ಭೂಪರಿವರ್ತನೆ, ಮರಗಳ ಹನನ ವಿರುದ್ಧ ಪ್ರತಿಭಟನೆ

ಮಡಿಕೇರಿ ಹೊರವಲಯದ ಕೆ.ನಿಡುಗಣೆ ಗ್ರಾಮದಲ್ಲಿ ನಿವೇಶನಗಳ ಬೃಹತ್ ಯೋಜನೆಗಾಗಿ ಭೂ ಪರಿವರ್ತನೆ ಮಾಡಿ ದೊಡ್ಡ ಪ್ರಮಾಣದಲ್ಲಿ ಮರಗಳ ಹನನ ನಡೆಸಲಾಗಿದೆ ಎಂದು ಆರೋಪಿಸಿ ಕೊಡಗು ಮತ್ತು ಕಾವೇರಿ ರಕ್ಷಣಾ ವೇದಿಕೆ ವತಿಯಿಂದ ನಡೆದ ಪ್ರತಿಭಟನೆ ಸಂದರ್ಭ ಪರಿಸರ ಮತ್ತು ಆರೋಗ್ಯ ಪ್ರತಿಷ್ಠಾನ ಗೌರವ ಕಾರ್ಯದರ್ಶಿ ಕರ್ನಲ್ ಸಿ.ಪಿ. ಮುತ್ತಣ್ಣ ಮಾತನಾಡಿದರು. ಪದ್ಮಿನಿ ಶಶಿಧರ್, ಟಿ.ಪಿ. ಶರತ್, ಶಾನ್ ಬೋಪಯ್ಯ, ಅರುಣ್ ಚಂಗಪ್ಪ, ಫ್ರಾಂಕ್ಲಿನ್, ಶಿವಶಂಕರ್, ಅಮ್ಮಾಟಂಡ ಪೃಥ್ವಿ ದೇವಯ್ಯ ಮತ್ತಿತರರು ಇದ್ದರು.
ಮಡಿಕೇರಿ ಹೊರವಲಯದ ಕೆ.ನಿಡುಗಣೆ ಗ್ರಾಮದಲ್ಲಿ ನಿವೇಶನಗಳ ಬೃಹತ್ ಯೋಜನೆಗಾಗಿ ಭೂ ಪರಿವರ್ತನೆ ಮಾಡಿ ದೊಡ್ಡ ಪ್ರಮಾಣದಲ್ಲಿ ಮರಗಳ ಹನನ ನಡೆಸಲಾಗಿದೆ ಎಂದು ಆರೋಪಿಸಿ ಕೊಡಗು ಮತ್ತು ಕಾವೇರಿ ರಕ್ಷಣಾ ವೇದಿಕೆ ವತಿಯಿಂದ ನಡೆದ ಪ್ರತಿಭಟನೆ ಸಂದರ್ಭ ಪರಿಸರ ಮತ್ತು ಆರೋಗ್ಯ ಪ್ರತಿಷ್ಠಾನ ಗೌರವ ಕಾರ್ಯದರ್ಶಿ ಕರ್ನಲ್ ಸಿ.ಪಿ. ಮುತ್ತಣ್ಣ ಮಾತನಾಡಿದರು. ಪದ್ಮಿನಿ ಶಶಿಧರ್, ಟಿ.ಪಿ. ಶರತ್, ಶಾನ್ ಬೋಪಯ್ಯ, ಅರುಣ್ ಚಂಗಪ್ಪ, ಫ್ರಾಂಕ್ಲಿನ್, ಶಿವಶಂಕರ್, ಅಮ್ಮಾಟಂಡ ಪೃಥ್ವಿ ದೇವಯ್ಯ ಮತ್ತಿತರರು ಇದ್ದರು.
Published on
ಮಡಿಕೇರಿ:
ಮಡಿಕೇರಿ ಹೊರವಲಯದ ಕೆ.ನಿಡುಗಣೆ ಗ್ರಾಮದಲ್ಲಿ ನಿವೇಶನಗಳ ಬೃಹತ್ ಯೋಜನೆಗಾಗಿ ಭೂ ಪರಿವರ್ತನೆ ಮಾಡಿ ದೊಡ್ಡ ಪ್ರಮಾಣದಲ್ಲಿ ಮರಗಳ ಹನನ ನಡೆಸಲಾಗಿದೆ ಎಂದು ಆರೋಪಿಸಿ ಕೊಡಗು ಮತ್ತು ಕಾವೇರಿ ರಕ್ಷಣಾ ವೇದಿಕೆ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
1,500 ಕ್ಕೂ ಹೆಚ್ಚು ನಿವೇಶನಗಳನ್ನು ಒಳಗೊಂಡ ದೊಡ್ಡ ಮಟ್ಟದ ಲೇ ಔಟ್‌ಗಾಗಿ ಜಮ್ಮಾ ಬಾಣೆ ಜಾಗವನ್ನೇ ಅಕ್ರಮವಾಗಿ ಭೂ ಪರಿವರ್ತನೆ ಮಾಡಿಸಲಾಗಿದೆ. ಇಲ್ಲಿದ್ದ ಸಾವಿರಾರು ಸಂಖ್ಯೆಯ ಮರಗಳನ್ನು ಕಡಿಯಲಾಗಿದೆ. ಬಡವರಿಗೆ ಮನೆ ನೀಡುವ ನೆಪದಿಂದ ಇಲ್ಲಿ ದೊಡ್ಡ ಹಗರಣ ನಡೆಸಲಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಕೊಡಗಿನ ಅಸ್ತಿತ್ವಕ್ಕೆ ಗಂಭೀರ ದುಷ್ಪÀರಿಣಾಮ ಬೀರುವ ಈ ಬೃಹತ್ ಯೋಜನೆಯನ್ನು ಕೂಡಲೇ ಸರ್ಕಾರ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಮಡಿಕೇರಿ ಸಮೀಪದ ಕೆ.ನಿಡುಗಣೆ ಗ್ರಾಮದ ಸುಂದರ ಪ್ರಕೃತಿ ತಾಣವೊಂದು ಇದೀಗ ಅಕ್ರಮ ಯೋಜನೆಗಳಿಗೆ ಬಲಿಯಾಗಿದೆ. ಕ್ಷೇತ್ರದ ಶಾಸಕರು ಜಿಲ್ಲೆಯ ಹಿತÀದೃಷ್ಟಿಯಿಂದ ಕೂಡಲೇ ಮಧ್ಯ ಪ್ರವೇಶಿಸಿ ಹೋರಾಟಗಾರರೊಂದಿಗೆ ಕೈಜೋಡಿಸಬೇಕು. ಕಾನೂನು ಪ್ರಕಾರ ಜಮ್ಮಾ ಬಾಣೆ ಜಾಗÀ ಪರಿವರ್ತನೆ ಮಾಡುವಂತಿಲ್ಲ. ಆದರೆ ಇಲ್ಲಿ ಭೂ ಪರಿವರ್ತನೆ ಮಾಡಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಮರಗಳನ್ನು ಕಡಿದು ನಾಶಪಡಿಸಲಾಗಿದೆ. ಮುಡಾ ಮತ್ತು ಸ್ಥಳೀಯ ಗ್ರಾಮ ಪಂಚಾಯ್ತಿ ಕೂಡಾ ಈ ಹಗÀರಣಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿದರು.
ಯಾವುದೇ ಕಾರಣಕ್ಕೂ ಈ ಸೂಕ್ಷö್ಮ ಪರಿಸರದಲ್ಲಿ ಅಕ್ರಮ ಯೋಜನೆ ತಲೆಯೆತ್ತಲು ಬಿಡುವುದಿಲ್ಲ. ಯೋಜನೆಯನ್ನು ಕೂಡಲೇ ಕೈಬಿಟ್ಟು ನಿವೇಶನ ಜಾಗವನ್ನು ಹಿಂದಿನAತೆ ಹಸಿರೀಕರಣ ಮಾಡಬೇಕು ಎಂದು ಒತ್ತಾಯಿಸಿದ ಪರಿಸರ ಮತ್ತು ಆರೋಗ್ಯ ಪ್ರತಿಷ್ಠಾನ ಗೌರವ ಕಾರ್ಯದರ್ಶಿ ಕರ್ನಲ್ ಸಿ.ಪಿ. ಮುತ್ತಣ್ಣ ಮಡಿಕೇರಿಗೆ ನೀರುಣಿಸುವ ಕೂಟುಹೊಳೆಯ ಜಲಾನಯನ ಪ್ರದೇಶವಾದ ಈ ಜಾಗದಲ್ಲಿ ಹರಿವ ನೀರಿಗೆ ತಡೆಯೊಡ್ಡಲಾಗಿದೆ. ಬದಲಿಗೆ, ನಿವೇಶನಗಳಿಂದ ಬರುವ ಕೊಳಕು ನೀರನ್ನು ಹೊಳೆಗೆ ಹರಿಸಲು ಯೋಜಿಸಲಾಗಿದೆ. ಯೋಜನೆ ಕೈಬಿಡುವವರಗೂ ಹೋರಾಟ ಮೂಂದುವರೆಯಲಿದೆ. ಇಲ್ಲಿ ನಡೆದಿರುವ ಅಕ್ರಮದ ವಿರುದ್ಧ ಕ್ರಮಕ್ಕೆ ಮನವಿ ಮಾಡಿ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. ಸರ್ಕಾರ ತಕ್ಷಣ ಯೋಜನೆ ರದ್ದುಗೊಳಿಸದಿದ್ದರೆ ನ್ಯಾಯಾಲಯದ ಕದ ತಟ್ಟುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕೊಡಗು ಅಭಿವೃಧ್ಧಿ ಸಮಿತಿ ಅಧ್ಯಕ್ಷ ಪ್ರಸನ್ನ ಭಟ್ ಮಾತನಾಡಿ ಕೆ. ನಿಡುಗಣೆಯಲ್ಲಿ ಆರಂಭವಾಗಿರುವ ಈ ಅಕ್ರಮ ಯೋಜನೆಯ ವಿರುದ್ಧ ಸಾಂಕೇತಿಕ ಹೋರಾಟ ಆರಂಭವಾಗಿದ್ದು, ಕೊಡಗಿನ ಪರಿಸರಕ್ಕೆ ಧಕ್ಕೆಯುಂಟು ಮಾಟುವ ಎಲ್ಲಾ ಯೋಜನೆಗಳನ್ನು ವಿರೋಧಿಸಿ ಹೋರಾಟ ಮುಂದುವರೆಸಲಾಗುವದು. ರಾತೋರಾತ್ರಿ ಭಾರೀ ಪ್ರಮಾಣದ ಮರಗಳನ್ನು ಕಡಿದು ಸಾಗಿಸಲಾಗಿದ್ದು, ನೂರಾರು ಮರಗಳನ್ನು ಜಾಗÀದಲ್ಲೇ ಹೂತಿಡಲಾಗಿದೆ ಎಂದು ಆರೋಪಿಸಿದರು.
ಸ್ಥಳೀಯರು ಇ-ಸ್ವತ್ತಿಗೆ ಅರ್ಜಿ ಹಾಕಿದರೆ ಸಬೂಬು ಹೇಳುವ ಮತ್ತು ವಿಳಂಬ ಧೋರಣೆ ಅನುಸರಿಸುವ ಅಧಿಕಾರಿಗಳು, ಕೆ. ನಿಡುಗಣೆಯ ಈ ಅಕ್ರಮ ಯೋಜನೆಗಾಗಿ ಒಂದೇ ತಿಂಗಳಲ್ಲಿ ನೂರಾರು ಇ-ಸ್ವತ್ತು ಅರ್ಜಿಗಳನ್ನು ವಿಲೇವಾರಿ ಮಾಡಿದ್ದು ಹೇಗೆ? ಎಂದು ಸ್ಥಳದಲ್ಲಿ ಇದ್ದ ಗ್ರಾಮಸ್ಥರು ಪ್ರಶ್ನೆ ಮಾಡಿದರು. ಕಣ್ಣ ಮುಂದೆಯೇ ಅಕ್ರಮವಾಗಿ ಭಾರಿ ಯೋಜನೆ ರೂಪುಗೊಳ್ಳ್ಳುತ್ತಿದ್ದರೂ, ಸ್ಥಳೀಯ ಗ್ರಾಮ ಪಂಚಾಯ್ತಿಯ ಯಾವೊಬ್ಬ ಪ್ರತಿನಿಧಿಯೂ ಧ್ವನಿಯೆತ್ತದಿರುವುದನ್ನು ಸ್ಥಳೀಯರು ಖಂಡಿಸಿದರು.
ವಿವಿಧ ಸಂಘಟನೆಗಳ ಪ್ರಮುಖರಾದ ಪದ್ಮಿನಿ ಶಶಿಧರ್, ಟಿ.ಪಿ. ಶರತ್, ಶಾನ್ ಬೋಪಯ್ಯ, ಅರುಣ್ ಚಂಗಪ್ಪ, ಫ್ರಾಂಕ್ಲಿನ್, ಶಿವಶಂಕರ್, ಅಮ್ಮಾಟಂಡ ಪೃಥ್ವಿ ದೇವಯ್ಯ ಮತ್ತಿತರರು ಇದ್ದರು.
"

ಕರ್ನಾಟಕ ಲ್ಯಾಂಡ್ ರೆವೆನ್ಯೂ ಆ್ಯಕ್ಟ್ ಪ್ರಕಾರ ಯಾವುದೇ ಜಮ್ಮ ಬಾಣೆ, ಕಾಫಿ ತೋಟ, ಗದ್ದೆಗಳನ್ನು ವಾಣಿಜ್ಯ ಪರಿವರ್ತನೆ ಮಾಡಲು ಯಾರಿಗೂ ಯಾವ ಹಕ್ಕೂ ಇಲ್ಲ. ನಮ್ಮ ಮಾಹಿತಿ ಪ್ರಕಾರಣ ಕೆ. ನಿಡುಗಣೆ ಜಾಗ ಮುಂಚೆ ಜಮ್ಮ ಬಾಣೆ ಆಗಿತ್ತು. ನಂತರ ಕಾಫಿ ಎಸ್ಟೇಟ್ ಮಾಡಿ ಮಾರಾಟ ಆಗಿದೆ. ಇದಾದ ಮೇಲೆ ಭೂ ಪರಿವರ್ತನೆ ಮಾಡಲಾಗಿದೆ. ಈ ಯೋಜನೆ ಆಗಲು ನಾವು ಖಂಡಿತ ಬಿಡುವುದಿಲ್ಲ. ಈ ವಿಷಯದಲ್ಲಿ ಕ್ಷೇತ್ರದ ಶಾಸಕರ ನಿಲುವು ಗಮನಿಸಿ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಮಾಡಲಾಗುತ್ತದೆ.

— ಕರ್ನಲ್ ಸಿ.ಪಿ. ಮುತ್ತಣ್ಣ, ಗೌರವ ಕಾರ್ಯದರ್ಶಿ, ಪರಿಸರ ಮತ್ತು ಆರೋಗ್ಯ ಪ್ರತಿಷ್ಠಾನ
"

ಕೆ. ನಿಡುಗಣೆ ಮಾತ್ರವಲ್ಲ ಕೊಡಗಿನಲ್ಲಿ ಆಗುತ್ತಿರುವ ಇಂಥ ಹಲವು ಯೋಜನೆಗಳಲ್ಲಿ ಕಾನೂನಿನ ಸ್ಪಷ್ಟ ಉಲ್ಲಂಘನೆ ಆಗಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಜತೆ ಸೇರಿಕೊಂಡು ಇಂಥ ಯೋಜನೆ ಮಾಡಲಾಗುತ್ತಿದೆ. ಈ ರೀತಿಯ ಯೋಜನೆಗಳ ಹೆಸರಿನಲ್ಲಿ ಕೊಡಗಿನ ಪರಿಸರ ಮೇಲೆ ದೊಡ್ಡ ಪ್ರಮಾಣದ ದಾಳಿ ಮಾಡಲಾಗುತ್ತಿದೆ. ಈ ವಿಷಯದಲ್ಲಿ ಇಲ್ಲಿನ ಶಾಸಕರದ್ದು ದೊಡ್ಡ ಜವಾಬ್ದಾರಿ ಇದೆ. ಈ ಯೋಜನೆ ಬಗ್ಗೆ ಅವರ ಸ್ಪಷ್ಟನೆ ಬೇಕು.

— ಪದ್ಮಿನಿ ಶಶಿಧರ್, ಸೇವ್ ಕೊಡಗು ಸಂಘಟನೆ ಮುಖ್ಯಸ್ಥರು


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net