ಗಾಂಧಿ ಮೈದಾನದ ಎದುರು ನಿರ್ಮಾಣ ಆಗುತ್ತಿರುವ ಕಟ್ಟಡಕ್ಕೆ ಸಂಬAಧಿಸಿದAತೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಕೆ.ಎಸ್. ರಮೇಶ್, ಅನಿತಾ ಪೂವಯ್ಯ, ಅಮೀನ್ ಮೊಹ್ಸಿನ್, ಬಷೀರ್ ಅಹಮ್ಮದ್. ಹೆಚ್.ಆರ್. ರಮೇಶ್, ಪಿ. ಕಲಾವತಿ ಇದ್ದರು.
Published on:
Copied
Follow Us
ಮಡಿಕೇರಿ:
ಯಾವುದೇ ಸಮಸ್ಯೆ ಆಗದಂತೆ ಮಳೆಗಾಲ ಎದುರಿಸಲು ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಡಿಕೇರಿ ನಗರಸಭೆ ಪೌರಾಯುಕ್ತ ಹೆಚ್.ಎಲ್. ರಮೇಶ್ ತಿಳಿಸಿದ್ದಾರೆ. ನಗರಸಭಾ ಕೌನ್ಸಿಲ್ ಸಭಾಂಗಣದಲ್ಲಿ ನಗರಸಭಾ ಅಧ್ಯಕ್ಷೆ ಪಿ. ಕಲಾವತಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರಿಗೆ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದರು.
ಮಳೆಗಾಲ ಶುರುವಾಗಲು ದಿನಗಣನೆ ಆರಂಭವಾಗಿದ್ದು ನಗರದ ನಿವಾಸಿಗಳಿಗೆ ಸಮಸ್ಯೆ ಆಗದಂತೆ ನಗರಸಭೆ ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕಿದೆ. ಈ ಬಗ್ಗೆ ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ಆಗಬೇಕಿದೆ ಎಂದು ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಕೆ.ಎಸ್. ರಮೇಶ್, ಮೊದಲು ನಗರದ ಎಲ್ಲಾ ರಾಜಕಾಲುವೆಗಳು ಸ್ವಚ್ಛ ಆಗಬೇಕು. ಇದಕ್ಕೆ ನಗರಸಭೆಯ ಒಂದು ಜೆಸಿಬಿ ಸಾಕಾಗುವುದಿಲ್ಲ. ಬಾಡಿಗೆಗೆ 4 ಜೆಸಿಬಿ ಪಡೆದುಕೊಳ್ಳಬೇಕು. ಇದಕ್ಕಾಗಿ ಟೆಂಡರ್ ಕರೆದರೆ ಪ್ರಕ್ರಿಯೆ ತಡವಾಗುತ್ತದೆ. ಹಾಗಾಗಿ ಕೊಟೇಷನ್ ತರಿಸಿಕೊಂಡು ಕಡಿಮೆ ಬಾಡಿಗೆಗೆ ಬರುವವರಿಗೆ ಅವಕಾಶ ಕೊಟ್ಟು ಸ್ವಚ್ಛತಾ ಕೆಲಸ ಮಾಡಿಸಬೇಕು. ಚರಂಡಿ ಬದಿಯ ಕುರುಚಲು ಕಾಡು ಸವರಬೇಕು. ಕಿರು ಚರಂಡಿಗಳಲ್ಲಿ ಸರಾಗವಾಗಿ ನೀರು ಹರಿದು ಹೋಗುವಂತೆ ಮಾಡಬೇಕು. ಒಂದು ವಾರದ ಒಳಗೆ ಈ ಕೆಲಸ ಮುಗಿಯಬೇಕು. ಮಳೆ ಶುರುವಾಗುವ ಮೊದಲು ಕೆಲಸ ಮಾಡಿದರೆ ರಸ್ತೆ ಹಾಳಾಗುವುದು ತಪ್ಪುತ್ತದೆ ಎಂದರು.
ಇದಕ್ಕೆ ಧ್ವನಿಗೂಡಿಸಿದ ಎಸ್‌ಡಿಪಿಐನ ಎಂ.ಕೆ. ಮನ್ಸೂರ್ ಅಲಿ ಈಗ ಸುರಿಯುತ್ತಿರುವ ಮೊದಲ ಮಳೆಗೇ ಮಹದೇವಪೇಟೆ ಭಾಗದಲ್ಲಿ ಚರಂಡಿಯಲ್ಲಿ ನೀರು ಕಟ್ಟಿಕೊಂಡು ರಸ್ತೆಯಲ್ಲಿ ಉಕ್ಕುತ್ತಿದೆ. ಮನೆ ಮನೆಗೆ ಮಳೆ ನೀರು ನುಗ್ಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಹಾಗಾಗಿ ಈ ಬಾರಿ ಚರಂಡಿ ಸ್ವಚ್ಛತೆಗೆ ಆದ್ಯತೆ ಕೊಡಬೇಕು. ಸಂಪಿಗೆಕಟ್ಟೆ ರಸ್ತೆಯಲ್ಲಿ ರಸ್ತೆ ಮೇಲೆಯೇ ಚರಂಡಿ ನೀರು ಹರಿಯುತ್ತಿದೆ. ಮಳೆಗಾಲದ ಸಂದರ್ಭ ಕಳೆದ ವರ್ಷ ಕೆಲಸ ಮಾಡಿದವರಿಗೆ ನಗರಸಭೆ ಇನ್ನೂ ಹಣ ಕೊಟ್ಟಿಲ್ಲ. ಈ ಬಾರಿ ಹಾಗಾಗಬಾರದು. ಟೆಂಡರ್ ಕೊಡುವುದು ಉತ್ತಮ ಎಂದು ಸಲಹೆ ನೀಡಿದರು.
ನಗರಸಭೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ. ಸತೀಶ್ ಮಾತನಾಡಿ ನಗರಸಭೆಯಲ್ಲಿ ಪೌರ ಕಾರ್ಮಿಕರ ಕೊರತೆ ಇದೆ. ಹೆಚ್ಚುವರಿ ಕಾರ್ಮಿಕರನ್ನು ತೆಗೆದುಕೊಳ್ಳಲು ಅವಕಾಶ ಇದ್ದರೆ ತೆಗೆದುಕೊಳ್ಳಬೇಕು. ತುರ್ತು ಪರಿಸ್ಥಿತಿ ನಿಭಾಯಿಸುವ ಹೊಣೆಗಾರಿ ಕೇಂದ್ರೀಕೃತವಾಗಿರಬೇಕು. ವಿಕೇಂದ್ರೀಕರಣವಾದರೆ ಗೊಂದಲಗಳು ನಿರ್ಮಾಣ ಆಗುವ ಸಾಧ್ಯತೆ ಇದೆ ಎಂದರು.
ಉಪಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ ಮಳೆ ಸಂದರ್ಭ ಕಾರ್ಮಿಕರು ಒಂಡೆಯಿAದ ಮತ್ತೊಂದೆಡೆಗೆ ಓಡಾಡಲು ಸಮಸ್ಯೆ ಆಗುತ್ತದೆ. ಸಮಯವೂ ವ್ಯರ್ಥ ಆಗುತ್ತದೆ. ಹಾಗಾಗಿ ಇವರಿಗಾಗಿ ಒಂದು ಜೀಪಿನ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಬಿಜೆಪಿಯ ಸಬಿತಾ ಮಾತನಾಡಿ
ಮಂಗಳದೇವಿ ನಗರದಲ್ಲಿ ತುಂಬಾ ಸಮಸ್ಯೆ ಇದೆ. ಚರಂಡಿ ವ್ಯವಸ್ಥೆ ಸುಧಾರಿಸಬೇಕು ಎಂದು ಹೇಳಿದರು.
ಈ ಸಂದರ್ಭ ಮಳೆಗಾಲದ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ಪೌರಾಯುಕ್ತ ಹೆಚ್.ಎಲ್. ರಮೇಶ್ ಮಳೆಗಾಲ ಎದುರಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಎಲ್ಲಾ 23 ವಾರ್ಡ್ಗಳಲ್ಲೂ ಟಾಸ್ಕ್ಫೋರ್ಸ್ ರಚನೆ ಮಾಡಲಾಗಿದ್ದು, ಎಲ್ಲಾ ವಾರ್ಡ್ಗಳಿಗೂ ಉಸ್ತುವಾರಿ ಸಿಬ್ಬಂದಿ ನಿಯೋಜಿಸಲಾಗಿದೆ. ಅಪಾಯಕಾರಿ ಪ್ರದೇಶದಲ್ಲಿ ವಾಸ ಮಾಡುತ್ತಿರುವ 160 ಕುಟುಂಬಗಳಿಗೆ ಎಚ್ಚರಿಕೆಯ ನೊಟೀಸ್ ಕೊಡಲಾಗಿದೆ. ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ತುರ್ತು ಪರಿಸ್ಥಿತಿಯಲ್ಲಿ ಕಾಳಜಿ ಕೇಂದ್ರಕ್ಕೆ ತೆರಳುವಂತೆ ಸೂಚಿಸಲಾಗಿದೆ. 10 ಲಕ್ಷ ರೂ. ವೆಚ್ಚದಲ್ಲಿ ಚರಂಡಿಗಳ ಸ್ವಚ್ಛತಾ ಕೆಲಸ ಆಗುತ್ತಿದೆ. ಚರಂಡಿ ಬ್ಲಾಕ್ ಆಗದ ರೀತಿಯಲ್ಲಿ ನೋಡಿಕೊಳ್ಳಲಾಗುವುದು. 24*7 ಸಹಾಯವಾಣಿ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಅಗತ್ಯಬಿದ್ದರೆ ಪ್ಲಾಸ್ಟಿಕ್ ಹೊದಿಕೆಗೆ ಪೂರೈಕೆಗೂ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.
ನಗರೋತ್ಥಾನ 4ನೇ ಹಂತದ ಕಾಮಗಾರಿಗಳು ನಿಧಾನಗತಿಯಲ್ಲಿ ನಡೆಯುತ್ತಿರುವ ಬಗ್ಗೆ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ಕಾಂಗ್ರೆಸ್‌ನ ರಾಜೇಶ್ ಯಲ್ಲಪ್ಪ ಮಾತನಾಡಿ ನಗರೋತ್ಥಾನ 4ನೇ ಹಂತದ ಕೆಲಸ ಒಬ್ಬರೇ ಗುತ್ತಿಗೆದಾರರು ಮಾಡಿದರೆ ಸದ್ಯಕ್ಕೆ ಮುಗಿಯುವುದಿಲ್ಲ. ಮುಂದಿನ ಬಾರಿ ಇಂಥ ಕಾಮಗಾರಿ ಗುತ್ತಿಗೆಯನ್ನು ಬೇರೆ ಬೇರೆ ಗುತ್ತಿಗೆದಾರರಿಗೆ ಹಂಚಿಕೆ ಮಾಡಬೇಕು ಎಂದು ಸಲಹೆ ನೀಡಿದರು. ಕೆ.ಎಸ್. ರಮೇಶ್ ಮಾತನಾಡಿ ನಗರೋತ್ಥಾನ ಕಾಮಗಾರಿ ಬಗ್ಗೆ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಬೇಕು. ಗುತ್ತಿಗೆದಾರರನ್ನು ಆ ಸಭೆಗೆ ಕರೆಯಿಸಿ ಆದಷ್ಟು ಶೀಘ್ರ ಕೆಲಸ ಮುಗಿಸುವಂತೆ ಸೂಚಿಸಬೇಕು ಎಂದರು.
ಅರುಣ್ ಶೆಟ್ಟಿ ಮಾತನಾಡಿ ಎಸ್‌ಪಿ ಕಚೇರಿ ಹತ್ತಿರ ಅಕ್ರಮ ಕಟ್ಟಡ ನಿರ್ಮಾಣ ಆಗುತ್ತಿದೆ. ಈ ಬಗ್ಗೆ ನಗರಸಭೆ ಗಮನಕ್ಕೆ ತಂದರೂ ಕ್ರಮ ಆಗಿಲ್ಲ ಎಂದು ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ಕೆ.ಎಂ. ಅಪ್ಪಣ್ಣ ಸರ್ಕಾರಿ ಜಾಗಗಳನ್ನು ಅಕ್ರಮವಾಗಿ ಒತ್ತುವರಿ ಮಾಡುತ್ತಾ ಹೋದರೆ ನಗರಸಭೆಗೆ ಜಾಗ ಹೇಗೆ ಉಳಿಯುತ್ತದೆ ? ಅನುಮತಿಗೆ ಬಂದವನಿಗೆ ಅಲೆದಾಡಿಸಲಾಗುತ್ತದೆ. ಆದರೆ ಅಕ್ರಮ ಕಟ್ಟಡ ಕೇಳುವವರೇ ಇಲ್ಲ ಎಂದರು. ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧ್ಯಕ್ಷ ಪಿ. ಕಲಾವತಿ ಹೇಳಿದರು.
ಗಾಂಧಿ ಮೈದಾನದ ಎದುರು ನಿರ್ಮಾಣ ಆಗುತ್ತಿರುವ ಕಟ್ಟಡಕ್ಕೆ ಸಂಬAಧಿಸಿದAತೆ ಆಡಳಿತ ಮತ್ತು ಪ್ರತಿಪಕ್ಷಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು. ಕಟ್ಟಡ ನಿರ್ಮಾಣಕ್ಕೆ ಆನ್‌ಲೈನ್ ಮೂಲಕವೇ ಪರವಾನಗಿ ಕೊಡಬೇಕು ಎಂದಿದ್ದರೂ ಬರವಣಿಗೆಯಲ್ಲಿ ಕೊಟ್ಟಿದ್ದು ಯಾಕೆ ? ನಗರಸಭೆ ಕಾನೂನು ಸಲಹೆಗಾರರ ಸಲಹೆಯನ್ನು ಈ ವಿಷಯದಲ್ಲಿ ಉಲ್ಲಂಘಿಸಿದ ಕಾರಣ ಏನು ಎಂದು ಪ್ರಶ್ನಿಸಿದರು. ಈ ವೇಳೆ ಮಾತನಾಡಿದ ಕೆ.ಎಸ್. ರಮೇಶ್ ಇಂಥ ಕಟ್ಟಡಗಳು ನಗರದಲ್ಲಿ ಸಾಕಷ್ಟು ಇದ್ದು ಎಲ್ಲ ಕಟ್ಟಡಗಳ ಮೇಲೂ ಕ್ರಮವಾಗಲಿ. ಪರವಾನಗಿ ರದ್ದು ಮಾಡಲಿ ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಕಲಾವತಿ ಈ ಬಗ್ಗೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ನಗರಸಭೆ ಸದಸ್ಯರು, ನಾಮನಿರ್ದೇಶಿತ ಸದಸ್ಯರು, ಸಿಬ್ಬಂದಿ ಇದ್ದರು.