ಉರೂಸ್ ಸಮಾರಂಭದ ಪೋಸ್ಟರ್ ಬಿಡುಗಡೆ

ಚೆರಿಯಪರಂಬು ದರ್ಗಾದ ವಾರ್ಷಿಕ ಮಖಾಂ ಉರೂಸ್ ಸಮಾರಂಭದ  ಪೋಸ್ಟರ್ ಅನ್ನು ರಫೀಕ್ ಸಖಾಫಿ  ಬಿಡುಗಡೆಗೊಳಿಸಿದರು.
ಚೆರಿಯಪರಂಬು ದರ್ಗಾದ ವಾರ್ಷಿಕ ಮಖಾಂ ಉರೂಸ್ ಸಮಾರಂಭದ ಪೋಸ್ಟರ್ ಅನ್ನು ರಫೀಕ್ ಸಖಾಫಿ ಬಿಡುಗಡೆಗೊಳಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಫೆ.6 ರಿಂದ 10 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ
ನಾಪೋಕ್ಲು: ಸಮೀಪದ ಚೆರಿಯಪರಂಬು ದರ್ಗಾದ ವಾರ್ಷಿಕ ಮಖಾಂ ಉರೂಸ್ ಸಮಾರಂಭದ ಪೋಸ್ಟರನ್ನು ಬಿಡುಗಡೆಗೊಳಸಲಾಯಿತು.
ಫೆ.6 ರಿಂದ 10 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಉರೂಸ್ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಜುಮಾ ನಮಾಜಿನ ಬಳಿಕ ಜುಮಾ ಮಸೀದಿ ಆವರಣದಲ್ಲಿ ಆಯೋಜಿಸಲಾದ ಸರಳ ಸಮಾರಂಭದಲ್ಲಿ ಮಸೀದಿಯ ಸಹಾಯಕ ಖತೀಬರಾದ ರಫೀಕ್ ಸಖಾಫಿ ಅವರು ಉರೂಸ್ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಚೆರಿಯಪರಂಬು ಜಮಾಯತಿನ ಹಾಲಿ ಹಾಗೂ ಮಾಜಿ ಅಧ್ಯಕ್ಷರು ಪದಾಧಿಕಾರಿಗಳು, ಸದಸ್ಯರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net