ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಸುಮಾರು 10-15 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಭವ್ಯವಾದ ಬಂಟರ ಭವನ ನಿರ್ಮಾಣ ಕಾರ್ಯಕ್ಕೆ ಸದ್ಯದಲ್ಲೇ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಬಿ.ಡಿ. ಜಗದೀಶ್ ರೈ ತಿಳಿಸಿದ್ದಾರೆ. ನಗರದ ಅಬ್ಬಿಫಾಲ್ಸ್ ರಸ್ತೆಯಲ್ಲಿ ಜನಾಂಗದ ದಾನಿ ಡಾ. ಪ್ರೇಂನಾಥ್ ಪೂಂಜಾ ದಾನ ನೀಡಿರುವ 52 ಸೆಂಟ್ ಜಾಗದಲ್ಲಿ ಬಂಟರ ಭವನ ನಿರ್ಮಾಣ ಆಗಲಿದೆ. ಇದಕ್ಕೆ ಸಮಾಜದ ಸದಸ್ಯರು ಮತ್ತು ಸರ್ಕಾರದಿಂದ ಅನುದಾನದ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮುದಾಯ ಒಗ್ಗಟ್ಟಿನಿಂದ ಬದುಕಬೇಕು ಎನ್ನುವ ಹಿರಿಯರ ಮಹಾದಾಸೆಯಂತೆ ರಚನೆಯಾದ ಕೊಡಗು ಜಿಲ್ಲಾ ಬಂಟರ ಸಂಘ ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದೆ. ಕಳೆದ ಮೂರು ವರ್ಷಗಳಿಂದ ಸಂಘದ ಚಟುವಟಿಕೆಗಳಿಗೆ ವೇಗ ನೀಡಲಾಗಿದೆ. ಬಂಟರ ಭವನ ನಿರ್ಮಾಣ ಮಾತ್ರವಲ್ಲದೆ ಸಮುದಾಯಕ್ಕೆ ಸೇರಿದ ಸ್ಮಶಾನವನ್ನು ಶಾಸಕರ ಅನುದಾನದ ಸಹಾಯದಿಂದ ನವೀಕರಿಸಲು ಯೋಜನೆ ರೂಪಿಸಲಾಗಿದೆ. ಇದೇ ರೀತಿ ಆಯಾ ಸÀಂದಭÀðಕ್ಕೆ ಅನುಗುಣವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗಿದೆ.
ಮುಂದಿನ ಸಮಿತಿ ರಚನೆ, ಭವಿಷ್ಯದ ಕಾರ್ಯಕ್ರಮಗಳ ಚರ್ಚೆಗಾಗಿ ಸಂಘದ ಸರ್ವಸದಸ್ಯರ ಮಹಾಸಭೆಯನ್ನು ಮುಂದಿನ ಭಾನುವಾರ (ಜ.11) ಮಡಿಕೇರಿಯ ಹೊಟೇಲ್ ಸಮುದ್ರದಲ್ಲಿ ಕರೆಯಲಾಗಿದೆ. ಬೆಳಗ್ಗೆ 11 ಗಂಟೆಗೆ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸಂಘದ ಕಾರ್ಯದರ್ಶಿ ವಿ. ರವೀಂದ್ರ ರೈ, ಉಪಾಧ್ಯಕ್ಷ ಸದಾಶಿವ ರೈ, ಖಜಾಂಚಿ ರತ್ನಾಕರ ರೈ, ಗೌರವಾಧ್ಯಕ್ಷ ಐತಪ್ಪ ರೈ ಹಾಗೂ