ಕ್ರೀಡೆಯೊಂದಿಗೆ ಕೃಷಿ, ಸಂಸ್ಕೃತಿಗೆ ಆದ್ಯತೆ

ಚೇನಂಡ ಹಾಕಿ ಹಬ್ಬದ ಲಾಂಛನ
ಚೇನಂಡ ಹಾಕಿ ಹಬ್ಬದ ಲಾಂಛನ
Published on
ಮಡಿಕೇರಿ:
ನಾಪೋಕ್ಲುವಿನಲ್ಲಿ ನಡೆಯುತ್ತಿರುವ ಚೇನಂಡ ಕಪ್ ಕೊಡವ ಕೌಟುಂಬಿಕ ಹಾಕಿ ಹಬ್ಬದಲ್ಲಿ ಕ್ರೀಡೆಯ ಜತೆಗೆ ಕೊಡಗಿನ ಜೀವನಾಡಿ ಕೃಷಿ ಮತ್ತು ಕೊಡವ ಸಂಸ್ಕೃತಿ ಬಗ್ಗೆಯೂ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದು ಚೇನಂಡ ಕುಟುಂಬದ ಹಾಕಿ ಹಬ್ಬ ಸಮಿತಿ ಕಾರ್ಯದರ್ಶಿ ಮನುಮಾದಯ್ಯ ತಿಳಿಸಿದರು.
ಚೇನಂಡ ಕುಟುಂಬಕ್ಕೆ ಸುಮಾರು 360 ವರ್ಷಗಳ ಇತಿಹಾಸ ಇದ್ದು ಈಗ 13ನೇ ತಲೆಮಾರು ಜೀವನ ನಡೆಸುತ್ತಿದೆ. ಕುಟುಂಬದ ಮೂಲಸ್ಥಾನ ಕೋಕೇರಿ ಆಗಿದ್ದು ಕುಟುಂಬ ಸದಸ್ಯರು ಮೂರ್ನಾಡು, ಆಲೂರು ಸಿದ್ದಾಪುರದಲ್ಲಿಯೂ ಇದ್ದಾರೆ. ಜಿಲ್ಲೆಯಿಂದ ಹೊರಗಿನ ಪ್ರದೇಶದಲ್ಲೂ ಜೀವನ ನಡೆಸುತ್ತಿದ್ದಾರೆ. ಒಂದು ತಿಂಗಳು ನಡೆಯುವ ಹಾಕಿ ಹಬ್ಬವನ್ನು ಚೇನಂಡ ಕುಟುಂಬಸ್ಥರು ಸೇರಿಕೊಂಡು ಒಗ್ಗಟ್ಟಿನಲ್ಲಿ ನಡೆಸಲಾಗುತ್ತಿದೆ. ಈ ಕ್ರೀಡಾ ಹಬ್ಬದಲ್ಲಿ ಕೃಷಿ ಮತ್ತು ಸಾಂಸ್ಕೃತಿಕ ಚಟುವಟಿಕೆಗೂ ಆದ್ಯತೆ ಕೊಡಲಾಗುತ್ತಿದೆ ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೊಡಗಿನ ಪ್ರಮುಖ ಆರ್ಥಿಕ ಬೆಳೆಯಾದ ಕಾಫಿ ಬಗ್ಗೆ ಏ.12ಕ್ಕೆ ವಿಚಾರಸಂಕಿರಣ ಏರ್ಪಡಿಸಲಾಗಿದೆ. ಕಾಫಿ ಕೃಷಿ ಮತ್ತು ಮಣ್ಣು ಆರೋಗ್ಯದ ಬಗ್ಗೆ ಇಲ್ಲಿ ಸಮಗ್ರ ಮಾಹಿತಿ ಕೊಡಲಾಗುವುದು. ಈ ಕ್ಷೇತ್ರದ ತಜ್ಞರು ಈ ವಿಚಾರಸಂಕಿರಣದಲ್ಲಿ ಮಹತ್ವದ ಮಾಹಿತಿಗಳನ್ನು ಹಂಚಿಕೊಳ್ಳಲಿದ್ದಾರೆ. ಹಾಗೆಯೇ ಜೇನು ಮತ್ತು ಕೊಡಗಿಗೆ ಅವಿನಾಭಾವ ಸಂಬAಧ ಇದ್ದು, ಕೊಡಗಿನ ಜೇನಿಗೆ ಅದರದ್ದೇ ಆದ ಮಹತ್ವ ಇದೆ. ಆದರೆ ಈಗ ಕೊಡಗಿನಲ್ಲಿ ಜೇನು ಕೃಷಿ ಅಪರೂಪವಾಗಿದೆ. ಈ ಹಿನ್ನೆಲೆಯಲ್ಲಿ ಜೇನು ಕೃಷಿಯ ಮಹತ್ವದ ಬಗ್ಗೆ ಅರಿವು ಮೂಡಿಸಲು ಏ. 19ಕ್ಕೆ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಈ ಎರಡೂ ಕಾರ್ಯಕ್ರಮ ಕೂಡ ನಾಪೋಕ್ಲುವಿನ ಜ. ತಿಮ್ಮಯ್ಯ ಕ್ರೀಡಾಂಗಣದ ಆವರಣದಲ್ಲಿ ನಡೆಯಲಿದೆ. ಕ್ರೀಡಾ ಕೂಟದಲ್ಲಿ ಪಾಲ್ಗೊಂಡಿರುವ ಎಲ್ಲಾ 383 ತಂಡಗಳಿಗೂ ತಲಾ ಒಂದೊAದು ಜೇನು ಪೆಟ್ಟಿಗೆ ವಿತರಣೆ ಮಾಡುತ್ತಿರುವುದು ಈ ಬಾರಿಯ ವಿಶೇಷವಾಗಿದೆ.
ಏ.10ರಂದು ನಾಪೋಕ್ಲು ಕೊಡವ ಸಮಾಜ ಸಹಯೋಗದಲ್ಲಿ ಬಾಳೋಪಾಟ್, ಉಮ್ಮತಾಟ್, ಬೊಳಕಾಟ್ ಸೇರಿ ಕೊಡವ ಸಾಂಸ್ಕೃತಿಕ ಕಾರ್ಯಕ್ರಮಗಳ ತರಬೇತಿ ಹಮ್ಮಿಕೊಳ್ಳಲಾಗಿದೆ. ಕೊಡವ ಕುಟುಂಬಗಳ ಮಧ್ಯೆ 100*4 ರಿಲೇ, ಮ್ಯಾರಾಥಾನ್, ಶ್ವಾನ ಪ್ರದರ್ಶನ, ಕೊಡವ ಸಾಂಸ್ಕೃತಿಕ ಕಲಿಕಾ ಕಾರ್ಯಕ್ರಮಗಳು ಪಂದ್ಯಾಟದ ಜತೆ ಜತೆಯಲ್ಲಿ ನಡೆಯುತ್ತದೆ ಎಂದು ತಿಳಿಸಿದರು.
ಕುಟುಂಬದ ಪ್ರಮುಖರಾದ ಚೇನಂಡ ಜಪ್ಪು ದೇವಯ್ಯ, ಸುರೇಶ್ ನಾಣಯ್ಯ, ಗಿರೀಶ್ ಪೂಣಚ್ಚ, ಅಜಿತ್ ಪೂಣಚ್ಚ ಸುದ್ದಿಗೋಷ್ಠಿಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net