21 ಕುಟುಂಬಗಳಿಗೆ ಮನೆ ಹಕ್ಕುಪತ್ರ ಸಿದ್ಧಗೊಳಿಸಿ

ಕುಶಾಲನಗರ ಪುರಸಭಾ ವ್ಯಾಪ್ತಿಯ ಮಾರುಕಟ್ಟೆ ರಸ್ತೆಯಲ್ಲಿನ ತ್ಯಾಗರಾಜ ಬಡಾವಣೆ ನಿವಾಸಿಗಳನ್ನು ಭೇಟಿಯಾದ ಶಾಸಕ ಡಾ.ಮಂತರ್‌ಗೌಡ ಸಮಸ್ಯೆಗಳನ್ನು ಆಲಿಸಿದರು. ಪ್ರಮೋದ್ ಮುತ್ತಪ್ಪ,  ಜೋಸೆಫ್ ವಿಕ್ಟರ್ ಸೋನ್ಸ್, ಗಿರೀಶ್ ಇದ್ದರು.
ಕುಶಾಲನಗರ ಪುರಸಭಾ ವ್ಯಾಪ್ತಿಯ ಮಾರುಕಟ್ಟೆ ರಸ್ತೆಯಲ್ಲಿನ ತ್ಯಾಗರಾಜ ಬಡಾವಣೆ ನಿವಾಸಿಗಳನ್ನು ಭೇಟಿಯಾದ ಶಾಸಕ ಡಾ.ಮಂತರ್‌ಗೌಡ ಸಮಸ್ಯೆಗಳನ್ನು ಆಲಿಸಿದರು. ಪ್ರಮೋದ್ ಮುತ್ತಪ್ಪ, ಜೋಸೆಫ್ ವಿಕ್ಟರ್ ಸೋನ್ಸ್, ಗಿರೀಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಡಾ.ಮಂತರ್‌ಗೌಡ ಸೂಚನೆ
  • ಕುಶಾಲನಗರ ತ್ಯಾಗರಾಜ ಬಡಾವಣೆಗೆ ಭೇಟಿ
ಕುಶಾಲನಗರ: ಕುಶಾಲನಗರ ಮಾರುಕಟ್ಟೆ ರಸ್ತೆಯಲ್ಲಿನ ತ್ಯಾಗರಾಜ ಬಡಾವಣೆಯಲ್ಲಿ ಸಮರ್ಪಕ ವಾಸದ ಮನೆಗಳು ಇಲ್ಲದೆ ಎರಡು ದಶಕಗಳಿಂದ ಪರಿತಪಿಸುತ್ತಿದ್ದ 21 ಕುಟುಂಬಗಳಿಗೆ ಹಕ್ಕುಪತ್ರ ಸಿದ್ಧಗೊಳಿಸಲು ಶಾಸಕ ಡಾ.ಮಂತರ್‌ಗೌಡ ಸೂಚನೆ ನೀಡಿದರು.
ಪುರಸಭೆ ವ್ಯಾಪ್ತಿಯ ಸರ್ವೇ ನಂ.165/3 ರ ಜಾಗದಲ್ಲಿ ಈ ಹಿಂದೆ ಪಟ್ಟಣ ಪಂಚಾಯಿತಿ ಇದ್ದ ಅವಧಿಯಲ್ಲಿ ಹೌಸಿಂಗ್ ಫಾರ್ ಆಲ್ ಯೋಜನೆಯಡಿ ಪಟ್ಟಿ ಮಾಡಿದ್ದ ಫಲಾನುಭವಿಗಳ ಜನವಸತಿ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಶ್ರಮಿಕರು ಹಾಗೂ ಕೂಲಿ ಕಾರ್ಮಿಕ ಕುಟುಂಬಗಳ ಪರಿಸ್ಥಿತಿಯನ್ನು ಅವಲೋಕಿಸಿದರು.
ಸ್ಥಳಕ್ಕೆ ತಹಸೀಲ್ದಾರ್ ಕಿರಣ್ ಗೌರಯ್ಯ ಹಾಗೂ ಕಂದಾಯ ಅಧಿಕಾರಿ ಸಂತೋಷ್ ಕುಮಾರ್ ಅವರನ್ನು ಕರೆಸಿಕೊಂಡು ಹಕ್ಕು ಪತ್ರಗಳಿಲ್ಲದೆ, ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದ ಇಲ್ಲಿನ 21 ಕುಟುಂಬಗಳಿಗೆ ಒಂದು ವಾರದೊಳಗಾಗಿ ಹಕ್ಕುಪತ್ರ ಸಿದ್ಧ ಗೊಳಿಸಲು ಗಡುವು ನೀಡಿದರು. ಅಲ್ಲದೆ ಇಲ್ಲಿಗೆ ಬಂದು ಹಕ್ಕುಪತ್ರ ವಿತರಿಸುವ ಬಗ್ಗೆಯೂ ಶಾಸಕರು ಘೋಷಿಸಿದರು.
ಅರ್ಹ ಫಲಾನುಭವಿಗಳ ಪಟ್ಟಿ ಕಂದಾಯ ಇಲಾಖೆಯಲ್ಲಿದೆ. ಕೂಡಲೇ ಅವರು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಪರಿಸರವನ್ನು ಸ್ವಚ್ಛಂದವಾಗಿ ಇಡುವ ಮೂಲಕ ಆರೋಗ್ಯಕ್ಕೆ ಒತ್ತು ನೀಡಬೇಕೆಂದು ಶಾಸಕರು ಮಹಿಳೆಯರಿಗೆ ಸಲಹೆ ನೀಡಿದರು.
ಪುರಸಭೆ ಮಾಜಿ ಸದಸ್ಯರೂ ಆದ ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಪುರಸಭೆ ಮುಖ್ಯಾಧಿಕಾರಿ ಗಿರೀಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net