ವೆನಿಜುವೆಲಾ ದೇಶದ ಮೇಲೆ ಅಮೆರಿಕದ ಆಕ್ರಮಣ ನಡೆಸಿರುವುದನ್ನು ಖಂಡಿಸಿ ಸಿದ್ದಾಪುರದಲ್ಲಿ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮುಖಂಡರು ಪ್ರತಿಭಟನೆ ನಡೆಸಿದರು. ಮುಖಂಡರಾದ ಎನ್.ಡಿ. ಕುಟ್ಟಪ್ಪ, ಎಸ್. ಬೈಜು, ಮುಸ್ತಫಾ, ಸೀೀನಪ್ಪ ಮತ್ತು ಹಂಸ ಹಾಜರಿದ್ದರು.
ಸಿದ್ದಾಪುರ : ವೆನಿಜುವೆಲಾ ದೇಶದ ಮೇಲೆ ಸಾಮ್ರಾಜ್ಯಶಾಹಿ ಅಮೆರಿಕದ ಆಕ್ರಮಣ ನಡೆಸಿರುವುದನ್ನು ಖಂಡಿಸಿ
ಸಿದ್ದಾಪುರದಲ್ಲಿ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ( ಮಾರ್ಕ್ಸ್ ವಾದಿ) ವತಿಯಿಂದ ನಗರದ ಬಸ್
ನಿಲ್ದಾಣದ ಸಮೀಪ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭ ಮಾತನಾಡಿದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್. ಬಿ. ರಮೇಶ, ವೆನಿಜುವೆಲಾ ದೇಶದಲ್ಲಿನ ತೈಲ ಸಂಪತ್ತನ್ನು ಲೂಟಿ ಹೊಡೆಯುವ ಸಂಚಿನ ಭಾಗವಾಗಿ ಅಮೆರಿಕ ದಾಳಿ ನಡೆಸಿದೆ. ಅಲ್ಲಿನ ಅಧ್ಯಕ್ಷ ಮಡುರೊ ಮತ್ತು ಅವರ ಪತ್ನಿಯನ್ನು ಬಂಧಿಸಿರುವುದು ಖಂಡನೀಯ ಎಂದರು. ದರೋಡೆಕೋರ ನೀತಿಯ ಅಮೆರಿಕ ಅಧ್ಯಕ್ಷರು ಸಮಾಜವಾದಿ ತತ್ವಗಳ ಅಡಿ ಆಡಳಿತ ನಡೆಸುತ್ತಿರುವ ದೇಶದ ಮೇಲೆ ದಾಳಿ ನಡೆಸಿರುವುದು ಸಲ್ಲದು. ಅಮೆರಿಕವು ತಕ್ಷಣವೇ ವೆನೆಜುವೆಲಾ ಅಧ್ಯಕ್ಷ ಹಾಗೂ ಅವರ ಪತ್ನಿಯನ್ನು ಬಿಡುಗಡೆ ಮಾಡಬೇಕು. ಭಾರತ ಸರ್ಕಾರವೂ ವೆನೆಜುವೆಲಾ ಪರ ನಿಲ್ಲಬೇಕು ಎಂದು ಆಗ್ರಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಎನ್.ಡಿ. ಕುಟ್ಟಪ್ಪ, ಎಸ್. ಬೈಜು, ಮುಸ್ತಫಾ, ಸೀೀನಪ್ಪ ಮತ್ತು ಹಂಸ