ಕಸ್ತೂರಿರಂಗನ್ ವರದಿ ವಿರೋಧಿಸಿ ಪ್ರತಿಭಟನೆ

ಕಸ್ತೂರಿ ರಂಗನ್ ವರದಿ ಸಂಬAಧ ಅಧಿಸೂಚನೆಯಲ್ಲಿ ಪರಿಸರ ಸೂಕ್ಷö್ಮ ವಲಯವೆಂದು ಸೇರ್ಪಡೆಗೊಂಡಿರುವ ಹಿನ್ನೆಲೆಯಲ್ಲಿ ಕುಂದಚೇರಿ ಚೆಟ್ಟಿಮಾನಿ ಗ್ರಾ.ಪಂ ವ್ಯಾಪ್ತಿಯ ಕುಂದಚೇರಿ ಮತ್ತು ಕೋಪಟ್ಟಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕೀರ್ತಿ ಉತ್ತಪ್ಪ, ಕೆದಂಬಾಡಿ ಜಯಪ್ರಕಾಶ್, ಕಾವೇರಮ್ಮ, ಮಂಗೇರಿರ ಜಗದೀಶ್, ಕೀರ್ತಿ ಕುಮಾರ್, ಕೆ.ಯು. ಹ್ಯಾರೀಶ್, ದಬ್ಬಡ್ಕ ಇ. ಶ್ರೀಧರ್ ಮತ್ತಿತರರು ಇದ್ದರು.
ಕಸ್ತೂರಿ ರಂಗನ್ ವರದಿ ಸಂಬAಧ ಅಧಿಸೂಚನೆಯಲ್ಲಿ ಪರಿಸರ ಸೂಕ್ಷö್ಮ ವಲಯವೆಂದು ಸೇರ್ಪಡೆಗೊಂಡಿರುವ ಹಿನ್ನೆಲೆಯಲ್ಲಿ ಕುಂದಚೇರಿ ಚೆಟ್ಟಿಮಾನಿ ಗ್ರಾ.ಪಂ ವ್ಯಾಪ್ತಿಯ ಕುಂದಚೇರಿ ಮತ್ತು ಕೋಪಟ್ಟಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕೀರ್ತಿ ಉತ್ತಪ್ಪ, ಕೆದಂಬಾಡಿ ಜಯಪ್ರಕಾಶ್, ಕಾವೇರಮ್ಮ, ಮಂಗೇರಿರ ಜಗದೀಶ್, ಕೀರ್ತಿ ಕುಮಾರ್, ಕೆ.ಯು. ಹ್ಯಾರೀಶ್, ದಬ್ಬಡ್ಕ ಇ. ಶ್ರೀಧರ್ ಮತ್ತಿತರರು ಇದ್ದರು.
Published on
ಮಡಿಕೇರಿ:
ಕಸ್ತೂರಿರಂಗನ್ ವರದಿ ಸಂಬAಧ ಅಧಿಸೂಚನೆಯಲ್ಲಿ ಪರಿಸರ ಸೂಕ್ಷö್ಮ ವಲಯವೆಂದು ಸೇರ್ಪಡೆಗೊಂಡಿರುವ ಕುಂದಚೇರಿ ಚೆಟ್ಟಿಮಾನಿ ಗ್ರಾ.ಪಂ ವ್ಯಾಪ್ತಿಯ ಕುಂದಚೇರಿ ಮತ್ತು ಕೋಪಟ್ಟಿ ಗ್ರಾಮವನ್ನು ತಕ್ಷಣ ಕೈಬಿಡಬೇಕೆಂದು ಈ ಭಾಗದ ಗ್ರಾಮಸ್ಥರು, ರೈತರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಹಾಗೂ ಜನಪ್ರತಿನಿಧಿಗಳು ಒತ್ತಾಯಿಸಿದ್ದಾರೆ. ಗ್ರಾ.ಪಂ. ಸಭಾಂಗಣದಲ್ಲಿ ಬುಧವಾರ ಸಭೆ ನಡೆಸಿದ ಸ್ಥಳೀಯರು ಜು.27 ರಂದು ಬಿಡುಗಡೆಯಾದ 7ನೇ ಅಧಿಸೂಚನೆಯಲ್ಲಿ ಕುಂದಚೇರಿ ಮತ್ತು ಕೋಪಟ್ಟಿ ಗ್ರಾಮವನ್ನು ಸೇರಿಸಿರುವ ಕ್ರಮವನ್ನು ತೀವ್ರವಾಗಿ ವಿರೋಧಿಸಿದರು.
ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಕೆದಂಬಾಡಿ ಕೀರ್ತಿ ಕುಮಾರ್ ಈ ಸಂದರ್ಭ ಮಾತನಾಡಿ, ಕಸ್ತೂರಿ ರಂಗನ್ ವರದಿಯಿಂದ ಜನರಿಗೆ ಆಗುವ ತೊಂದರೆ ಮತ್ತು ಅನಾನುಕೂಲದ ಬಗ್ಗೆ ಮಾಹಿತಿ ನೀಡಿದರು.
ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ಕೆ.ಯು. ಹ್ಯಾರೀಶ್ ಮಾತನಾಡಿ, ಕಸ್ತೂರಿ ರಂಗನ್ ವರದಿಗೆ ಸಂಬAಧಪಟ್ಟAತೆ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು 2012ರಲ್ಲಿ ಸಭೆ ನಡೆಸಿ ಎರಡು ಗ್ರಾಮಗಳನ್ನು ಕೈ ಬಿಡುವಂತೆ ಒತ್ತಾಯಿಸಿ ಅಂದಿನ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲಾಗಿತ್ತು. ಕುಂದಚೇರಿ ಹಾಗೂ ಕೋಪಟ್ಟಿ ಗ್ರಾಮದಲ್ಲಿ ಬಡ ಜನರು ಭತ್ತ, ಕಾಫಿ, ಕರಿಮೆಣಸು, ಏಲಕ್ಕಿ, ಬಾಳೆ, ಅಡಿಕೆ, ತೆಂಗು ಮತ್ತಿತರ ಮಿಶ್ರ ಕೃಷಿ ಮಾಡಿಕೊಂಡು ಬಹು ಹಿಂದಿನಿAದಲೇ ಬದುಕು ಕಟ್ಟಿಕೊಂಡಿದ್ದಾರೆ. ಅಲ್ಲದೆ 1979, 1981, 1983, 1987ರಲ್ಲಿ ನಿವೃತ್ತಿ ಹೊಂದಿದ ಯೋಧರಿಗೆ, ಪರಿಶಿಷ್ಟ ಜಾತಿ, ಪಂಗಡದವರಿಗೆ, ಕಾರ್ಮಿಕರಿಗೆ ಹಾಗೂ ಕೃಷಿಕರಿಗೆ ಜಾಗದ ಹಕ್ಕು ಪತ್ರ, ಪಹಣಿ ಪತ್ರ ನೀಡಲಾಗಿದೆ. ಕೃಷಿಯನ್ನೇ ಅವಲಂಬಿಸಿಕೊAಡು ಜೀವನ ಸಾಗಿಸುತ್ತಿರುವ ಜನರಿಗೆ ಕಸ್ತೂರಿ ರಂಗನ್ ವರದಿಯಿಂದ ತೊಂದರೆಯಾಗಲಿದೆ.
ತಕ್ಷಣ ಪರಿಸರ ಸೂಕ್ಷö್ಮ ವಲಯದ ಪಟ್ಟಯಿಂದ ಕುಂದಚೇರಿ ಮತ್ತು ಕೋಪಟ್ಟಿ ಗ್ರಾಮಗಳನ್ನು ಕೈಬಿಡಬೇಕು. ಈ ಬಗ್ಗೆ ಸಂಬAಧಿಸಿದ ಇಲಾಖೆ ಹಾಗೂ ಕೇಂದ್ರ ಸರ್ಕಾರ ಕ್ರಮ ಕೈಗೊಂಡು ಗ್ರಾಮಸ್ಥರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.
ಚೆಟ್ಟಿಮಾನಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ದಬ್ಬಡ್ಕ ಇ. ಶ್ರೀಧರ್ ಮಾತನಾಡಿ ಕೃಷಿಕರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಕಸ್ತೂರಿ ರಂಗನ್ ವರದಿಯಿಂದ ಕುಂದಚೇರಿ ಪಂಚಾಯಿತಿ ವ್ಯಾಪ್ತಿಯ ನಾಲ್ಕು ಗ್ರಾಮಗಳಿಗೆ ತೊಂದರೆಯಾಗುವುದು ನಿಶ್ಚಿತವಾಗಿದ್ದು, ಮುಂದಿನ ದಿನಗಳಲ್ಲಿ ಪಕ್ಷಾತೀತವಾಗಿ ಹೋರಾಟ ನಡೆಸಲಾಗುವುದು ಎಂದರು.
ಕಸ್ತೂರಿ ರಂಗನ್ ವರದಿ ಅಧಿಸೂಚನೆ ಮತ್ತು ಆಕ್ಷೇಪಣೆ ಸಲ್ಲಿಸುವ ಕುರಿತು ಪ್ರಮುಖರಾದ ಸಿ.ಎಸ್. ರಶೀದ್ ಮಾಹಿತಿ ನೀಡಿದರು
ಪ್ರಮುಖರಾದ ಕೀರ್ತಿ ಉತ್ತಪ್ಪ, ಕೆದಂಬಾಡಿ ಜಯಪ್ರಕಾಶ್, ಕಾವೇರಮ್ಮ, ಮಂಗೇರಿರ ಜಗದೀಶ್ ಸೇರಿದಂತೆ ಹಲವರು ವರದಿಯನ್ನು ವಿರೋಧಿಸಿದರು ಮತ್ತು ಆಕ್ಷೇಪಣೆ ಸಲ್ಲಿಸುವಂತೆ ತಿಳಿಸಿದರು.
ಗ್ರಾ.ಪಂ ಮಾಜಿ ಅಧ್ಯಕ್ಷ ಪಿ.ಬಿ. ದಿನೇಶ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಹಿರಿಯರಾದ ಕೆದಂಬಾಡಿ ಟಿ. ರಮೇಶ್, ಕೆದಂಬಾಡಿ ಬಿ. ಸುರೇಂದ್ರ, ಕೆದಂಬಾಡಿ ವಿಶು ಪ್ರವೀಣ್ ಕುಮಾರ್, ಪಾಣತ್ತಲೆ ಲೋಕನಾಥ್, ಕೋಡಿ ಹಂಸ, ವೇಣುಗೋಪಾಲ್, ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಎ. ದಿನೇಶ್, ಹಿರಿಯರಾದ ಕೋಡಿ ತ್ಯಾಗರಾಜ್, ಇಂದುಮತಿ ರವೀಂದ್ರ, ಬಿ.ಎ. ಸುರೇಂದ್ರ, ಕೆ. ಶೇಖರ್, ಅಲ್ಲಂಗಡ ಉತ್ಪಪ್ಪ, ಮತ್ತಾರಿ ಶ್ರೀನಿವಾಸ್, ಕೆ.ಎಂ. ಇಸ್ಮಾಯಿಲ್, ಕೆ.ಎಸ್. ಅಣ್ಣಯ್ಯ, ಕಿರಣ್ ಮಂಜು, ಪೊನ್ನೇಟಿ ಅನುಜ ರಾಕೇಶ್, ಕೆದಂಬಾಡಿ ಪ್ರಸನ್ನ ಕುಮಾರ್, ಪೊನ್ನೇಟಿ ಪ್ರಸನ್ನ, ಪಿ.ಎಂ. ಇಬ್ರಾಹಿಂ, ಜಿಮ್ಮಿ ಕೆದಂಬಾಡಿ ಹರೀಶ್, ಕೆ. ಶಿವಕುಮಾರ್, ಸತ್ಯಭಾಮ, ಸೋಮ ಮತ್ತಿತರರು ಸಭೆಯಲ್ಲಿ ಪಾಲ್ಗೊಡಿದ್ದರು.
ಸಭೆಯ ನಂತರ ಚೆಟ್ಟಿಮಾನಿ ಪಟ್ಟಣದಲ್ಲಿ 10 ನಿಮಿಷ ಸಾಂಕೇತಿಕವಾಗಿ ರಸ್ತೆ ತಡೆ ಪ್ರತಿಭಟನೆ ನಡೆಸಿ ವರದಿಯ ವಿರುದ್ಧ ಘೋಷಣೆಗಳನ್ನು ಕೂಗಿದರು. ವರದಿಗೆ ಆಕ್ಷೇಪಣೆ ವ್ಯಕ್ತಪಡಿಸಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯ ಮೂಲಕ ಮನವಿ ಪತ್ರ ಸಲ್ಲಿಸಿದರು. ಇದೇ ಆ.13ರಂದು ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಸರ್ಕಾರಕ್ಕೆ ಆಕ್ಷೇಪಣಾ ಪತ್ರ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net