ಈ ಮಾರ್ಗದಲ್ಲಿ ಹೆಚ್ಚುವರಿ ಬಸ್‌ಗಳನ್ನು ಓಡಿಸುವಂತೆ ಈಗಾಗಲೇ ಸಾಕಷ್ಟು ಬಾರಿ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎನ್ನುವ ಅಳಲು ಪ್ರಯಾಣಿಕರದ್ದು. ದೊಡ್ಡ ದುರಂತ ಸಂಭವಿಸುವ ಮೊದಲು ಸಂಬAಧಿಸಿದವರು ಎಚ್ಚೆತ್ತುಕೊಳ್ಳಬೇಕಿದೆ ಎನ್ನುತ್ತಾರೆ ಅವರು. ಬೆಳಗ್ಗಿನ ವೇಳೆ ಹಾಸನದಿಂದ ಸಾಕಷ್ಟು ಸಂಖ್ಯೆಯ ಬಸ್‌ಗಳು ಕುಶಾಲನಗರಕ್ಕೆ ಬಂದು ವಾಪಸ್ ತೆರಳುವಾಗ ಖಾಲಿ ಇರುತ್ತದೆ. ಇದರ ಬದಲು ಈ ಬಸ್‌ಗಳನ್ನು ಮಡಿಕೇರಿ ತನಕ ಸಂಚರಿಸುವAತೆ ಮಾಡಬಹುದು ಎನ್ನುವ ಸಲಹೆಗಳು ಕೇಳಿ ಬರುತ್ತಿದೆ. ಇದರ ಜತೆಗೆ ಮಡಿಕೇರಿ-ಕುಶಾಲನಗರ ಮಾರ್ಗದಲ್ಲಿ ಸುಂಟಿಕೊಪ್ಪದಲ್ಲಿ ಮಾತ್ರ ಒಂದು ನಿಲುಗಡೆ ಕೊಟ್ಟು ಕೂಡ ಹೆಚ್ಚಿನ ಬಸ್‌ಗಳನ್ನು ಓಡಿಸುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ಕುಶಾಲನಗರ, ಮಡಿಕೇರಿ ಹಾಗೂ ಸುಂಟಿಕೊಪ್ಪದ ಪ್ರಯಾಣಿಕರಿಗೂ ಅನುಕೂಲ ಆಗಲಿದೆ ಎನ್ನುತ್ತಾರೆ ಈ ಮಾರ್ಗದಲ್ಲಿ ಪ್ರತಿನಿತ್ಯ ಸಂಚರಿಸುವ ಪ್ರಯಾಣಿಕರು. ಈ ಮಾರ್ಗದಲ್ಲಿ ಬಸ್ ವ್ಯವಸ್ಥೆ ಸುಧಾರಿಸದಿದ್ದಲ್ಲಿ ಇಲ್ಲಿ ಸಂಚರಿಸುವ ಪ್ರಯಾಣಿಕರು ಒಟ್ಟು ಸೇರಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಮಡಿಕೇರಿ ಡಿಪೋ ಎದುರು ಪ್ರತಿಭಟನೆ ನಡೆಸಬೇಕಾಗಬಹುದು ಎನ್ನುವ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.