ಸುಟ್ಟು ಭಸ್ಮವಾದ ಖಾಸಗಿ ಬಸ್

ಮಾಕುಟ್ಟದ ಮಗಡಿಪಾರೆಯಲ್ಲಿ ಖಾಸಗಿ ಬಸ್ ಹೊತ್ತು ಉರಿಯುತ್ತಿರುವುದು.
ಮಾಕುಟ್ಟದ ಮಗಡಿಪಾರೆಯಲ್ಲಿ ಖಾಸಗಿ ಬಸ್ ಹೊತ್ತು ಉರಿಯುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಮಾಕುಟ್ಟ ರಸ್ತೆ
  • ಮಗಡಿಪಾರೆ ಆಂಜನೇಯ ದೇವಸ್ಥಾನ ಸಮೀಪ
ವಿರಾಜಪೇಟೆ: ಮಾಕುಟ್ಟ ರಸ್ತೆಯ ಮಗಡಿಪಾರೆ ಆಂಜನೇಯ ದೇವಸ್ಥಾನ ಸಮೀಪ ಖಾಸಗಿ ಬಸ್ ಹೊತ್ತಿ ಉರಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಕೇರಳ ನೋಂದಣಿಯ ಖಾಸಗಿ ಬಸ್ ವಿರಾಜಪೇಟೆಯಲ್ಲಿ ಪ್ರವಾಸಿಗರನ್ನು ಇಳಿಸಿ, ಕೇರಳಕ್ಕೆ ತೆರಳುತ್ತಿದ್ದ ಸಂದರ್ಭ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಸ್‌ನಲ್ಲಿ ಚಾಲಕ ಹಾಗೂ ನಿರ್ವಾಹಕ ಇದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯಿಂದಾಗಿ ಮಾಕುಟ್ಟ ರಸ್ತೆಯಲ್ಲಿ ವಾಹನಗಳ ಸಂಚಾರ ಬಂದ್ ಆಗಿತ್ತು. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಬಸ್ ಸಂಪೂರ್ಣವಾಗಿ ಭಸ್ಮಗೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಲತಾ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net