ಕೊಡಗು ಎಸ್‌ಪಿ ಆರ್.ಎನ್. ಬಿಂದುಮಣಿ ನೇತೃತ್ವದಲ್ಲಿ ನಡೆದ ಅಣಕು ಕಾರ್ಯಾಚರಣೆ ಸಂದರ್ಭ ಮೂವರು ಡಿವೈಎಸ್‌ಪಿಗಳು, 6 ಮಂದಿ ವೃತ್ತ ನಿರೀಕ್ಷಕರು, 15 ಮಂದಿ ಸಬ್‌ಇನ್ಸ್ಪೆಕ್ಟರ್‌ಗಳು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ 15 ಸಿಬ್ಬಂದಿ, ಗೃಹರಕ್ಷಕ ದಳದ 7 ಸಿಬ್ಬಂದಿ, 41 ಮಂದಿ ಮುಖ್ಯ ಪೇದೆ ಮತ್ತು ಪೇದೆಗಳು ಪಾಲ್ಗೊಂಡು ಮಳೆಗಾಲದ ಸಂಭಾವ್ಯ ಅನಾಹುತಗಳ ಸಂದರ್ಭ ಸಾರ್ವಜನಿಕರ ಪ್ರಾಣ, ಆಸ್ತಿ ಪಾಸ್ತಿ ರಕ್ಷಣೆಯ ತರಬೇತಿ ಪಡೆದುಕೊಂಡರು.