ಕೊಡವ ಕೌಟುಂಬಿಕ ಹಾಕಿ ಹಬ್ಬಕ್ಕೆ ಭರದ ಸಿದ್ಧತೆ

ಚೇನಂಡ ಕಪ್ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗಾಗಿ ಸಿದ್ಧವಾಗಿರುವ ಪ್ರೇಕ್ಷಕರ ಗ್ಯಾಲರಿ
ಚೇನಂಡ ಕಪ್ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗಾಗಿ ಸಿದ್ಧವಾಗಿರುವ ಪ್ರೇಕ್ಷಕರ ಗ್ಯಾಲರಿ
Published on
ಮಡಿಕೇರಿ:
ಮತ್ತೊಂದು ಕೊಡವ ಕೌಟುಂಬಿಕ ಹಾಕಿ ಹಬ್ಬಕ್ಕೆ ಈ ವರ್ಷವೂ ಸಾಕ್ಷಿಯಾಗಲು ಹಾಕಿ ಹಬ್ ಹೆಗ್ಗಳಿಕೆಯ ನಾಪೋಕ್ಲು ಸರ್ವ ಸನ್ನದ್ಧವಾಗಿದೆ. ಚೇನಂಡ ಕುಟುಂಬದ ಆತಿಥ್ಯದಲ್ಲಿ ಆಯೋಜನೆ ಆಗಿರುವ 26ನೇ ವರ್ಷದ ಹಾಕಿ ನಮ್ಮೆಗೆ ಇಲ್ಲಿನ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕೊನೆಯ ಹಂತದ ಸಿದ್ಧತೆಗಳು ಭರದಿಂದ ಸಾಗಿದೆ. ಅಂತಾರಾಷ್ಟೀಯ ಮಟ್ಟದಲ್ಲೂ ಹೆಸರಾಗಿರುವ ಈ ಪ್ರತಿಷ್ಠಿತ ಪಂದ್ಯಾವಳಿ ಭಾನುವಾರದಿಂದ (ಏ.5) ಮೇ 2ರ ತನಕ ನಡೆಯಲಿದ್ದು, ಪ್ರಶಸ್ತಿಗಾಗಿ 383 ಕೌಟುಂಬಿಕ ತಂಡಗಳು ಸೆಣೆಸಾಡಲಿವೆ.
ಒಂದು ವರ್ಷದ ಬಿಡುವಿನ ನಂತರ ನಾಪೋಕ್ಲುವಿನಲ್ಲಿ ಮತ್ತೊಂದು ಕೊಡವ ಕೌಟುಂಬಿಕ ಪಂದ್ಯಾವಳಿ ಆಯೋಜನೆ ಆಗಿದ್ದು, ಹಾಕಿಪ್ರಿಯರು ಕ್ರೀಡಾ ಹಬ್ಬಕ್ಕಾಗಿ ಸಂಭ್ರಮದಿAದ ಎದುರು ನೋಡುತ್ತಿದ್ದಾರೆ. ಕಳೆದ ವರ್ಷ ರಜತ ಮಹೋತ್ಸವ ವರ್ಷದ ಕೊಡವ ಹಾಕಿ ಹಬ್ಬ ಮುದ್ದಂಡ ಕುಟುಂಬದ ಆತಿಥ್ಯದಲ್ಲಿ ಮಡಿಕೇರಿಯಲ್ಲಿ ನಡೆದಿತ್ತು. ಇದಕ್ಕೂ ಮೊದಲು 2017, 18, 23 ಹಾಗೂ 2024ರಲ್ಲಿ ಇಲ್ಲಿಯ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲೇ ಕೊಡವ ಕೌಟುಂಬಿಕ ಪಂದ್ಯಾವಳಿಗಳು ಸತತವಾಗಿ ನಾಲ್ಕು ವರ್ಷಗಳ ಕಾಲ ನಡೆದಿತ್ತು. ಮೊದಲ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ನಾಪೋಕ್ಲು 2033ರಲ್ಲಿ ಸಾಕ್ಷಿ ಆಗಿತ್ತು.
ಈ ವರ್ಷ ಕೋಕೇರಿ ಗ್ರಾಮದ ಚೇನಂಡ ಕುಟುಂಬದ ಆಶ್ರಯದಲ್ಲಿ ಮತ್ತೆ ನಾಪೋಕ್ಲು ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ 26ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ನಡೆಯುತ್ತಿದೆ. ಭಾನುವಾರದಿಂದ (ಏ.5) ಇಲ್ಲಿ ಪಂದ್ಯಾವಳಿ ಆರಂಭವಾಗಲಿದೆ. ಇದಕ್ಕಾಗಿ 3 ಕ್ರೀಡಾಂಗಣಗಳನ್ನು ಸಜ್ಜುಗೊಳಿಸಲಾಗಿದೆ. ಇನ್ನೂ ಒಂದು ಹೆಚ್ಚುವರಿ ಮೈದಾನ ಕೂಡ ಮಿಸಲು ಇಟ್ಟುಕೊಳ್ಳಲಾಗಿದ್ದು, ಅವಶ್ಯಕತೆ ಬಿದ್ದರೆ ಆದನ್ನೂ ಬಳಸಿಕೊಳ್ಳಲಾಗುವುದು ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ. ನಾಪೋಕ್ಲುವಿನಲ್ಲಿ ಆಗಾಗ್ಗೆ ಸುರಿಯುವ ಬೇಸಿಗೆ ಮಳೆಯ ಆತಂಕದ ಮಧ್ಯೆಯೇ ಕ್ರೀಡಾಂಗಣ, ಗ್ಯಾಲರಿ, ವೇದಿಕೆ ಸಜ್ಜಮಾಡುವ ಕೆಲಸ ಅಂತಿಮ ಹಂತ ತಲುಪಿದೆ.
ಮಹಿಳೆಯರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಸಲುವಾಗಿ ಮಹಿಳಾ ತಂಡಗಳ ನೋಂದಣಿ ಅವಧಿ ವಿಸ್ತರಿಸಲಾಗಿದೆ. 120ಕ್ಕೂ ಅಧಿಕ ಮಹಿಳಾ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆಯನ್ನು ಆಯೋಜಕರು ಇಟ್ಟುಕೊಂಡಿದ್ದಾರೆ. ಭಾರತ ಪರವಾಗಿ ಫೀಲ್ಡ್ ಹಾಕಿ ಆಡಿದ ಮೊದಲ ಕೊಡವತಿ ಪಾಂಡAಡ ಪುಷ್ಪಾ ಸುಬ್ಬಯ್ಯ ಈ ಪಂದ್ಯಾವಳಿಯ ಬಹುಮಾನದ ಪ್ರಾಯೋಜಕತ್ವ ವಹಿಸಿಕೊಂಡಿರುವುದು ವಿಶೇಷ. ಬೆಂಗಳೂರು ಲೇಕ್ ಸೈಡ್ ಹಾಕಿ ಕ್ಲಬ್ ಸದಸ್ಯರು
ಈ ಸ್ಪರ್ಧೆಯನ್ನು ನಡೆಸಿಕೊಡುತ್ತಿದ್ದಾರೆ.
ಸುಮಾರು 1 ತಿಂಗಳ ಕಾಲ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಸುಮಾರು 2 ಸಾವಿರ ಗೋಲುಗಳು ದಾಖಲಾಗುವ ನಿರೀಕ್ಷೆ ಇದೆ. ಇದಕ್ಕೆ ಪೂರಕವಾಗಿ ಗೋಲಿಗೆ ಒಂದು ಗಿಡ ಎನ್ನುವ ಪರಿಕಲ್ಪನೆ ಅಡಿಯಲ್ಲಿ ಆಯೋಜಕರು ಈಗಾಗಲೇ 2,700 ಗಿಡಗಳನ್ನು ಜಿಲ್ಲೆಯ ಅಲ್ಲಲ್ಲಿ ನಾಟಿ ಮಾಡಿದ್ದಾರೆ. ಟಿ. ಶೆಟ್ಟಿಗೇರಿ ಬಳಿ ದೇವರಕಾಡುವಿನಲ್ಲಿ 1,700 ಗಿಡ ನೆಡಲಾಗಿದೆ. ಪೊನ್ನಂಪೇಟೆ ಅರಣ್ಯ ಕಾಲೇಜು, ಗೋಣಿಕೊಪ್ಪ ಮತ್ತು ವಿರಾಜಪೇಟೆ ಕಾವೇರಿ ಕಾಲೇಜು ಎನ್‌ಎಸ್‌ಎಸ್ ಸ್ವಯಂಸೇವಕರೂ ಈ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ. ಸೋಮವಾರಪೇಟೆ ವ್ಯಾಪ್ತಿಯಲ್ಲೂ ಗಿಡಗಳನ್ನು ನೆಡಲಾಗಿದೆ.
ಹಾಕಿ ಪಂದ್ಯಾವಳಿಯ ಸಮಾರೋಪ ಸಮಾರಂಭ ಮೇ 2ರಂದು ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿz್ದÁರೆ. ಖ್ಯಾತ ಟೆನ್ನಿಸ್ ಪಟು ಪದ್ಮಶ್ರೀ ಪುರಸ್ಕೃತ ಕೋಕೇರಿ ಗ್ರಾಮದ ಮಚ್ಚಂಡ ರೋಹನ್ ಬೋಪಣ್ಣ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಗುತ್ತದೆ. ಹಾಕಿ ಉತ್ಸವ ಕೇವಲ ಹಾಕಿ ಪಂದ್ಯಾಟಕ್ಕೆ ಸೀಮಿತವಾಗಿರದೆ ಮ್ಯಾರಥಾನ್, ರಿಲೇ ಹಾಗೂ ಇತರ ಕ್ರೀಡೆಗಳನ್ನು ಕೂಡ ಆಯೋಜಿಸಲು ಆಯೋಜರು ಚಿಂತನೆ ನಡೆಸಿದ್ದಾರೆ. ಕುಂಡ್ಯೋಳAಡ ಕುಟುಂಬಸ್ಥರು ಕೊಡವ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ನಡೆಸಿದ್ದ ಆಟ್ ಪಾಟ್ ಪಡಿಪು ಕಾರ್ಯಕ್ರಮವನ್ನು ಮುಂದುವರೆಸಿಕೊAಡು ಹೋಗಲಾಗುತ್ತಿದೆ. ಜನವರಿ ಮೊದಲ ವಾರದಲ್ಲಿ ಇದೇ ಪ್ರಥಮ ಬಾರಿಗೆ ಕೊಡಗಿನ ಎ¯್ಲÁ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರಿಗೆ ಮೂರ್ನಾಡು ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಹಾಕಿ ಪಂದ್ಯಾಟವನ್ನು ಆಯೋಜನೆ ಮಾಡಲಾಗಿತ್ತು. ಇದರಲ್ಲಿ 10 ರಿಂದ 15 ವರ್ಷದೊಳಗಿನ 24 ಉತ್ತಮ ಹಾಕಿಪಟುಗಳನ್ನು ಆಯ್ಕೆ ಮಾಡಲಾಗಿದೆ. ಇವರಿಗೆ ಒಂದು ತಿಂಗಳ ಕಾಲ ನಾಪೋಕ್ಲುವಿನಲ್ಲಿ ನುರಿತ ಹಾಕಿ ಪಟುಗಳಿಂದ ತರಬೇತಿ ನೀಡಲಾಗುವುದು.
"

ಬಹುನಿರೀಕ್ಷಿತ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಈ ಬಾರಿ ಚೇನಂಡ ಕುಟುಂಬದ ಆತಿಥ್ಯದಲ್ಲಿ ನಾಪೋಕ್ಲುವಿನಲ್ಲಿ ಭಾನುವಾರದಿಂದ ಆರಂಭವಾಗಲಿದೆ. ಇದು ನಾಪೋಕ್ಲುವಿನಲ್ಲಿ ಆಯೋಜನೆ ಆಗುತ್ತಿರುವ 6ನೇ ಕೌಟುಂಬಿಕ ಪಂದ್ಯಾವಳಿ. ಇದರ ಯಶಸ್ಸಿಗಾಗಿ ಆತಿಥೇಯ ಚೇನಂಡ ಕುಟುಂಬಸ್ಥರು ಕಳೆದ 2 ವರ್ಷಗಳಿಂದ ಶ್ರಮ ಪಡುತ್ತಿದ್ದಾರೆ. ಪಂದ್ಯಾವಳಿಯ ವಿಜೇತ ತಂಡಕ್ಕೆ 1 ಕೆಜಿ ತೂಕದ ಬೆಳ್ಳಿಯ ರೋಲಿಂಗ್ ಟ್ರೋಫಿ ಸಿಗಲಿದೆ. ಇದರ ಜತೆಗೆ ನಗದು ಬಹುಮಾನಗಳು, ವ್ಯಯಕ್ತಿಕ ಬಹುಮಾನಗಳನ್ನೂ ಕೊಡಲಾಗುತ್ತಿದೆ.

"

ಈ ಬಾರಿಯ ಪಂದ್ಯಾವಳಿಗೆ ಒಟ್ಟು 383 ಕೌಟುಂಬಿಕ ತಂಡಗಳು ಹೆಸರು ನೋಂದಾಯಿಸಿಕೊAಡಿವೆ. ಈ ಪಂದ್ಯಾವಳಿಗಾಗಿ ಮೂರು ಮೈದಾನಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಅವಶ್ಯಕತೆ ಬಿದ್ದರೆ ನಾಲ್ಕನೇ ಮೈದಾನವನ್ನೂ ಬಳಸಿಕೊಳ್ಳಲು ಸಜ್ಜಾಗಿ ಇಡಲಾಗಿದೆ. ಈ ಬಾರಿ ಪ್ರೇಕ್ಷಕರ ಗ್ಯಾಲರಿ ವಿಸ್ತರಿಸಲಾಗಿದೆ. ಸುಮಾರು 20 ಸಾವಿರಕ್ಕಿಂತಲೂ ಹೆಚ್ಚಿನ ಜನರು ಏಕಕಾಲದಲ್ಲಿ ಪಂದ್ಯ ವೀಕ್ಷಿಸಬಹುದಾಗಿದೆ. ಹಾಕಿ ಜತೆಗೆ ಬೇರೆ ಬೇರೆ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. 100*4 ರಿಲೇ ನಡೆಸುವ ಚಿಂತನೆಯೂ ಇದೆ.

"

ಈ ಬಾರಿಯ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ಪಂದ್ಯ ಪ್ರಮುಖ ಆಕರ್ಷಣೆ ಆಗಿದೆ. ಬೆಂಗಳೂರು ಜೈನ್ ಕಾಲೇಜು ತಂಡ ಮತ್ತು ಎಂಇಜಿ ತಂಡ ಮಧ್ಯೆ ಒಂದು ಪಂದ್ಯ ಹಾಗೂ ಟೀಂ ಯುಎಇ ಮತ್ತು ತಾಮನೆ 11 ಮಧ್ಯೆ ಇನ್ನೊಂದು ಪಂದ್ಯ ನಡೆಯಲಿದೆ. ಮುಖ್ಯಮಂತ್ರಿ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಪಂದ್ಯಾವಳಿ ಉದ್ಘಾಟಿಸಲಿದ್ದು, ಸಂಸದ ಯದುವೀರ್, ಶಾಸಕರಾದ ಡಾ. ಮಂತರ್ ಗೌಡ, ಸುಜಾ ಕುಶಾಲಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net