ಸರ್ಕಾರಿ ಶಾಲೆ ಮಕ್ಕಳಿಗೆ ಬಹುಮಾನ ವಿತರಣೆ

ಸರ್ಕಾರಿ ಪದವಿಪೂರ್ವ ಪ್ರೌಢಶಾಲೆಯಲ್ಲಿ  ಇಬ್ರಾಹಿಂ ಬಾಪ್ಪು ವಿಜೇತ ಮಕ್ಕಳಿಗೆ ಬಹುಮಾನ ನೀಡಿದರು. ಬಾಲಕೃಷ್ಣ,  ಪ್ರಕಾಶ್, ಚಿತ್ರಾ, ಲಿಯೋನಾ, ಜಯಶ್ರೀ, ಶಾಂತಾ ಹೆಗ್ಡೆ ಇದ್ದರು.
ಸರ್ಕಾರಿ ಪದವಿಪೂರ್ವ ಪ್ರೌಢಶಾಲೆಯಲ್ಲಿ ಇಬ್ರಾಹಿಂ ಬಾಪ್ಪು ವಿಜೇತ ಮಕ್ಕಳಿಗೆ ಬಹುಮಾನ ನೀಡಿದರು. ಬಾಲಕೃಷ್ಣ, ಪ್ರಕಾಶ್, ಚಿತ್ರಾ, ಲಿಯೋನಾ, ಜಯಶ್ರೀ, ಶಾಂತಾ ಹೆಗ್ಡೆ ಇದ್ದರು.
Published on
ಸುಂಟಿಕೊಪ್ಪ : ಸರ್ಕಾರಿ ಪದವಿಪೂರ್ವ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ವಿವಿಧ ಕ್ರೀಡಾಕೂಟಗಳನ್ನು ಅಯೋಜಿಸಲಾಗಿತ್ತು. ವಿಜೇತ ಮಕ್ಕಳಿಗೆ ಸಮಾಜ ಸೇವಕ ಇಬ್ರಾಹಿಂ (ಬಾಪ್ಪು) ಬಹುಮಾನ ವಿತರಿಸಿದರು.
ಶಾಲೆ ಉಪಪ್ರಾಂಶುಪಾಲ ಬಾಲಕೃಷ್ಣ ಮಾತನಾಡಿ, ಸರ್ಕಾರಿ ಶಾಲೆಗೆ ದಾನಿಗಳು ದೊರೆಯುವುದೇ ಅಪರೂಪ. ಇಂತಹ ಸಂದರ್ಭದಲ್ಲಿ ಸ್ಥಳೀಯರಾದ ಇಬ್ರಾಹಿಂ ಬಾಪು ಅವರು ಅಭಿಮಾನವಿಟ್ಟು ಕ್ರೀಡಾಕೂಟದಲ್ಲಿ ಜಯಗಳಿಸಿದ ಮಕ್ಕಳಿಗೆ ಬಹುಮಾನಗಳನ್ನು ಪ್ರಯೋಜಿಸಿರುವುದು ಅವರ ದೊಡ್ಡತನ. ಶಾಲೆಯ ಅಭಿವೃದ್ಧಿಯ ದಿಸೆಯಲ್ಲಿ ಹಳೆಯ ವಿದ್ಯಾರ್ಥಿಗಳು ಶಾಲೆಯ ಕಟ್ಟಡಗಳನ್ನು ದುರಸ್ತಿಗೊಳಿಸುವ ಮೂಲಕ ರೂಪುಗೊಳಿಸಿರುವುದು ಮತ್ತು ಕೆನರಾ ಬ್ಯಾಂಕ್ ವತಿಯಿಂದ ಶಾಲೆಗೆ ಅಭಿವೃದ್ಧಿಗೆ 2 ಲಕ್ಷ ರೂ. ದೇಣಿಗೆ ದೊರೆತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಶಾಲಾ ಶಿಕ್ಷಕ ಪ್ರಕಾಶ್ ಮಾತನಾಡಿ, ಇಬ್ರಾಹಿಂ ಬಾಪ್ಪು ತಮ್ಮ ಸಂಪಾದನೆಯಲ್ಲಿ ಸಮಾಜಕ್ಕೆ ತನ್ನ ಕೊಡುಗೆಯ ಇರಬೇಕೆನ್ನುವ ಮನಸ್ಥಿತಿಯನ್ನು ಹೊಂದಿದ್ದಾರೆ. ಎಷ್ಟೇ ಇದ್ದರೂ ದಾನ ನೀಡುವ ಮನಸ್ಥಿತಿ ಹೊಂದಿಲ್ಲದವರ ಮಧ್ಯದಲ್ಲಿಯೂ ಇಬ್ರಾಹಿಂ ಬಾಪ್ಪು ಆಶಾಕಿರಣವಾಗಿ ಹೊರಹೊಮ್ಮಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಇಬ್ರಾಹಿಂ ಬಾಪ್ಪು ಅವರನ್ನು ಶಾಲಾ ಮುಖ್ಯಶಿಕ್ಷಕ, ಸಹಶಿಕ್ಷಕರು ಸನ್ಮಾನಿಸಿದರು. ಮುಸ್ತಾಫ, ಸಹಶಿಕ್ಷಕರುಗಳಾದ ಚಿತ್ರಾ, ಲಿಯೋನಾ, ಜಯಶ್ರೀ, ಶಾಂತಾ ಹೆಗ್ಡೆ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net