ಕಚೇರಿಯಲ್ಲಿ ನೌಕರನಾಗಿದ್ದು, ಕುಶಾಲನಗರ ಸಮೀಪ ಕೂಡುಮಗಳೂರು ಬಳಿ ಸೋಮವಾರ ತನ್ನ ಮನೆಯಲ್ಲಿ ಗುತ್ತಿಗೆದಾರ ಲೈಸೆನ್ಸ್ ನೀಡಲು ರಾಘವೇಂದ್ರ ಎಂಬವರಿಂದ 10 ಸಾವಿರ ರೂ.ಲಂಚ ಪಡೆಯುತ್ತಿದ್ದ ಸಂದರ್ಭ ಸಿಕ್ಕಿಬಿದ್ದಿದ್ದಾನೆ.
ಗುತ್ತಿಗೆದಾರ ಲೈಸೆನ್ಸ್ ನೀಡಲು ತನಗೆ 10 ಸಾವಿರ ರೂ. ಮತ್ತು ತನ್ನ ಕಚೇರಿಯಲ್ಲಿ 4 ಸಾವಿರ ರೂ. ಸೇರಿದಂತೆ ಒಟ್ಟು 14 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದ. ಅದರಂತೆ ಶರತ್ 10 ಸಾವಿರ ರೂ. ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಲೋಕಾಯುಕ್ತ ಎಸ್ಪಿ ಉದೇಶ್ ಮಾರ್ಗದರ್ಶನ ಹಾಗೂ ಡಿವೈಎಸ್‌ಪಿ ದಿನಕರ ಶೆಟ್ಟಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್ ವೀಣಾ ನಾಯಕ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net