ಕುಪ್ರೋಡಂಡ ಎ.ರಫೀಕ್‌ಗೆ ಮುಂಬಡ್ತಿ

ಡಿಟೆಕ್ಟಿವ್ ಪೊಲೀಸ್ ಇನ್‌ಸ್ಪೆಕ್ಟರ್ ಆಗಿ ಬಡ್ತಿ ಪಡೆದ ಕುಪ್ರೋಡಂಡ ಎ.ರಫೀಕ್
ಡಿಟೆಕ್ಟಿವ್ ಪೊಲೀಸ್ ಇನ್‌ಸ್ಪೆಕ್ಟರ್ ಆಗಿ ಬಡ್ತಿ ಪಡೆದ ಕುಪ್ರೋಡಂಡ ಎ.ರಫೀಕ್
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನ ಸಿಐಡಿ ಘಟಕ
  • ಡಿಎಸ್‌ಐ ಆಗಿ ಕರ್ತವ್ಯ
  • ಕುಪ್ರೋಡಂಡ ಎ.ರಫೀಕ್
ಪೊನ್ನಂಪೇಟೆ: ಬೆಂಗಳೂರಿನ ಸಿಐಡಿ ಘಟಕದಲ್ಲಿ ಡಿಟೆಕ್ಟಿವದದ ಸಬ್ ಇನ್‌ಸ್ಪೆಕ್ಟರ್ (ಡಿಎಸ್‌ಐ) ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕುಪ್ರೋಡಂಡ ಎ.ರಫೀಕ್ ಪೊಲೀಸ್ ಇನ್‌ಸ್ಪೆಕ್ಟರ್ ಆಗಿ ಮುಂಬಡ್ತಿ ನೀಡಿ ಸಿಐಡಿ ಘಟಕದಲ್ಲೇ ಮುಂದುವರಿಸಲಾಗಿದೆ.
ಈ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಅನುಮೋದನೆಯೊಂದಿಗೆ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯ ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಆಡಳಿತ) ಸೌಮೇಟದು ಮುಖರ್ಜಿ ಮಂಗಳವಾರ ಆದೇಶ ಹೊರಡಿಸಿದ್ದಾರೆ. ಎ.ರಫೀಕ್ ಅವರು ಎಡಪಾಲ ಗ್ರಾಮದವರಾಗಿದ್ದು, ದಿ ಕೆ.ಕೆ.ಅಹಮದ್‌ಹಾಜಿ ಅವರ ಪುತ್ರ. ಈ ಹಿಂದೆ ಭಾರತೀಯ ಸೇನೆಯಲ್ಲಿಯೂ ಅವರು ಸೇವೆ ಸಲ್ಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net