ಅರಣ್ಯ ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ ಕೊಡಬೇಕು

 ಅರಣ್ಯ ಭವನದ ಆವರಣದಲ್ಲಿ ಶುಕ್ರವಾರ ನಡೆದ ರಾಷ್ಟಿçÃಯ ಅರಣ್ಯ ಹುತಾತ್ಮರ ದಿನಾಚರಣೆ ಸಂದರ್ಭ ಹುತಾತ್ಮ ಅರಣ್ಯ ಸಿಬ್ಬಂದಿಗೆ ಮೌನಾಚರಣೆ ಮೂಲಕ ಗೌರವ ನಮನ ಸಲ್ಲಿಸಲಾಯಿತು.
ಅರಣ್ಯ ಭವನದ ಆವರಣದಲ್ಲಿ ಶುಕ್ರವಾರ ನಡೆದ ರಾಷ್ಟಿçÃಯ ಅರಣ್ಯ ಹುತಾತ್ಮರ ದಿನಾಚರಣೆ ಸಂದರ್ಭ ಹುತಾತ್ಮ ಅರಣ್ಯ ಸಿಬ್ಬಂದಿಗೆ ಮೌನಾಚರಣೆ ಮೂಲಕ ಗೌರವ ನಮನ ಸಲ್ಲಿಸಲಾಯಿತು.
Published on
ಮಡಿಕೇರಿ:
ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದು, ಕಳೆದ 30 ವರ್ಷಗಳಲ್ಲಿ ಗಮನಿಸಿದಾಗ ಈ ಬಾರಿ ಜಿಲ್ಲೆಯಲ್ಲಿ ಮಳೆ ಪ್ರಮಾಣ ತುಂಬಾ ಕಡಿಮೆಯಾಗಿದೆ. ಆದ್ದರಿಂದ ಅರಣ್ಯ ಮತ್ತು ಪರಿಸರ ಸಂರಕ್ಷಣೆಗೆ ಎಲ್ಲೆಡೆ ಹೆಚ್ಚಿನ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಹೇಳಿದರು. ನಗರದ ಅರಣ್ಯ ಭವನದ ಆವರಣದಲ್ಲಿ ಶುಕ್ರವಾರ ನಡೆದ ರಾಷ್ಟಿçÃಯ ಅರಣ್ಯ ಹುತಾತ್ಮರ ದಿನಾಚರಣೆ ಹಿನ್ನೆಲೆ ನಾಡಿನ ಅರಣ್ಯ ಮತ್ತು ವನ್ಯಜೀವಿ ಸಂಪತ್ತು ಸಂರಕ್ಷಿಸುವ ಸಂದರ್ಭದಲ್ಲಿ ಪ್ರಾಣ ತ್ಯಾಗ ಮಾಡಿದ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಚ ಇರಿಸಿ, ಗೌರವ ನಮನ ಸಲ್ಲಿಸಿ ಮಾತನಾಡಿದರು.
ಮಲೆನಾಡು ಭಾಗದಲ್ಲಿ ಸೆಪ್ಟೆಂಬರ್ ತಿಂಗಳಲ್ಲೂ ಮಳೆಯಾಗುತ್ತಿತ್ತು. ಆದರೆ ಈಗ ಮಳೆ ಇಲ್ಲದಂತಾಗಿ, ಬೇಸಿಗೆ ವಾತಾವರಣ ಕಾಣುತ್ತಿದೆ. ಆದ್ದರಿಂದ ಪರಿಸರ ಮತ್ತು ಅರಣ್ಯ ಸಂರಕ್ಷಣೆಗೆ ಹಿಂದಿಗಿAತ ಇಂದು ಹೆಚ್ಚಿನ ಒತ್ತು ನೀಡುವುದು ಅತ್ಯಗತ್ಯ.
ನದಿ, ತೊರೆ, ಹಳ್ಳ-ಕೊಳ್ಳ, ಬಾವಿ ಹಾಗೂ ಬೋರ್‌ವೆಲ್‌ಗಳು ಸಹ ನೀರು ಕ್ಷೀಣಿಸುತ್ತಿದೆ. ಮಳೆ- ಬೆಳೆ ಇಲ್ಲದೆ ಇಂದಿನ ಪರಿಸ್ಥಿತಿ ನೋಡಿದರೆ ಆತಂಕವಾಗುತ್ತಿದೆ. ಭೂಮಿಯ ಮೇಲಿನ ಪರಿಸರ, ಹವಾಮಾನ ಬದಲಾವಣೆಯನ್ನು ಗಮನಿಸಿದಾಗ ಮುಂದಿನ ದಿನಗಳನ್ನು ಊಹಿಸಿಕೊಳ್ಳುವುದು, ಕಷ್ಟವಾಗುತ್ತದೆ.
ಪರಿಸರ ಮತ್ತು ಹವಾಮಾನ ವೈಪರೀತ್ಯಕ್ಕೆ ಕಾರಣಗಳೇನು ಎಂಬ ಬಗ್ಗೆ ಪ್ರತಿಯೊಬ್ಬರೂ ಅವಲೋಕನ ಮಾಡಬೇಕು. ಒಂದು ಕಡೆ ಜಗತ್ತು ಒಂದು ಹಳ್ಳಿಯಾಗಿ, ತಾಂತ್ರಿಕವಾಗಿ ವೇಗವಾಗಿ ಓಡುತ್ತಿದೆ. ಆದರೆ ಹವಾಮಾನ ವೈಪರೀತ್ಯದಿಂದ ಮಳೆ-ಬೆಳೆ ಕಡಿಮೆಯಾದರೆ ಬದುಕು ಹೇಗೆ ಎಂಬ ಬಗ್ಗೆ ಚಿಂತಿಸಬೇಕಿದೆ. ಆದ್ದರಿಂದ ಕಾಡನ್ನು ಉಳಿಸುವುದರ ಜೊತೆಗೆ ಎಲ್ಲೆಡೆ ಗಿಡ ಮರಗಳನ್ನು ಬೆಳೆಸಬೇಕು.
ನಾವು ಅರಣ್ಯದೊಳಗೆ ಸಫಾರಿಗೆ ಹೋಗಿ ವನ್ಯಪ್ರಾಣಿ ವೀಕ್ಷಿಸಲು ಬಯಸುತ್ತೇವೆ. ಆದರೆ ಅದೇ ವನ್ಯ ಪ್ರಾಣಿಗಳು ಊರಿಗೆ ಬಂದಾಗ ಪಟಾಕಿ ಸಿಡಿಸಿ ಓಡಿಸುತ್ತೇವೆ. ಈ ನಾಗರಿಕ ಮನೋಭಾವ ಬದಲಾಗಬೇಕು. ಅರಣ್ಯದಲ್ಲಿ ಪ್ರಾಣಿಗಳಿಗೂ ಸಹ ಬದುಕುವ ಹಕ್ಕು ಇದೆ. ಆದ್ದರಿಂದ ಅರಣ್ಯವನ್ನು ಅತಿಕ್ರಮಣ ಮಾಡದೆ ಪರಿಸರಕ್ಕೆ ಪೂರಕವಾಗಿ ಅರಣ್ಯ ಹಾಗೂ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು.
ಕಾಡನ್ನು ಸಂರಕ್ಷಿಸುವಲ್ಲಿ ಇಲಾಖೆಯಲ್ಲಿ ದುಡಿಯುತ್ತಿರುವ ವಾಚರ್, ಗಾರ್ಡ್ಗಳು ಸೇರಿದಂತೆ ಎಲ್ಲಾ ಹಂತದ ಸಿಬ್ಬಂದಿಗಳ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು.
ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಟಿ ಮಾತನಾಡಿ ಅರಣ್ಯ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಅರಣ್ಯ ಸಂರಕ್ಷಣೆಗೆ ಎಲ್ಲರೂ ಸಹ ಕೈಜೋಡಿಸಬೇಕು. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹೆಚ್ಚಿನ ಆನೆಗಳು ಹಾಗೂ ಹುಲಿಗಳು, ಜತೆಗೆ ಜಿಂಕೆ, ಕಡವೆ, ಹೀಗೆ ವನ್ಯ ಪ್ರಾಣಿಗಳು ವಾಸಿಸುತ್ತಿದ್ದು, ಕಾಡನ್ನು ಸಂರಕ್ಷಿಸಿದರೆ ವನ್ಯ ಪ್ರಾಣಿಗಳು ಸಹ ಬದುಕಲು ಸಾಧ್ಯ. ಆ ನಿಟ್ಟಿನಲ್ಲಿ ಪರಿಸರ, ಜನಜೀವನ ಎಲ್ಲವೂ ಸಹ ಸಮತೋಲನ ಕಾಣಬಹುದು. ಅರಣ್ಯ ಸಂರಕ್ಷಣೆಯಲ್ಲಿ ಸ್ಥಳೀಯರ ಜತೆ ಬೆರೆತು ಕರ್ತವ್ಯ ನಿರ್ವಹಿಸಲು ಶ್ರಮಿಸಲಾಗುತ್ತಿದೆ. ಆದರೂ ಸಹ ಹಲವು ಎಡರು ತೊಡರುಗಳನ್ನು ಎದುರಿಸಿ ಕಾಡು ಸಂರಕ್ಷಣೆಯತ್ತ ಹೆಚ್ಚಿನ ಗಮನಹರಿಸಲಾಗಿದೆ ಎಂದು ಹೇಳಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಅಭಿಷೇಕ್ 1966 ರಿಂದ ಇಲ್ಲಿಯವರೆಗೆ ಅರಣ್ಯ ಸಂರಕ್ಷಣೆ ಕರ್ತವ್ಯ ಸಂದರ್ಭದಲ್ಲಿ ಹುತಾತ್ಮರಾದ ಅರಣ್ಯ ರಕ್ಷಕ 65 ಮಂದಿ ಹೆಸರನ್ನು ಓದಿದರು.
ಶುಕ್ರವಾರ ನಡೆದ ರಾಷ್ಟಿçÃಯ ಅರಣ್ಯ ಹುತಾತ್ಮರ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಅರಣ್ಯ ಭವನ ಆವರಣದಲ್ಲಿರುವ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಟಿ, ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ, ಏರ್ ಮಾರ್ಷಲ್(ನಿವೃತ್ತ) ಕೆ.ಸಿ. ಕಾರ್ಯಪ್ಪ ಪುಷ್ಪಗುಚ್ಚ ಇರಿಸಿ, ಗೌರವ ನಮನ ಸಲ್ಲಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಅಭಿಷೇಕ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ತಹಶೀನ್ ಬಾನು ದವಡಿ, ಕೆ.ಪಿ. ಗೋಪಾಲ್, ಸಂದೀಪ್ ಪಿ. ಅಭಯಂಕರ್, ಶ್ರೀನಿವಾಸ್ ನಾಯಕ್, ವಿ. ಸೆಂದಿಲ್ ಕುಮಾರ್, ನಿವೃತ್ತ ಉಪ ಅರಣ್ಯ ಸಂರಕ್ಷಾಣಾಧಿಕಾರಿ ಜಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಕುಮಾರ್, ವಲಯ ಅರಣ್ಯಾಧಿಕಾರಿ ಶಂಕರ, ಪತ್ರಾಂಕಿತ ವ್ಯವಸ್ಥಾಪಕರಾದ ಸರೋಜ ಪಿ.ಪಿ., ಉಪ ವಲಯ ಅರಣ್ಯಾಧಿಕಾರಿ ಸುಬ್ರಾಯ ಕೆ.ಎಸ್., ಆನೆ ಜಮೇದಾರ್ ಬೋಜಪ್ಪ ಜೆ.ಕೆ. ಮತ್ತಿತರರು ಇದ್ದರು.
ಮುಖ್ಯ ಅತಿಥಿಗಳಿಗೆ ಪೆರೇಡ್ ಕಮಾಂಡರ್ ಸದಾನಂದ ಹಿಪ್ಪರಗಿ ಅವರು ಗೌರವ ವಂದನೆ ಸಲ್ಲಿಸಿದರು. ಪೊಲೀಸ್ ವಾದ್ಯ ವೃಂದದಿAದ ರಾಷ್ಟçಗೀತೆ ನುಡಿಸಲಾಯಿತು. ಅರಣ್ಯ ವನ್ಯಜೀವಿ ಸಂಪತ್ತನ್ನು ಉಳಿಸಲು ಹೋರಾಡಿ ಮಡಿದವರ ಗೌರವಾರ್ಥ ರಿವರ್ಸ್ ಆರ್ಮಸ್ ನುಡಿಸಲಾಯಿತು. ನಂತರ ಮೌನಾಚರಣೆ ನಡೆಯಿತು. ಪೊಲೀಸ್ ವಾದ್ಯ ವೃಂದದಿAದ ಅಬೈಡ್ ವಿತ್ ಮೀ ವಾದ್ಯವನ್ನು ನುಡಿಸಲಾಯಿತು. ಡಿಆರ್‌ಎಫ್‌ಒ ಐಶ್ವರ್ಯ ಆರ್.ಗೌಡರ ಅವರು ನಿರೂಪಿಸಿ, ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net