ಬಜೆಟ್‌ನಲ್ಲಿ ರೈತರಿಗೆ ಆದ್ಯತೆ

ಪೊನ್ನಂಪೇಟೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಶಾಸಕ ಪೊನ್ನಣ್ಣ ಉದ್ಘಾಟಿಸಿದರು. ಹರೀಶ್, ಜುನೈದ್, ರಶೀದ್, ಪ್ರಶಾಂತ್, ಲಿಂಗರಾಜು ದೊಡ್ಡಮನಿ, ಧರ್ಮಜ ಉತ್ತಪ್ಪ, ಅಪ್ಪಣ್ಣ ಇದ್ದರು.
ಪೊನ್ನಂಪೇಟೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಶಾಸಕ ಪೊನ್ನಣ್ಣ ಉದ್ಘಾಟಿಸಿದರು. ಹರೀಶ್, ಜುನೈದ್, ರಶೀದ್, ಪ್ರಶಾಂತ್, ಲಿಂಗರಾಜು ದೊಡ್ಡಮನಿ, ಧರ್ಮಜ ಉತ್ತಪ್ಪ, ಅಪ್ಪಣ್ಣ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಪೊನ್ನಣ್ಣ
  • ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ
ಪೊನ್ನಂಪೇಟೆ: ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಹಯೋಗದಲ್ಲಿ ನಿರ್ಮಿಸಲಾದ ಪಶುವೈದ್ಯಕೀಯ ಕಟ್ಟಡ ಮತ್ತು ರೈತರ ತರಬೇತಿ ಕೇಂದ್ರವನ್ನು ಶಾಸಕ ಪೊನ್ನಣ್ಣ ಇತ್ತೀಚೆಗೆ ಉದ್ಘಾಟಿಸಿದರು.
ಪಶುವೈದ್ಯಕೀಯ ಸೇವಾ ಆಸ್ಪತ್ರೆಯಲ್ಲಿ ನೂತನ ತಂತ್ರಜ್ಞಾನದ ಚಿಕಿತ್ಸಾ ಸೌಲಭ್ಯವಿದ್ದು, ಸೇವೆಯು ಸಾರ್ವಜನಿಕರಿಗೆ ಲಭ್ಯವಾಗಲಿದೆ. ನುರಿತ ವೈದ್ಯರು ಕರ್ತವ್ಯ ನಿರ್ವಹಿಸಲಿದ್ದು, ಈ ಭಾಗದ ರೈತರಿಗೆ ಅನುಕೂಲವಾಗಲಿದೆ. ಸರ್ಕಾರವು ಪಶುಪಾಲನ ಇಲಾಖೆಗೆ ಹೆಚ್ಚು ಅನುದಾನ ನೀಡುವುದರ ಜತೆಗೆ ಪ್ರೋತ್ಸಾಹವನ್ನೂ ನೀಡುತ್ತಿದೆ. ಮುಂದಿನ ಬಜೆಟ್‌ನಲ್ಲಿ ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಒದಗಿಸಲಾಗುತ್ತದೆ ಎಂದು ಶಾಸಕ ಪೊನ್ನಣ್ಣ ಹೇಳಿದರು.
ಪೊನ್ನಂಪೇಟೆ ತಾಲೂಕು ಮತ್ತು ವಿರಾಜಪೇಟೆ ತಾಲೂಕಿಕೆ ತಲಾ ನಾಲ್ಕು ಹಾಗೂ ಮಡಿಕೇರಿ ತಾಲೂಕಿಗೆ ಇಬ್ಬರು ಸಿಬ್ಬಂದಿಯನ್ನು ಒದಗಿಸಲಾಗಿದೆ. ನೂತನವಾಗಿ ನಿರ್ಮಿಸಲಾದ ರೈತ ತರಬೇತಿ ಕೇಂದ್ರದ ಉಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆ ಉಪನಿರ್ದೇಶಕ ಡಾ.ಲಿಂಗರಾಜು ದೊಡ್ಡಮನಿ ಮಾತನಾಡಿ, ರಾಜ್ಯಕ್ಕೆ 18 ಪಶುವೈದ್ಯಕೀಯ ಆಡಳಿತ ಕಟ್ಟಡಗಳನ್ನು ಸರ್ಕಾರ ನೀಡಿದ್ದು, ಅದರಲ್ಲಿ ಪೊನ್ನಂಪೇಟೆ ತಾಲೂಕಿಗೆ 53 ಲಕ್ಷ ರೂ. ಅನುದಾನದಲ್ಲಿ ಒಂದು ಆಡಳಿತ ಕಟ್ಟಡ ಮತ್ತು ರೈತ ತರಬೇತಿ ಕೇಂದ್ರ ದೊರೆತಿದೆ. ಇಲಾಖೆಯಲ್ಲಿ ಪಶು ವೈದ್ಯರು ಮತ್ತು ಸಿಬ್ಬಂದಿ ಕೊರತೆ ಇದ್ದು, ಶಾಸಕರು ಮುತುವರ್ಜಿ ವಹಿಸಿ ಸಿಬ್ಬಂದಿ ಕೊರತೆ ನೀಗಿಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಇದೇ ಸಂದರ್ಭ ಅತಿಥಿಗಳಿಗೆ ಇಲಾಖೆ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮದ ಉತ್ತಪ್ಪ, ಕಾಳಿಮಾಡ ಪ್ರಶಾಂತ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣೀರ ಹರೀಶ್, ಉಪಾಧ್ಯಕ್ಷ ಆಲೀರ ರಶೀದ್, ಮೀದೇರಿರ ನವೀನ್, ಬಗರ್ ಹುಕುಂ ಅಧ್ಯಕ್ಷ ಎಂ.ಬಿ.ಅಪ್ಪಣ್ಣ, ಡಾ.ಗಿರೀಶ್, ಜುನೈದ್, ಅಜ್ಜಿಕುಟ್ಟೀರ ಪೊನ್ನಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net